ರಮೇಶ್ಗೆ ಬಾಲ್ಯದಿಂದಲೂ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ.ಒಂದು ದಿನ ಅವನಿಗೆ ಪ್ರಸಿದ್ಧ ರಿಯಾಲಿಟಿ ಶೋನ ಆಡಿಷನ್ಗೆ ಕರೆ ಬಂತು.ಅವನು ಖುಷಿಯಿಂದ ಹೋದ. ಜಡ್ಜ್ ಕೇಳಿದರು: "ನಿನ್ನ ಪ್ರತಿಭೆ ಏನು?"ಸಾರ್, ನಾನು ತುಂಬಾ ಚೆನ್ನಾಗಿ ಅಭಿನಯ ಮಾಡ್ತೀನಿ." "ಸರಿ... ಮೊದಲು ಒಂದು challenge ಇದೆ. ತಲೆ ಬೋಳಿಸಬೇಕು. ನಂತರ ವಿಚಿತ್ರ ವೇಷ ಹಾಕಿಕೊಂಡು stage ಮೇಲೆ ಬರಬೇಕು. ಮಾಡ್ತೀಯಾ?"ರಮೇಶ್ ಕ್ಷಣಕಾಲ ಮೌನವಾಗಿದ್ದ.ಸಾರ್... ನನ್ನ ಪ್ರತಿಭೆ ನೋಡಬೇಕಲ್ಲ?
ಜಡ್ಜ್ ನಕ್ಕು ಇಲ್ಲಿ ಪ್ರತಿಭೆಗಿಂತ entertainment ಮುಖ್ಯ"
ರಮೇಶ್ ಹೇಗೋ challenge ಒಪ್ಪಿಕೊಂಡ.ಅಷ್ಟರಲ್ಲಿ ಒಬ್ಬ ಪ್ರಸಿದ್ದ ಸಿನಿಮಾ ನಟ ಒಳಗೆ ಬಂದ. ಜಡ್ಜ್ ತಕ್ಷಣ ಎದ್ದು, Welcome sir! ನಿಮಗೆ ಯಾವುದೇ challenge ಬೇಡ. ನೀವು ನೇರವಾಗಿ ಮುಂದಿನ round!"
ರಮೇಶ್ ಆಶ್ಚರ್ಯದಿಂದ ಕೇಳಿದ: "ಸಾರ್... ನನಗೆ ಅವಕಾಶ ಬೇಕು ಅಂತ ನನ್ನ ಗೌರವವನ್ನೇ ಬದಲಿಸಿಕೊಳ್ಳಬೇಕು. ಅವರಿಗೆ ಅವಕಾಶ ಬೇಕು ಅಂತ ಏನೂ ಮಾಡಬೇಕಾಗಿಲ್ಲವೇ?"
ಜಡ್ಜ್ ಮೌನ ತಾಳಿದರು.ಸಾರ್, ನನಗೆ ಟಿವಿಯಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ... ಆದರೆ ನನ್ನ ಪ್ರತಿಭೆ ಕಾಣಿಸಿಕೊಳ್ಳಬೇಕು, ನನ್ನ ಅವಮಾನವಲ್ಲ.” ಎಂದು ಹೊರಟುಹೋದ. ಅಂತಹ ಕಾರ್ಯಕ್ರಮಕ್ಕೆ ಜನ ಈಗಲು ತಮಗೊಂದು ಅವಕಾಶ ಸಿಗಬಹುದು ಅಂತ ಕಾಯುತ್ತಿದ್ದಾರೆ.ಅವರ ಗೌರವವನ್ನು ಬದಿಗೊತ್ತಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!