ರಾಹುಲ್ಗೆ ಅಮ್ಮ ಪ್ರತಿದಿನ ಹೇಳುತ್ತಿದ್ದರು. ಊಟಕ್ಕೆ ಬಾ ಮಗಾ ಕೈತುತ್ತು ಕೊಡ್ಲಾ?” "ಅಯ್ಯೋ ಅಮ್ಮಾ ನಾನು ದೊಡ್ಡವನಾಗಿದ್ದೀನಿ. ನೀನೇ ತಿನ್ನು. ರಾಹುಲ್ ಕೆಲಸಕ್ಕೆ ಹೋದ. ಅಮ್ಮನ ಕರೆ ತಪ್ಪಿಸುತ್ತಿದ್ದ. ನಂತರ ಸ್ನೇಹಿತರ ಕರೆ. ಕೊನೆಗೆ... ತನ್ನನ್ನೇ ತಾನು ಕಳೆದುಕೊಳ್ಳುತ್ತಾ ಹೋದ. ಕೇಳಿದರೆ busy ಅನ್ನುತ್ತಿದ್ದ. ಒಂದು ದಿನ ರಾತ್ರಿ 3 ಗಂಟೆ ಮೊಬೈಲ್ನಲ್ಲಿ ಗ್ಯಾಲರಿಯಲ್ಲಿ ಅಮ್ಮನ ಹಳೆಯ ಫೋಟೋ ಕಣ್ಣಿಗೆ ಬಿತ್ತು, ಅವಳ ಕೈಯಲ್ಲಿ ಒಂದು ತುತ್ತು ಅನ್ನ ಅಮ್ಮನ ಮಾತು ನೆನೆಪಾಯಿತು, ಮಗಾ ದೊಡ್ಡವನಾಗುವ ಮುಂಚೆ, ನಮ್ಮ ಬಾಲ್ಯ ಮುಗಿದುಹೋಗಬಾರದು..."ರಾಹುಲ್ ಫೋನ್ ಬದಿಗಿಟ್ಟು ಅಮ್ಮನ ಕೋಣೆಗೆ ಓಡಿದ. ಅಮ್ಮ ಗಾಢ ನಿದ್ದೆಯಲ್ಲಿದ್ದಳು.
ಅವನು ನಿಧಾನವಾಗಿ ಅವಳ ಕೈ ಹಿಡಿದುಕೊಂಡ ಕಣ್ಣಲ್ಲಿ ನೀರು. "ಅಮ್ಮಾ... ನಾಳೆಯಿಂದ ಕೈತುತ್ತು ಕೊಡ್ತೀಯಾ?" ಅಮ್ಮ ಕಣ್ಣು ತೆರೆಯದೇ ನಕ್ಕಳು. ನೀನು ದೊಡ್ಡವನಾಗಿಲ್ಲ ಕಣೋ...ನನಗೆ ಇನ್ನೂ ನೀನು ಪುಟ್ಟ ಮಗೂನೇ." ರಾಹುಲ್ಗೆ ಅರ್ಥವಾಯಿತು, ನಾವು ದೊಡ್ಡವರಾಗೋಕೆ ಓಡುತ್ತಾ ಓಡುತ್ತಾ ನಮ್ಮನ್ನು ಚಿಕ್ಕವರಾಗಿದ್ದಾಗ ಪ್ರೀತಿಸಿದವರನ್ನೇ ಕಳೆದುಕೊಳ್ಳಬಾರದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ