ಮನೆ ಮೌನವಾಗಿತ್ತು ರಾಜಣ್ಣನ ಶವಯಾತ್ರೆ ಮನೆಯಿಂದ ಹೊರಟಿತು. ಮುಂದೆ ನಾಲ್ಕು ಜನ... ಹಿಂದೆ ಊರೇ ಇತ್ತು. ಧೈರ್ಯವಾಗಿರಿ..."ನಾವು ಇದ್ದೇವೆ...” “ದುಃಖಿಸಬೇಡಿ ಎಂದು ಎಲ್ಲರೂ ಸಾಂತ್ವನ ಹೇಳಿದರು. ಮಸಣ ತಲುಪಿತು. ಕೊನೆಯ ವಿಧಿಗಳು ಮುಗಿದವು. ಚಿತೆ ಉರಿಯಿತು. ಸ್ವಲ್ಪ ಹೊತ್ತಿನ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟರು. ಮರುದಿನ ಬೆಳಗ್ಗೆ... ಊರು ಎಂದಿನಂತೆ ಎದ್ದಿತು. ಅಂಗಡಿಗಳು ತೆರೆದವು. ಮಕ್ಕಳು ಶಾಲೆಗೆ ಹೋದರು. ಜನರು ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿದರು. ಆದರೆ ರಾಮಣ್ಣನ ಮನೆಯಲ್ಲಿ ಮಾತ್ರ...ಒಂದು ಕುರ್ಚಿ ಖಾಲಿಯಾಗಿತ್ತು. ನಿನ್ನೆ “ನಾವು ಇದ್ದೇವೆ” ಎಂದಿದ್ದ ... ಊರು ತನ್ನ ಬದುಕನ್ನು ಮುಂದುವರಿಸಿತು. ಆದರೆ ರಾಮಣ್ಣ ಮಾತ್ರ ಇರಲಿಲ್ಲ. ಮನೆ ಮಾತ್ರ...ಆ ದಿನದಿಂದ ಮೌನವಾಗಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ