ಪ್ರೀತಿ ಎಂದರೆ ಇದೇ ಇರಬೇಕು, ವಯಸ್ಸಾಗಿದೆ, ಬದುಕು ಅವರಿಂದ ಬಹಳಷ್ಟನ್ನು ಕಸಿದುಕೊಂಡಿದೆ. ಆದರೂ, ಬದುಕನ್ನೇ ನಂಬಿಕೊಂಡು ಜೊತೆಯಾಗಿ ಬಂದವರು ಈಗ ಒಬ್ಬರನ್ನೊಬ್ಬರು ಬಿಟ್ಟು ಹೋಗುವವರಲ್ಲ. ಕಿಸೆಯಲ್ಲಿ ಬೇಕಾದಷ್ಟು ದುಡ್ಡಿಲ್ಲದಿರಬಹುದು ಆದರೆ ಮನಸ್ಸಿನಲ್ಲಿ ಒಬ್ಬರಿಗೊಬ್ಬರು ಕೊಡಬಹುದಾದಷ್ಟು ಪ್ರೀತಿಯಿದೆ.ನಿಲ್ಲುವುದಕ್ಕೆ ಸರಿಯಾದ ಸೂರು ಇಲ್ಲದಿರಬಹುದು, ಅದರೂ ನೆರಳಿನಲ್ಲಾದರೂ ಪಕ್ಕಪಕ್ಕನೆ ಕುಳಿತುಕೊಳ್ಳುತ್ತಾರೆ. ಆಕೆಯ ದೇಹ ಇನ್ನು ಆಕೆಯ ಮಾತು ಕೇಳದಾಗ, ಆತ ಆಕೆಯ ಕಾಲುಗಳಿಗೆ ತನ್ನ ಕೈಯಾಗುತ್ತಾನೆ.ಆಕೆಗೆ ಆಸರೆಯಾಗುತ್ತಾನೆ. ಜತನವಾಗಿ ಕಾಪಾಡಿಕೊಳ್ಳುತ್ತಾನೆ. ಯಾಕೆಂದರೆ ನಂಬಿಕೆ ಇಟ್ಟು ತನ್ನ ಜೊತೆ ಬದುಕಲು ಬಂದವಳು ಅವಳು. ಅವರು ಬದುಕನ್ನು ಯಾವತ್ತೂ ದ್ವೇಷಿಸಲಿಲ್ಲ. ಹಸಿವಿನ ಬಗ್ಗೆ ದೂರಲಿಲ್ಲ. ಕಷ್ಟ ಬಂದಾಗ ತೊರೆಯಲಿಲ್ಲ. ಸಿಕ್ಕಿದ್ದನ್ನೆಲ್ಲಅನುಭವಿಸಿಕೊಂಡು, ಇಂದಿಗೂ ಜೊತೆಯಾಗಿ ಬದುಕು ಸಾಗಿಸುತ್ತಿದ್ದಾರೆ. ಒಂದಲ್ಲ ಒಂದು ದಿನ ಈ ಬದುಕುಮುಗಿಯುತ್ತದೆ ಎಂಬುದು ಅವರಿಗೆ ಗೊತ್ತಿದೆ. ಆದರೆ ಆ ದಿನ ಬರುವವರೆಗೂ ಪ್ರೀತಿಸಬೇಕು, ಒಬ್ಬರಿಗೊಬ್ಬರು ಆಸರೆಯಾಗ ಬೇಕು, ಜೊತೆಯಾಗಿ ಬದುಕಬೇಕು ಅನ್ನುವ ಆಸೆ ಮಾತ್ರ ಅವರಲ್ಲಿದೆ. ಇವರ ಬದುಕನ್ನು ನೋಡಿದಾಗ ಕೋರ್ಟ್‌ ಮುಂದೆ ವಿಚ್ಛೇದನದ ಕೇಸಿಗಾಗಿ ಸಾಲಿನಲ್ಲಿ ನಿಂತಿರುವ ಎಷ್ಟೋ ಯುವ ಮನಸ್ಸುಗಳಿಗೆ ಇದು ಚಪ್ಪಲಿಯಿಂದ ಹೊಡೆದಂತೆಯೇ ಅನಿಸಿತು. ಪ್ರೀತಿ ಅಂದರೆ ದೊಡ್ಡ ದೊಡ್ಡ ಮಾತುಗಳಲ್ಲ ಬದುಕು ಕಷ್ಟವಾದಾಗಲೂ ನಾನು ಇದ್ದೀನಿ" ಎಂದು ಪಕ್ಕದಲ್ಲಿ ಕುಳಿತುಕೊಳ್ಳುವವನೇ ನಿಜವಾದ ಸಂಗಾತಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ