ಕೃಷ್ಣ ಇವತ್ತು ತುಂಬಾ ಖುಷಿಯಾಗಿದ್ದ. ಬಣ್ಣ ಬಣ್ಣದ ವೇಷ ತೊಟ್ಟ ಮುದ್ದು ಮುಖಗಳು, ನಗು, ಸಂಭ್ರಮ.ತನ್ನ ಸುತ್ತ ಸೇರಿದ್ದ ಜನರನ್ನು ನೋಡುತ್ತಾ ಅವನು ಸುಮ್ಮನೆ ನಗುತ್ತಿದ್ದ.ಯಾರೋ ತಮ್ಮ ಖುಷಿಗಾಗಿ ಬಂದಿದ್ದರು.ಯಾರೋ ಮತ್ತೊಬ್ಬರ ಖುಷಿಗಾಗಿ ಬಂದಿದ್ದರು. ಯಾರೋ ಕಷ್ಟದಲ್ಲಿರುವವರ ಬದುಕಿಗೆ ಒಂದಷ್ಟು ಬೆಳಕಾಗಲು ಬಂದಿದ್ದರು.

ಅವರನ್ನೆಲ್ಲ ನೋಡಿದ ಕೃಷ್ಣ ಮನಸ್ಸಿನಲ್ಲೇ ಹಾರೈಸಿದ “ಇವತ್ತು ನನ್ನ ಹಬ್ಬವನ್ನು ಸಂಭ್ರಮಿಸಿದ ಹಾಗೆ, ನಾಳೆಯಿಂದ ನಿಮ್ಮ ಬದುಕನ್ನೂ ಸಂಭ್ರಮದಿಂದ ಬದುಕಿ. ಜಗಳ, ಮೋಸ, ವಂಚನೆ ಬಿಟ್ಟು ಒಬ್ಬರಿಗೊಬ್ಬರು ಆಸರೆಯಾಗಿ ಬದುಕಿ.ಹಬ್ಬ ಮುಗಿಯಿತು. ಜನರೆಲ್ಲ ಮನೆಗೆ ಹೊರಟರು. ಕೃಷ್ಣ ಮಾತ್ರ ಅಲ್ಲೇ ನಿಂತು ನಗುತ್ತಿದ್ದ. ಏಕೆಂದರೆ ಅವನಿಗೆ ಗೊತ್ತಿತ್ತು ಹಬ್ಬದ ದಿನ ನನ್ನನ್ನು ನೆನಪಿಸಿಕೊಳ್ಳುವುದಕ್ಕಿಂತ, ಹಬ್ಬದ ನಂತರ ನನ್ನ ಮಾತನ್ನು ನೆನಪಿಸಿಕೊಂಡು ಬದುಕಿದರೆ ಅದೇ ನನಗೆ ನಿಜವಾದ ಸಂಭ್ರಮ. ಕೃಷ್ಣ ಕಾಯುತ್ತಿದ್ದಾನೆ ಈಗಲೂ…

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ