ಅವಳ ನಂದಿತಾ, ಅವನು ಅದಿತ್ಯ. ಇಬ್ಬರೂ ಸ್ನೇಹಿತರಾಗಿದ್ದರು ನಗುತ್ತಾ, ಜಗಳವಾಡುತ್ತಾ, ಕನಸುಗಳನ್ನು ಹಂಚಿಕೊಳ್ಳುತ್ತಾ ಬೆಳೆದ ಗೆಳೆತನ. ಒಂದು ದಿನ...ಆದಿತ್ಯ ತನ್ನ ಮನಸ್ಸಿನ ಮಾತನ್ನು ಹೇಳಿಬಿಟ್ಟ. "ನಿನ್ನನ್ನು ಸ್ನೇಹಿತಳಾಗಿ ಮಾತ್ರ ನೋಡಲಾಗುತ್ತಿಲ್ಲ... ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ.' 'ನಂದಿತಾ ಕೆಲ ಕ್ಷಣ ಮೌನವಾಗಿದ್ದಳು. ನಂತರ ನಿಧಾನವಾಗಿ ಹೇಳಿದಳು..."ನಾನು ನಿನ್ನನ್ನು ಸ್ನೇಹಿತನಾಗಿ ಮಾತ್ರ ನೋಡಿದ್ದೆ. 'ಆ ಒಂದು ಮಾತು... ಇಬ್ಬರ ನಡುವಿನ ದೂರವನ್ನು ಹೆಚ್ಚಿಸಿತು. ಅವಳು ದೂರವಾದಳು. ಸಂದೇಶಗಳು ನಿಂತವು. ಕರೆಗಳು ಮೊಳಗಲೇಇಲ್ಲ. ಹುಟ್ಟುಹಬ್ಬದ ಶುಭಾಶಯಗಳೂ ವಿನಿಮಯವಾಗಲೇ ಇಲ್ಲ. ಆದಿತ್ಯನಿಗೆ ಹೆಚ್ಚು ನೋವಾದದ್ದು ಪ್ರೀತಿ ಸಿಗದಿದ್ದದ್ದಕ್ಕಲ್ಲ... ಒಳ್ಳೆಯ ಗೆಳತಿಯನ್ನು ಕಳೆದುಕೊಂಡದ್ದಕ್ಕೆ.. ತಿಂಗಳುಗಳು ಕಳೆದವು. ಒಂದು ದಿನ ಅವನು ತನ್ನ ಡೈರಿಯಲ್ಲಿ ಬರೆದಿದ್ದ... "ಪ್ರೀತಿ ಸಿಗಲಿಲ್ಲ ಎಂದು ಜೀವನ ನಿಲ್ಲುವುದಿಲ್ಲ. ಆದರೆ ಪ್ರೀತಿಯ ಹೆಸರಿನಲ್ಲಿ ಒಳ್ಳೆಯ ಗೆಳೆತನವನ್ನು ಕಳೆದುಕೊಳ್ಳಬಾರದು. ಯಾರಾದರೂ ನಮ್ಮನ್ನು ಪ್ರೀತಿಸದಿದ್ದರೆ ಅದು ಅವರ ಹಕ್ಕು. ಆದರೆ ಅವರ ನೆನಪನ್ನು ದ್ವೇಷವಾಗಿ ಬದಲಾಯಿಸುವುದು ನಮ್ಮ ತಪ್ಪು. ಕೆಲವು ಸಂಬಂಧಗಳು ಪ್ರೀತಿಯಾಗಿ ಗೆಲ್ಲುವುದಿಲ್ಲ...ಒಳ್ಳೆಯ ನೆನಪಾಗಿ ಬದುಕುತ್ತವೆ. ''ಆ ದಿನದಿಂದ ಅದಿತ್ಯ ಒಂದು ನಿರ್ಧಾರ ಮಾಡಿದ. ಅವಳನ್ನು ಹಿಂದಿರುಗಿ ಬೇಡಲಿಲ್ಲ. ದ್ವೇಷಿಸಲಿಲ್ಲ ತನ್ನ ಬದುಕನ್ನು ಮಾತ್ರ ಪ್ರೀತಿಸಲು ಕಲಿತ. ಪ್ರೀತಿ ವಿಫಲವಾದರೆ ಜೀವನ ಮುಗಿಯುವುದಿಲ್ಲ. ನಿಜವಾದ ಗೆಳೆತನ ಮುರಿದರೆ ನೋವಾಗುತ್ತದೆ. ಆದರೂ ಬದುಕು ಮುಂದುವರಿಯಲೇಬೇಕು. ಏಕೆಂದರೆ ನಮ್ಮನ್ನು ಬಿಟ್ಟು ಹೋದ ಒಬ್ಬ ವ್ಯಕ್ತಿಗಿಂತ, ನಮ್ಮನ್ನು ಕಾಯುತ್ತಿರುವ ಜೀವನ ದೊಡ್ಡದು."
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!