ಬೆಳಗ್ಗಿನಿಂದಲೇ ಆ ತಾಯಿ ಮನೆ ಮನೆಗೆ ಹೋಗುತ್ತಿದ್ದಳು. ಮಕ್ಕಳು ಓದಲು ಬಳಸುವ ಪುಟ್ಟ ಟೇಬಲ್ಗಳನ್ನು ಮಾರುತ್ತಾ ಬಂದ ಹಣದಲ್ಲಿ ಸಂಜೆಯ ಊಟದ ಕನಸು ಕಾಣುತ್ತಿದ್ದಳು. ಅವಳ ಜೊತೆ ಮಗನೂ ಬರುತ್ತಿದ್ದ. ಒಂದು ಮನೆಯ ಮುಂದೆ ಟೇಬಲ್ ಇಳಿಸಿ, "ಮಕ್ಕಳಿಗೆ ಓದಲು ತುಂಬಾ ಚೆನ್ನಾಗಿರುತ್ತೆ ಅಮ್ಮಾ... ತಿಗೆದುಕೊಳ್ಳಿ ಎಂದಳು ತಾಯಿ. ಮಗ ಮಾತ್ರ ಆ ಮನೆಯ ಕಿಟಕಿಯಿಂದ ಒಳಗೆ ನೋಡುತ್ತಿದ್ದ. ಅಲ್ಲಿ ಅವನ ವಯಸ್ಸಿನ ಮಕ್ಕಳು ಪುಸ್ತಕ ತೆರೆದು ಓದುತ್ತಿದ್ದರು. ಅಮ್ಮಾ?.ಏನಪ್ಪಾ?"ನಮ್ಮಲ್ಲೂ ಇಂಥ ಟೇಬಲ್ ಇದ್ರೆ... ನಾನೂ ಓದ್ದಿದ್ದೆ ಅಲ್ವಾ?” ತಾಯಿ ಒಂದು ಕ್ಷಣ ಮೌನವಾದಳು. ಮಗ ಮತ್ತೆ ಕೇಳಿದ, ಆದ್ರೆ... ಇವತ್ತು ಊಟ ಸಿಗುತ್ತಾ ತಾಯಿಯ ಕಣ್ಣಂಚು ಒದ್ದೆಯಾಯಿತು. ಅವಳು ಮಗನ ತಲೆಯ ಮೇಲೆ ಕೈಯಿಟ್ಟು, "ಸಿಗುತ್ತೆ ಕಂದಾ..." ಎಂದಳು.ಆ ದಿನವೂ ಒಂದು ಟೇಬಲ್ ಮಾರಾಟವಾಯಿತು. ಆದರೆ ಆ ತಾಯಿ ಮನೆಗೆ ಕೊಂಡೊಯ್ದದ್ದು ಟೇಬಲ್ನ ಹಣವಲ್ಲ.
ಮಗನ ಹಸಿವನ್ನು ಒಂದು ದಿನ ಮತ್ತಷ್ಟು ಮುಂದೂಡುವಷ್ಟು ಹಣ ಮರುದಿನವೂ ಅವಳು ಮಕ್ಕಳ ಓದುವ ಟೇಬಲ್ ಮಾರಲು ಹೊರಟಳು. ಅವಳ ಮಗನಿಗೆ ಮಾತ್ರ ಇನ್ನೂ ಒಂದು ಪಾಠ ಅರ್ಥವಾಗಿರಲಿಲ್ಲ. ಶಾಲೆಯಲ್ಲಿ ಕಲಿಯುವ ಪಾಠಕ್ಕಿಂತ ಹಸಿವು ಗಳಿಸುವ ಪಾಠವೇ ಕೆಲವೊಮ್ಮೆ ಬದುಕಿನಲ್ಲಿ ದೊಡ್ಡದಾಗಿರುತ್ತದೆ ಎಂದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!