ತರಗತಿ ಮುಗಿದಿದೆ. ಎಲ್ಲ ವಿದ್ಯಾರ್ಥಿಗಳು ಹೊರಟಿದ್ದಾರೆ. ತರಗತಿಯಲ್ಲಿ ಒಬ್ಬ ಶಿಕ್ಷಕ ಮಾತ್ರ ಕುಳಿತಿದ್ದಾನೆ. ಬೋರ್ಡ್ ಮೇಲೆ ಇನ್ನೂ ಅವನು ಬರೆದಿರುವ ಒಂದು ಪದ ಇದೆ “ಮೌಲ್ಯಗಳು. ನಾನು ಪ್ರತಿದಿನ ಪಾಠ ಮಾಡ್ತೀನಿ…ಆದರೆ ನಿಜವಾಗಿಯೂ ನಾನು ಏನು ಕಲಿಸ್ತಿದ್ದೀನಿ ಪ್ರಶ್ನೆಗೆ ಉತ್ತರವನ್ನಾ? ಆದರೆ ಬದುಕಿನಲ್ಲಿ ಸೋತಾಗ ಏನು ಮಾಡಬೇಕು ಅಂತ ಕಲಿಸಿದ್ದೀನಾ ಮತ್ತೊಬ್ಬನ ಕಣ್ಣೀರನ್ನು ನೋಡಿದಾಗ ಹೇಗೆ ಪ್ರತಿಕ್ರಿಯಿಸಬೇಕು ಅಂತ ಕಲಿಸಿದ್ದೀನಾ? ಗೆದ್ದಾಗ ತಲೆ ಎತ್ತಿಕೊಂಡು ನಡೆಯಬೇಕು… ಆದರೆ ಮತ್ತೊಬ್ಬನನ್ನು ತುಳಿದು ಅಲ್ಲ ಅಂತ ಹೇಳಿದ್ದೀನಾ?ಅವನು ವಿದ್ಯಾರ್ಥಿಗಳು ಕುಳಿತಿದ್ದ ಖಾಲಿ ಬೆಂಚುಗಳನ್ನು ನೋಡುತ್ತಾನೆ.“ಇವತ್ತು ಮಕ್ಕಳ ಕೈಯಲ್ಲಿ ಪುಸ್ತಕಕ್ಕಿಂತ ಮೊಬೈಲ್ ವೇಗವಾಗಿದೆ.
ಅವರ ಬೆರಳುಗಳು ಜಗತ್ತನ್ನೇ ತಲುಪುತ್ತಿವೆ. ಆದರೆ ಪಕ್ಕದಲ್ಲಿ ಕುಳಿತಿರುವ ಮನುಷ್ಯನನ್ನು ತಲುಪಲು ಸಮಯವಿಲ್ಲ.“ಜಗತ್ತು ಓಡುತ್ತಿದೆ ಮಕ್ಕಳೂ ಓಡುತ್ತಿದ್ದಾರೆ. ಅಂಕಗಳ ಹಿಂದೆ ಉದ್ಯೋಗದ ಹಿಂದೆ ಯಶಸ್ಸಿನ ಹಿಂದೆ ಆದರೆ ಯಾರೂ ಕೇಳುತ್ತಿಲ್ಲ ನಾನು ಒಳ್ಳೆಯ ಮನುಷ್ಯನಾಗ್ತಿದ್ದೀನಾ? ಅವನ ಮುಖದಲ್ಲಿ ನೋವು.ಆದರೆ ತಪ್ಪು ಮಕ್ಕಳದ್ದೇನಾ? ಅವರು ಬದಲಾಗಿದ್ದಾರೆ ಅಂತ ನಾವು ಹೇಳುತ್ತೇವೆ. ಆದರೆ ಅವರನ್ನು ಬದಲಿಸಿದ ಜಗತ್ತನ್ನು ಕಟ್ಟಿದ್ದು ಯಾರು?”
ಪ್ರಶ್ನೆಗೆ ಉತ್ತರ ಬೇಕಾಗಿದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!