ಬೆಳಗಿನ ಪತ್ರಿಕೆ ವೃದ್ಧಾಶ್ರಮದ ಬಾಗಿಲ ಬಳಿ ಬಿದ್ದಿತ್ತು. ಅಮ್ಮ ಅದನ್ನು ನಿಧಾನವಾಗಿ ಎತ್ತಿಕೊಂಡು ಓದಲು ಶುರು ಮಾಡಿದರು. ದೊಡ್ಡದಾದ ಅಕ್ಷರಗಳಲ್ಲಿ ಸುದ್ದಿ ಇತ್ತು. ಮನೆಯ ನಾಯಿ ಕಳೆದುಹೋಗಿದೆ. ಹುಡುಕಿ ಕೊಟ್ಟವರಿಗೆ ₹2 ಲಕ್ಷ ಬಹುಮಾನ."ಅಮ್ಮ ಆ ಸುದ್ದಿಯನ್ನು ಬಹಳ ಹೊತ್ತು ನೋಡುತ್ತಾ ಕುಳಿತರು. ಯಾಕೆಂದರೆ ನಾಯಿಯ ವಿಳಾಸ ಮನೆಯದಾಗಿತ್ತು. ಪತ್ರಿಕೆಯ ಅಕ್ಷರಗಳು ಕಾಣಿಸದೆ ಹೋದವು. ಅವರಿಗೆ ನೆನಪಾದದ್ದು ಮಗನ ಮುಖವಲ್ಲ ಅವನ ಬಾಲ್ಯ ಅವನಿಗೆ ಹಸಿವಾದಾಗ ತಾನು ಊಟ ಮಾಡದೆ ತಿನ್ನಿಸಿದ ದಿನಗಳು, ಅವನ ಶಾಲಾ ಶುಲ್ಕಕ್ಕಾಗಿ ತನ್ನ ಬಳೆ ಮಾರಿದ ದಿನ, ಅವನಿಗೆ ಜ್ವರ ಬಂದಾಗ ಇಡೀ ರಾತ್ರಿ ಕಣ್ಣಿಗೆ ನಿದ್ದೆ ಬಾರದ ದಿನಗಳು. ಮನೆಯಿಂದ ಕಳುಹಿಸುವಾಗ ಮಗ ಹೇಳಿದ್ದ ಒಂದೇ ಮಾತು ಮಾತ್ರ ಇನ್ನೂ ಕಿವಿಯಲ್ಲಿ ಮೊಳಗುತ್ತಿತ್ತು ಅಮ್ಮಾ ನಿನ್ನ ಖರ್ಚು ನೋಡಿಕೊಳ್ಳೋದು ನಮ್ಮಿಂದ ಆಗಲ್ಲ. ವೃದ್ಧಾಶ್ರಮಕ್ಕೆ ಹೋಗು. ಅಮ್ಮ ಪತ್ರಿಕೆಯನ್ನು ಮಡಚಿ ಎದೆಗಪ್ಪಿಕೊಂಡರು. ಕಣ್ಣೀರಿನ ನಡುವೆ ನಿಧಾನವಾಗಿ ಹೇಳಿದರು ನಾಯಿ ಮನೆಗೆ ಮರಳಿ ಬಂದರೆ ಮನೆಯವರು ಸಂತೋಷಪಡುತ್ತಾರೆ. ಅಮ್ಮ ಮನೆಗೆ ಮರಳಿ ಬಂದರೆ ಮನೆ ಮತ್ತೆ 'ಮಂತ್ರಾಲಯ' ಆಗುತ್ತದೆ ಅನ್ನೋದನ್ನ ಮಾತ್ರ ಇವರು ಮರೆತಿದ್ದಾರೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ