ಒಂದು ಪುಟ್ಟ ಹಳ್ಳಿಯಲ್ಲಿ ಅವನು ಬದುಕುತ್ತಿದ್ದ. ಅವನಿಗೆ ಜೀವನದಲ್ಲಿ ಅನೇಕ ನೋವುಗಳಿದ್ದವು, ನಂಬಿಕೆ ಇಟ್ಟಿದ್ದವರು ಮೋಸ ಮಾಡಿದರು, ಮಾತು ಕೊಟ್ಟವರು ದಾರಿ ತಪ್ಪಿಸಿದರು. ಆ ದಿನದಿಂದ ಅನು ಒಂಟಿಯಾಗಿಬಿಟ್ಟ.ಆದರೂ ಅವನು ನಂಬಿಕೆಯನ್ನು ಬಿಡಲಿಲ್ಲ. “ಭಗವಂತ ಇದ್ದಾನೆ... ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ಪ್ರತಿದಿನ ಹೇಳಿಕೊಳ್ಳುತ್ತಿದ್ದ. ಕೆಲವೊಮ್ಮೆ ಹೊಟ್ಟೆಗೆ ಊಟವೂ ಇಲ್ಲದ ದಿನಗಳು ಬಂದವು. ಉಪವಾಸದಲ್ಲೇ ದಿನ ಕಳೆಯುತ್ತಿದ್ದರೂ ಅವನ ಮನಸ್ಸಿನಲ್ಲಿ ಭರವಸೆ ಮಾತ್ರ ಕಡಿಮೆಯಾಗಲಿಲ್ಲ.
“ನಾನು ಕಾಯುತ್ತೇನೆ... ಭಗವಂತ ನನ್ನನ್ನು ಮರೆಯುವುದಿಲ್ಲ” ಎಂದವನು ಪ್ರತಿದಿನ ಪ್ರಾರ್ಥಿಸುತ್ತಿದ್ದ. ದಿನಗಳು ಕಳೆಯುತ್ತಾ ಹೋದವು. ಅವನಿಗೆ ಕಷ್ಟ ಕೊಟ್ಟಿದ್ದ ಪರಿಸ್ಥಿತಿಗಳು ನಿಧಾನವಾಗಿ ಸರಿಯಾಗತೊಡಗಿದವು. ಅವನಿಗೆ ಸಹಾಯ ಮಾಡುವವರು ಬಂದರು. ಅವನು ಕಳೆದುಕೊಂಡಿದ್ದ ಸಂತೋಷ ಮತ್ತೆ ಅವನ ಬದುಕಿಗೆ ಮರಳಿ ಬಂತು. ಅವನು ಮೊದಲ ಬಾರಿಗೆ ನಿಜವಾದ ನಗುವನ್ನು ಕಂಡ ತನ್ನ ಮುಖದಲ್ಲಿ. ಇಷ್ಟು ದಿನನೋವಿಗೆ ಸುರಿದ ಕಣ್ಣೀರು ನಗುವಿನಜೊತೆ ಬಂತು. ಅವನು ಮನಸ್ಸಿನಲ್ಲಿ ಹೇಳಿಕೊಂಡ: “ಕಾದರೆ ಮಾತ್ರ ಬೇಕಾದ್ದು ಸಿಗುತ್ತೆ.”
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!