ಗಣೇಶನೇ, ನನ್ನ ಕಷ್ಟವನ್ನು ಪರಿಹರಿಸು..."ಎಂದು ಕೈಮುಗಿದು ಕೇಳಿಕೊಳ್ಳುತ್ತೇವೆ. ಆದರೆ ದೇವರು ತಕ್ಷಣ ನಮ್ಮ ಮುಂದೆ ಬಂದು ನಮ್ಮ ಕಷ್ಟವನ್ನು ಪರಿಹರಿಸುವುದಿಲ್ಲ. ಅವನು ನಮ್ಮ ಕಷ್ಟ ಪರಿಹರಿಸಬಲ್ಲ ಒಬ್ಬ ವ್ಯಕ್ತಿಯನ್ನು ನಮ್ಮ ಬಳಿಗೆ ಕಳುಹಿಸಬಹುದು.ಒಂದು ಹೊಸ ಆಲೋಚನೆಯನ್ನು ಕೊಡಬಹುದು. ನಮ್ಮೊಳಗೆ ಧೈರ್ಯ ತುಂಬಬಹುದು. ನಾವು ನೋಡದಿದ್ದ ದಾರಿಯೊಂದನ್ನು ತೋರಿಸಬಹುದು. ಬಹುಶಃ ಅದಕ್ಕೇ ದೇವರು "ತಥಾಸ್ತು" ಎನ್ನುತ್ತಾನೆ. ಎಲ್ಲವನ್ನೂ ದೇವರೇ ಮಾಡಬೇಕೆಂದಿದ್ದರೆ, ನಮ್ಮನ್ನು ಈ ಭೂಮಿಗೆ ಕಳುಹಿಸುವ ಅಗತ್ಯವೇ ಇರಲಿಲ್ಲ.ದೇವರು ನಮ್ಮ ಪರವಾಗಿ ಬದುಕುವುದಿಲ್ಲ ನಮ್ಮ ಜೊತೆಯಲ್ಲಿ ನಿಂತು ಬದುಕುವುದನ್ನು ಕಲಿಸುತ್ತಾನೆ.ಶ್ರೀಧರಾಚಾರ್ಯರ ಈ ಮಾತುಗಳನ್ನು ಕೇಳಿದಾಗ,ಮನಸ್ಸಿನಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಯಿತು.ನಂಬಿಕೆ ಎಂದರೆ ದೇವರು ನಮ್ಮ ಕೆಲಸ ಮಾಡುತ್ತಾನೆ ಎನ್ನುವುದಲ್ಲ...ನಾವು ನಡೆಯುವಾಗ ದೇವರು ನಮ್ಮ ಜೊತೆಗಿದ್ದಾನೆ ಎನ್ನುವುದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!