ಅವಳು ಪ್ರತಿದಿನ ಅವನ ಜೊತೆ ಮಾತನಾಡುತ್ತಿದ್ದಳು. ತನ್ನ ಸಂತೋಷ, ನೋವು, ಭಯ ಎಲ್ಲವನ್ನೂ ಹೇಳುತ್ತಿದ್ದಳು. ಅವನಿಗೆ ಅವಳ ಮನಸ್ಸಲ್ಲೇನೋ ಭಾವವಿದೆ ಅನ್ನುವ ಯೋಚನೆ. ಒಂದು ದಿನ ಅವನು ಕೇಳಿದ, “ನಿನಗೆ ನನ್ನಿಂದ ಏನು ಬೇಕು?” ಅವಳು ಸ್ವಲ್ಪ ನಕ್ಕು ಹೇಳಿದಳು, “ಏನೂ ಬೇಡ...ನಾನು ಮಾತಾಡುವಾಗ, ನನ್ನ ಮಾತು ಮುಗಿಯುವವರೆಗೂ ಕೇಳಿಸಿಕೊಳ್ಳುವ ಒಬ್ಬ ಮನುಷ್ಯ ಸಾಕು. ”ಅವನಿಗೆ ಆಗ ಅರ್ಥವಾಯಿತು ಕೆಲವೊಮ್ಮೆ ಪ್ರೀತಿ ಎಂದರೆ ಪರಿಹಾರ ಕೊಡುವುದಲ್ಲ ಮೌನವಾಗಿ ಪಕ್ಕದಲ್ಲಿದ್ದು,ಮಾತುಗಳಿಗೆ ಜಾಗ ಕೊಡುವುದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!