ನಾನು... ತ್ರಿಶಾ.ಇಂದು ನನ್ನ ವಯಸ್ಸು 28.ನನ್ನೊಳಗೆ ಸಾವಿರಾರು ಕನಸುಗಳಿವೆ ಲಕ್ಷಾಂತರ ನೆನಪುಗಳಿವೆ, ಗೆಲುವಿನ ಕ್ಷಣಗಳಿವೆ...ಸೋಲಿನ ನೋವುಗಳಿವೆ. ಮತ್ತೆ ಮತ್ತೆ ಎದ್ದು ನಿಂತ ಧೈರ್ಯವಿದೆ.ನನ್ನ ಪಯಣ ಸುಲಭವಾಗಿರಲಿಲ್ಲ. ಒಂದು ಸಣ್ಣ ಹೆಜ್ಜೆಯಿಂದ ಆರಂಭವಾದ ನಾನು, ಇಂದು ಅನೇಕ ವಿದ್ಯಾರ್ಥಿಗಳ ಕನಸುಗಳಿಗೆ ದಾರಿಯಾಗಿದ್ದೇನೆ. ಕೆಲವೊಮ್ಮೆ ನಾನು ಮೇಲೇರಿದ್ದೇನೆ.ಕೆಲವೊಮ್ಮೆ ಪರಿಸ್ಥಿತಿಗಳು ನನ್ನನ್ನು ಕೆಳಕ್ಕೆಳೆದಿವೆ.ಆದರೆ...ನಾನು ಬಿದ್ದಾಗಲೆಲ್ಲಾ "ಇಷ್ಟೇ ನನ್ನ ಕಥೆ" ಎಂದು ನಿಲ್ಲಲಿಲ್ಲ. ಪ್ರತಿ ಬಾರಿ ನನ್ನ ತಪ್ಪುಗಳಿಂದ ಕಲಿತಿ ಪ್ರತಿ ಬಾರಿ ಹೊಸ ಶಕ್ತಿಯೊಂದಿಗೆ ಎದ್ದು ನಿಂತೆ ಬಿದ್ದದ್ದು ನನ್ನ ಅಂತ್ಯವಾಗಲಿಲ್ಲ. ಎದ್ದು ನಿಂತದ್ದು ನನ್ನ ಹೊಸ ಆರಂಭವಾಯಿತು. ಕಾಲ ಬದಲಾಯಿತು. ಹೊಸ ಹೊಸ ಕನಸುಗಳು ಹುಟ್ಟಿದವು. ಹೊಸ ಹೊಸ ಅವಕಾಶಗಳು ಬಂದವು ಒಂದೊಂದಾಗಿ ಹೊಸ ಶಿಕ್ಷಣ ಸಂಸ್ಥೆಗಳು ನನ್ನ ಕುಟುಂಬಕ್ಕೆ ಸೇರಿದವು. ಹೊಸ ಕಾಲೇಜುಗಳು, ಹೊಸ ಕ್ಯಾಂಪಸ್ಗಳು, ಹೊಸ ವಿಭಾಗಗಳು...ಪ್ರತಿ ಹೊಸ ಹೆಜ್ಜೆಯ ಹಿಂದೆಯೂ ಒಂದೇ ಉದ್ದೇಶ-ಒಬ್ಬ ವಿದ್ಯಾರ್ಥಿಯ ಭವಿಷ್ಯವಾದರೂ ಉತ್ತಮವಾಗಬೇಕು." ವಿದ್ಯಾರ್ಥಿಗಳಿಗೆ ದೇಶ-ವಿದೇಶದ ಹೊಸ ದಾರಿಗಳುಕಾಣಿಸಿದವು ನನ್ನ ಕಟ್ಟಡಗಳು ದೊಡ್ಡದಾಗಿರಬಹುದು...ಆದರೆ ನನ್ನ ನಿಜವಾದ ಬೆಳವಣಿಗೆ ನನ್ನ ಕಟ್ಟಡಗಳ ಎತ್ತರದಲ್ಲಿ ಇಲ್ಲ.ನನ್ನಿಂದ ಹೊರಟು ತಮ್ಮ ಕನಸುಗಳನ್ನು ನನಸಾಗಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿದೆ.
ಒಬ್ಬ ವಿದ್ಯಾರ್ಥಿ ತನ್ನ ಮೊದಲ ಹೆಜ್ಜೆ ಇಟ್ಟಾಗ, ಅವನ ಕಣ್ಣಿನಲ್ಲಿ ನಾನು ಕನನನ್ನು ನೋಡುತ್ತೇನೆ.ಅವನು ಯಶಸ್ವಿಯಾದಾಗ, ಅವನ ನಗುವಿನಲ್ಲಿ ನನ್ನ ಗೆಲುವನ್ನು ನೋಡುತ್ತೇನೆ. ಅವನು ಜೀವನದಲ್ಲಿ ಎತ್ತರಕ್ಕೆ ಹೋದಾಗ, ನಾನು ಹೆಮ್ಮೆಯಿಂದ ಹೇಳುತ್ತೇನೆ- "ಅವನು ನನ್ನ ವಿದ್ಯಾರ್ಥಿ."28 ವರ್ಷಗಳಲ್ಲಿ ನಾನು ಬಹಳಷ್ಟು ಕಂಡಿದ್ದೇನೆ. ಬದಲಾದ ಕಾಲವನ್ನು ಕಂಡಿದ್ದೇನೆ.ಬದಲಾದ ಶಿಕ್ಷಣವನ್ನು ಕಂಡಿದ್ದೇನೆ ಬದಲಾದ ತಂತ್ರಜ್ಞಾನವನ್ನು ಕಂಡಿದ್ದೇನೆ. ಆದರೆ ನನ್ನ ಒಂದು ಕನಸು ಮಾತ್ರ ಬದಲಾಗಿಲ್ಲ...ಪ್ರತಿ ಮಗುವಿಗೂ ಉತ್ತಮ ಶಿಕ್ಷಣ. ಪ್ರತಿ ವಿದ್ಯಾರ್ಥಿಗೂ ಉತ್ತಮ ಭವಿಷ್ಯ ನನ್ನ ಈ ಪಯಣದಲ್ಲಿ ನಾನು ಒಬ್ಬನೇ ಇರಲಿಲ್ಲ.
ನನ್ನ ಮೇಲೆ ನಂಬಿಕೆ ಇಟ್ಟ ನಾಯಕತ್ವವಿತ್ತು.ನನ್ನನ್ನು ಕಟ್ಟಿದ ಶಿಕ್ಷಕರಿದ್ದರು.ನನ್ನನ್ನು ಬೆಳೆಸಿದ ಸಿಬ್ಬಂದಿಯಿದ್ದರು.ನನ್ನನ್ನು ನಂಬಿದ ಪೋಷಕರಿದ್ದರು. ಮತ್ತು...ನನ್ನ ಕಥೆಗೆ ಅರ್ಥ ಕೊಟ್ಟವರು-ನನ್ನ ವಿದ್ಯಾರ್ಥಿಗಳು ಅವರ ಕನಸುಗಳೇ ನನ್ನ ಕನಸುಗಳು ಅವರ ಯಶಸ್ಸೇ ನನ್ನ ಯಶಸ್ಸು. ಇಂದು 28 ವರ್ಷಗಳ ನಂತರ ನಾನು ಹಿಂದಿರುಗಿ ನೋಡಿದಾಗ ನನಗೆ ದಾರಿಯಲ್ಲಿ ಬಿದ್ದ ಕಲ್ಲುಗಳು ಕಾಣುವುದಿಲ್ಲ. ಅವುಗಳ ಮೇಲೆ ಇಟ್ಟುಕೊಂಡು ನಾನು ಏರಿದ ಹೆಜ್ಜೆಗಳು ಕಾಣುತ್ತವೆ ನನಗೆ ಸೋಲುಗಳು ಕಾಣುವುದಿಲ್ಲ. ಅವುಗಳಿಂದ ಕಲಿತ ಪಾಠಗಳು ಕಾಣುತ್ತವೆ. ನನಗೆ ಕಳೆದ 28 ವರ್ಷಗಳು ಮಾತ್ರ ಕಾಣುವುದಿಲ್ಲ. ಮುಂದಿನ ನೂರಾರು ಕನಸುಗಳ ದಾರಿ ಕಾಣುತ್ತದೆ.ಹೌದು...ನಾನು ತ್ರಿಶಾ 28 ವರ್ಷಗಳ ಹಿಂದೆ ಆರಂಭವಾದ ಒಂದು ಕನಸು..
ಇಂದು ಸಾವಿರಾರು ಕನಸುಗಳಿಗೆ ದಾರಿಯಾಗಿರುವ ಒಂದು ಪಯಣ. ನನ್ನ ಅತ್ಯುತ್ತಮ ಅಧ್ಯಾಯಗಳು. ಇನ್ನೂ ಬರೆಯಬೇಕಿದೆ. ನೀವೆಲ್ಲರೂ ಜೊತೆಯಿರಬೇಕೆಂಬ ಆಸೆಯಷ್ಟೇ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!