ನಿನ್ನ ಹೆಸರೇನೆಂದು ನನಗೆ ಗೊತ್ತಿಲ್ಲ...ನಿನ್ನ ಊರು ಯಾವುದೆಂಬುದೂ ಗೊತ್ತಿಲ್ಲ… ನೀನು ಯಾವ ದಾರಿಯಲ್ಲಿ ನಡೆಯುತ್ತೀಯಾ, ಯಾವ ಕಿಟಕಿಯ ಬಳಿ ಕುಳಿತು ಆಕಾಶ ನೋಡುತ್ತೀಯಾ ನನ್ನ ಪಾಲಿಗೆ ವರವಾಗಿ ನೀನು ಯಾವಾಗ ಬರ್ತೀಯಾ ಎಂಬುದೂ ಗೊತ್ತಿಲ್ಲ. ಆದರೂ,ನಿನ್ನ ಜೊತೆ ತುಂಬಾ ಮಾತಾಡಿದ್ದೇನೆ ನಾನು.ನೀನು ನನ್ನ ಎದುರಿಗೇ ಕುಳಿತಿದ್ದೀಯೆಂಬಂತೆ ನನ್ನ ದಿನದ ಸಣ್ಣ ಸಣ್ಣ ಸಂಗತಿಗಳನ್ನೆಲ್ಲ ನಿನಗೆ ಹೇಳಿಕೊಂಡಿದ್ದೇನೆ.ಇವತ್ತು ಏನೋ ಕಾರಣವಿಲ್ಲದೆ ಖುಷಿಯಾದೆ, ನಿನ್ನ ನೆನಪಾಯ್ತು. ಇವತ್ತು ಯಾರೊಬ್ಬರೂನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆಗಲೂ ನಿನ್ನ ನೆನಪಾಯ್ತು.ಒಂದು ಒಳ್ಳೆಯ ಹಾಡು ಕೇಳಿದಾಗ,ಒಬ್ಬರ ಕಣ್ಣಲ್ಲಿ ಪ್ರೀತಿ ಕಂಡಾಗ ಮಳೆ ಬಿದ್ದಾಗ, ಒಂಟಿಯಾಗಿ ನಡೆದುಕೊಂಡು ಹೋಗುವಾಗ, ಎಲ್ಲೋ ನೀನು ನನ್ನ ಜೊತೆಗಿದ್ದೀಯೆಂಬ ವಿಚಿತ್ರ ಭಾವನೆ. ನೀನು ಇನ್ನೂ ನನ್ನ ಬದುಕಿಗೆ ಬಂದಿಲ್ಲ.ಆದರೂ ನಿನಗಾಗಿ ನನ್ನೊಳಗೆ ಒಂದು ಜಾಗವನ್ನು ಯಾರಿಗೂ ಗೊತ್ತಾಗದಂತೆ ಉಳಿಸಿಕೊಂಡಿದ್ದೇನೆ. ಅಲ್ಲಿ ನಿನ್ನ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ, ಪ್ರಶ್ನೆಗಳಿಲ್ಲ, ನೀನು ಹೇಗಿದ್ದೀಯೋ ಹಾಗೆಯೇ ನಿನ್ನನ್ನು ಒಪ್ಪಿಕೊಳ್ಳುವಷ್ಟು ಜಾಗವಿದೆ. ಒಂದಿನ ನೀನು ಎದುರಿಗೆ ಬಂದು “ನಾನೇ ನೀನು ಇಷ್ಟು ದಿನ ಕಾಯುತ್ತಿದ್ದವಳು "ಎಂದು ಹೇಳಿದರೆ, ಬಹುಶಃ ನಾನು ಏನೂ ಹೇಳಲಾರೆ.ಸುಮ್ಮನೆ ನಗುತ್ತೇನೆ. ಯಾಕೆಂದರೆ, ನಿನ್ನನ್ನು ಮೊದಲ ಬಾರಿಗೆ ನೋಡುತ್ತಿದ್ದರೂ ಮನಸ್ಸು ಮಾತ್ರ "ಇವಳನ್ನೇ ಕಾಯುತ್ತಿದ್ದೆ" ಎಂದುಬಹಳ ಹಿಂದೆಯೇ ಗುರುತಿಸಿರುತ್ತದೆ. ಆದರೆ ಒಂದು ಸಮಸ್ಯೆ ಇದೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನಿನ್ನ ಹೆಸರು ತಿಳಿದಿಲ್ಲ ನಿನ್ನ ವಿಳಾಸ ಗೊತ್ತಿಲ್ಲ.ಊರು ಗೊತ್ತಿಲ್ಲ.ನಿನ್ನನ್ನು ಹುಡುಕುವ ದಾರಿಯೂ ಗೊತ್ತಿಲ್ಲ.ಹಾಗಾಗಿ,ಈ ಪತ್ರವನ್ನು ಯಾರ ಹೆಸರಿಗೂ ಬರೆಯದೆ,ಯಾವ ವಿಳಾಸವನ್ನೂ ಹಾಕದೆ, ಇವತ್ತು ಅಂಚೆ ಪೆಟ್ಟಿಗೆಯಲ್ಲಿ ಹಾಕಿಬಿಡುತ್ತೇನೆ. ಒಂದಲ್ಲ ಒಂದು ದಿನಅದು ನಿನ್ನ ಕೈಗೆ ತಲುಪಬಹುದು, ಅಥವಾ ತಲುಪದೇ ಇರಬಹುದು.ಆದರೆ ತಲುಪದಿದ್ದರೂ ಪರವಾಗಿಲ್ಲ ನನ್ನ ಮನಸ್ಸಿನಲ್ಲಿದ್ದ ನಿನ್ನ ವಿಳಾಸವಿಲ್ಲದ ಪ್ರೀತಿಗೆಕನಿಷ್ಠ ಒಂದು ಪತ್ರವಾದರೂ ಬರೆದಿದ್ದೆ ಎಂಬ ನೆನಪು ಉಳಿಯಲಿ. ಇಂತಿ,ನಿನ್ನನ್ನು ಇನ್ನೂ ಭೇಟಿಯಾಗದಿದ್ದರೂಮನಸ್ಸಿನಲ್ಲಿ ಬಹಳ ಹಿಂದೆಯೇ ನಿನ್ನವನಾಗಿಬಿಟ್ಟವನು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!