ಹಾಗೆ ತೀರದಲ್ಲಿ ಮಾವನ ಜೊತೆ ಕುಳಿತು ಮಾತನಾಡುವಾಗ ಅವರು ಬದುಕನ್ನು ಕಂಡ ಅನುಭವದಿಂದ ಮಾತು ಶುರುಮಾಡಿದರು. ಸಂಜೆಯ ಹೊತ್ತು ಸಮುದ್ರಕ್ಕೆ ಚಿತ್ತಾರ ಹಚ್ಚುವುದೇ ಮೀನಿನ ದೋಣಿ ಹಡುಗುಗಳು ತೀರದ ಸಮುದ್ರದಂಚನ್ನು ಬೆಳಗಿನಿಂದ ಬೆಳಕಿಸುವ ಹಾಗೆ ಚಲಿಸುವ ಬೆಳಕಿನ ರೇಖೆಗಳನ್ನು ನೋಡುವುದೇ ಚಂದ. ಕಾಲದ ಓಟದ ನಡುವೆ ಈಗ ಆಗಸದಲ್ಲಿ ತಾರೆಗಳೆಲ್ಲ ಕಡಿಮೆಯಾಗಿ ಬಿಟ್ಟಿದೆ. ಎಲ್ಲ ಪ್ರವಾಸ ಹೋಗಿದೆಯೋ ಅಥವಾ ಜನರು ಮಾಡುತ್ತಿರುವ ಆಚಾರವನ್ನು ಕಂಡು ಮುಖ ಮುಚ್ಚಿಕೊಂಡಿದ್ಯೋ, ಆಕಾಶದ ಮರೆಯಲ್ಲಿ ಮರೆಯಾಗಿ ಹೊಸತೊಂದು ಲೋಕದ ಕಡೆಗೆ ತೆರಳಿದ್ದಾರೋ ಗೊತ್ತಿಲ್ಲ ನಕ್ಷತ್ರಗಳಿಲ್ಲದ ಆಕಾಶ ಸೌಂದರ್ಯ ಕಳೆದುಕೊಂಡು ಕಳಾಹೀನವಾಗಿದೆ. ಬದುಕು ಕೂಡ ಕೆಲವೊಂದು ಸಲ ನಮ್ಮ ಸುತ್ತಮುತ್ತಲಿನವರಿಂದ ಮಿನುಗುವುದಕ್ಕೆ ಶುರು ಮಾಡಿದಾಗ ಎಲ್ಲರೂ ತೊರೆದು ಹೋದರೆ ನಾವು ಏಕಾಂಗಿಯಾಗುತ್ತೇವೆ .ಆ ಬದುಕು ಜೊತೆಗಾರರು ಇದ್ದಾಗ ಮಾತ್ರ ಚಂದ ಅವರವರ ಆಸೆ ಅಭಿಲಾಷೆ ಆಕಾಂಕ್ಷೆಗಳನ್ನು ಕಟ್ಟಿಕೊಂಡು ಹೊರಟುಹೋದಾಗ ಬದುಕು ಕೆಲವೊಂದು ಸ್ವಾದವನ್ನು ಕಳೆದುಕೊಂಡು ಬಿಡುತ್ತೆ ಹಾಗಾಗಿ ನಮ್ಮ ಸುತ್ತಮುತ್ತ ಮಿನುಗುವವರಿದ್ದಾಗ ಮಾತ್ರ ಬದುಕಿಗೂ ಅರ್ಥ ಬದುಕು ಒಬ್ಬನದ್ದಾದರೂ ಸುತ್ತಮುತ್ತ ಇರುವವರು ನಮ್ಮವರಾಗಿರಬೇಕು. ಸಮುದ್ರದ ಅಲೆಗಳ ನಡುವೆಯೂ ಈ ಮಾತು ಮನಸ್ಸನ್ನ ಕದಡಿಸಿ ಅಲ್ಲೇ ತರಂಗಗಳನ್ನ ಏಳಿಸುವುದಕ್ಕೆ ಶುರು ಮಾಡಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!