ನದಿಯ ಮಧ್ಯದಲ್ಲಿ ಒಂದು ಪುಟ್ಟ ದೋಣಿ ಸಾಗುತ್ತಿತ್ತು. ದೋಣಿಯಲ್ಲಿ ಒಬ್ಬನೇ ಇದ್ದ. ಕೈಯಲ್ಲಿ ಒಂದು ಹಳೆಯ ಹುಟ್ಟು. ಎದುರಿಗೆ ದಡ ಕಾಣುತ್ತಿರಲಿಲ್ಲ. ಆಕಾಶ ಕಪ್ಪಾಗಿತ್ತು. ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿತ್ತು.
ಅವನು ಹುಟ್ಟು ಹಾಕುತ್ತಲೇ ಇದ್ದ. ಕೈ ನೋಯುತ್ತಿತ್ತು. ಮತ್ತೊಮ್ಮೆ ದೋಣಿ ಹಿಂದಕ್ಕೆ ಸರಿಯಿತು. "ಇನ್ನೆಷ್ಟು ದೂರ? ಬಹುಶಃ ದಡವೇ ಇಲ್ಲವೇನೋ…"ಅವನು ಹುಟ್ಟನ್ನು ಕೆಳಗಿಟ್ಟು ಆಕಾಶ ನೋಡಿದ.ಅಷ್ಟರಲ್ಲಿ ದೂರದಲ್ಲಿ ಹಾರುತ್ತಿದ್ದ ಎರಡು ಹಕ್ಕಿಗಳು ಅವನ ಕಣ್ಣಿಗೆ ಬಿದ್ದವು."ಅವುಗಳಿಗೆ ದಡ ಕಾಣಿಸುತ್ತಿದೆಯೋ ಇಲ್ಲವೋ ಗೊತ್ತಿಲ್ಲ… ಆದರೂ ಅವು ಹಾರುವುದನ್ನು ನಿಲ್ಲಿಸಿಲ್ಲ." ಅವನು ಮತ್ತೆ ಹುಟ್ಟನ್ನು ಕೈಗೆತ್ತಿಕೊಂಡ.
ಆ ದಿನ ದೋಣಿ ದಡ ಸೇರಲಿಲ್ಲ. ಮರುದಿನವೂ ಸೇರಲಿಲ್ಲ.ಆದರೆ ಮೂರನೇ ದಿನ ಬೆಳಗ್ಗೆ, ಏನೋ ಬದಲಾಯಿತು.ಇಷ್ಟು ದಿನ ಅವನ ವಿರುದ್ಧ ಬೀಸುತ್ತಿದ್ದ ಗಾಳಿ, ಇದ್ದಕ್ಕಿದ್ದಂತೆ ಅವನ ದಿಕ್ಕಿಗೆ ಬೀಸತೊಡಗಿತು. ಅವನು ಹುಟ್ಟು ಹಾಕುವುದನ್ನೇ ನಿಲ್ಲಿಸಿದ. ದೋಣಿ ತಾನೇ ಮುಂದೆ ಸಾಗತೊಡಗಿತು.
ದೂರದಲ್ಲಿ ದಡ ಕಾಣಿಸಿತು.ಅವನು ಸಣ್ಣದಾಗಿ ನಕ್ಕ.ಆಗ ಅವನಿಗೆ ಅರ್ಥವಾಯಿತುಕೆಲವೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಷಣ ಫಲ ಸಿಗುವುದಿಲ್ಲ. ಅದರಿಂದ ದಾರಿ ತಪ್ಪಿದೆ ಎಂದಲ್ಲ. ಬಹುಶಃ ಗಾಳಿ ಬದಲಾಗಲು ಸ್ವಲ್ಪ ಸಮಯ ಬೇಕಿರಬಹುದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!