ಮಣ್ಣಿನೊಳಗೆ ಎರಡು ಬೀಜಗಳು ಪಕ್ಕಪಕ್ಕದಲ್ಲೇ ಬಿದ್ದಿದ್ದವು. ಮೊದಲ ಬೀಜ ಹೇಳಿತು, "ಇಲ್ಲೇ ಚೆನ್ನಾಗಿದೆ. ಯಾರೂ ನನಗೆ ತೊಂದರೆ ಮಾಡುವುದಿಲ್ಲ. ಕತ್ತಲಾದರೂ ಸುರಕ್ಷಿತವಾಗಿದೆ. ಈ ಚಿಪ್ಪು ಒಡೆಯಿಸಿಕೊಂಡು ಹೊರಗೆ ಬರುವ ಅಗತ್ಯವೇನು?"ಎರಡನೇ ಬೀಜ ಮೌನವಾಗಿತ್ತು. ಒಂದು ದಿನ ಮಳೆ ಬಂತು. ಮಣ್ಣಿನ ತೇವ ಬೀಜದೊಳಗೆ ಸೇರಿತು. ಆದರೊಳಗೆ ಏನೋ ಬದಲಾವಣೆಯಾಗತೊಡಗಿತು. ಅದು ತನ್ನ ಗಟ್ಟಿಯಾದ ಚಿಪ್ಪನ್ನು ಒಡೆಯಲು ಆರಂಭಿಸಿತು.ಮೊದಲ ಬೀಜ ಗಾಬರಿಯಾಗಿ ಕೇಳಿತು, "ಏನು ಮಾಡುತ್ತಿದ್ದೀಯ? ನಿನ್ನ ಚಿಪ್ಪು ಒಡೆದರೆ ನೀನು ದುರ್ಬಲನಾಗಿಬಿಡುತ್ತೀಯ! 'ಎರಡನೇ ಬೀಜ ನಗುತ್ತಾ ಹೇಳಿತು, "ಹೌದು... ಚಿಪ್ಪು ಒಡೆಯುತ್ತದೆ. ಆದರೆ ನನ್ನ ಬದುಕು ಅಲ್ಲಿಂದಲೇ ಶುರುವಾಗುತ್ತದೆ." ಕೆಲವೇ ದಿನಗಳಲ್ಲಿ...ಅದರ ಬೇರುಗಳು ಮಣ್ಣಿನೊಳಗೆ ಇಳಿದವು. ಚಿಗುರು ಮಣ್ಣನ್ನು ಸೀಳಿ ಹೊರಬಂತು. ಸೂರ್ಯನ ಬೆಳಕನ್ನು ಕಂಡಿತು. ಗಾಳಿಯನ್ನು ಅನುಭವಿಸಿತು. ಮೊದಲ ಬೀಜ ಮಾತ್ರ ಇನ್ನೂ ತನ್ನ ಚಿಪ್ಪಿನೊಳಗೇ ಸುರಕ್ಷಿತವಾಗಿತ್ತು. ತಿಂಗಳುಗಳು ಕಳೆದವು. ಒಂದು ದಿನ, ಎರಡನೇ ಬೀಜ ದೊಡ್ಡ ಮರವಾಗಿ ನಿಂತಿತ್ತು. ಅದರ ನೆರಳಿನಲ್ಲಿ ಅನೇಕರು ಕುಳಿತಿದ್ದರು.

ಅದರ ಕೊಂಬೆಗಳಲ್ಲಿ ಹಕ್ಕಿಗಳು ಗೂಡು ಕಟ್ಟಿದ್ದವು.ಅದೇ ಸಮಯದಲ್ಲಿ ಮಣ್ಣಿನೊಳಗಿದ್ದ ಮೊದಲ ಬೀಜ ತನ್ನೊಳಗೇ ಹೇಳಿಕೊಂಡಿತು "ನಾನು ಒಡೆಯುವುದಕ್ಕೆ ಹೆದರಿದೆ...ಆದರೆ ಒಡೆಯಬೇಕಾಗಿದ್ದದ್ದು ನನ್ನ ಬದುಕಲ್ಲ ನನ್ನನ್ನು ತಡೆದಿದ್ದ ಚಿಪ್ಪು." 

ಜೀವನದ ಸತ್ಯವೇನು ಗೊತ್ತಾ ಬೆಳವಣಿಗೆ ಎಂದಿಗೂ ಆರಾಮದ ಜಾಗದಲ್ಲಿ ನಡೆಯುವುದಿಲ್ಲ.ಕೆಲವೊಮ್ಮೆ ನಮ್ಮನ್ನು ಕಾಪಾಡುತ್ತಿದೆ ಎಂದುಕೊಂಡಿರುವ ಚಿಪ್ಪನ್ನೇ ನಾವು ಒಡೆಯಬೇಕು. ಆ ನೋವಿನಾಚೆಗೇ ನಮ್ಮ ನಿಜವಾದ ಬೆಳವಣಿಗೆ ಕಾಯುತ್ತಿರುತ್ತದೆ. ಬೀಜ ಇನ್ನೂ ಕೊಳೆಯುತ್ತಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ