ಭೂಲೋಕಕ್ಕೆ ಹೊರಟ ಗಣೇಶ ಗಣೇಶನಿಗೆ ಇಂದು ಎಲ್ಲಿಲ್ಲದ ಉತ್ಸಾಹ. ವರ್ಷಕ್ಕೊಮ್ಮೆ ಭೂಲೋಕಕ್ಕೆ ಬರುವ ಸಮಯ. ಒಂದು ತಿಂಗಳ ಹಿಂದೆಯೇ ಅಪ್ಪ-ಅಮ್ಮನ ಬಳಿ ಅನುಮತಿ ಪಡೆದು, ತನ್ನ ಪ್ರಯಾಣಕ್ಕೆ ಸಿದ್ಧನಾಗಿದ್ದ. ಹೊರಡುವ ದಿನ ಅಪ್ಪ ಹೇಳಿದರು, “ಎಲ್ಲರಿಗೂ ಸಂತೋಷ ಕೊಟ್ಟು ಬಾ...” ಅಮ್ಮ ಮುದ್ದಾಗಿ ಹೇಳಿದರು, “ಭಕ್ತರ ಪ್ರೀತಿಯನ್ನು ಸ್ವೀಕರಿಸಿ, ಅವರ ಕಷ್ಟಗಳನ್ನು ದೂರ ಮಾಡಿ ಬಾ...'ಗಣೇಶ ನಗುತ್ತಾ ತಲೆಬಾಗಿದ. ಕೈಲಾಸದಿಂದ ಭೂಲೋಕದ ಕಡೆಗೆ ಅವನ ಹೆಜ್ಜೆಗಳು ಸಾಗಿದವು. ಅಲ್ಲಿ ಅವನಿಗಾಗಿ ಸಾವಿರಾರು ಮನೆಗಳು ಕಾಯುತ್ತಿದ್ದವ. ಹೂವುಗಳು ಸಿದ್ಧವಾಗಿದ್ದವು. ದೀಪಗಳು ಬೆಳಗುತ್ತಿದ್ದವು. ಭಕ್ತರ ಹೃದಯಗಳು ಸಂಭ್ರಮದಿಂದ ತುಂಬಿದ್ದವು.ಅವನು ಬರುವುದಷ್ಟೇ ಸ್ವಾಗತಿಸುವುದು ನಮ್ಮ ಕೆಲಸ, ಸಂಭ್ರಮಿಸುವುದು ನಮ್ಮ ಕೆಲಸ, ಅವನ ಆಶೀರ್ವಾದದಲ್ಲಿ ಒಂದಾಗುವುದು ನಮ್ಮ ಕೆಲಸ. ಕಾಯುತ್ತಿದೆ ಭೂಲೋಕ…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!