ಒಂದು ದಿನ ದೇವಲೋಕದಲ್ಲಿ ವಿಚಿತ್ರವಾದ ಮೌನ ಸರಸ್ವತಿ ವೀಣೆಯನ್ನು ಪಕ್ಕಕ್ಕಿಟ್ಟು ಕುಳಿತಿದ್ದಳು. ಲಕ್ಷ್ಮಿ ಕಮಲದ ಮೇಲೆ ಕುಳಿತಿದ್ದರೂ ಅವಳ ಮುಖದಲ್ಲಿ ನಗು ಇರಲಿಲ್ಲ. ಶಾರದೆ ತನ್ನ ಕೈಯಲ್ಲಿದ್ದ ಜ್ಞಾನವನ್ನು ಲೋಕಕ್ಕೆ ಹಂಚುತ್ತಿದ್ದರೂ, ಅವಳ ಹೃದಯದಲ್ಲಿ ಮಾತ್ರ ಒಂದು ಖಾಲಿತನ.
ದೇವರು ಕೇಳಿದರು ಏನಾಯಿತು, ಆಗ ಸರಸ್ವತಿ, ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ ಆಗಲೂ ನಾವಾಗಿಯೇ ಇರುತ್ತೇವೆಯೇ? ಒಂದು ಮಗು ಅಳುತ್ತಿದೆ ಅದರ ಕಣ್ಣೀರನ್ನು ಒರೆಸುವಾಗ ತಾಯಿಯ ಹೃದಯದಲ್ಲಿ ಏನಾಗುತ್ತದೆ... ಅದನ್ನು ನಾವು ಎಂದೂ ಅನುಭವಿಸಿಲ್ಲ. "ಸಂಪತ್ತು ಕೊಡುವುದು ನನಗೆ ಗೊತ್ತು. ಆದರೆ ಮಗುವೊಂದು ಹಸಿವಿನಿಂದ ತಾಯಿಯ ಮಡಿಲಿಗೆ ಬಂದು ಕುಳಿತಾಗ, ತನ್ನ ಹೊಟ್ಟೆ ಖಾಲಿಯಿದ್ದರೂ ಮಗುವಿಗೆ ತುತ್ತು ಕೊಡುವ ಆ ಸಂತೋಷ... ಅದನ್ನು ನಾನು ನೋಡಿದ್ದೇನೆ. ಅನುಭವಿಸಿಲ್ಲ." "ದೇವರಾಗಿರುವುದು ಸುಲಭ.ಆದರೆ ಅಮ್ಮನಾಗಿರುವುದು ಎಷ್ಟು ದೊಡ್ಡ ದೈವತ್ವವೋ, ನಮಗೆ ಗೊತ್ತಿಲ್ಲ. "ತಾಯಿಯ ಮಮತೆ ಎಂದರೇನು ಎಂಬುದನ್ನು ತಿಳಿಯಬೇಕಾದರೆ, ಭೂಲೋಕಕ್ಕೆ ಹೋಗಬೇಕು. "ಆದರೆ ಭೂಲೋಕಕ್ಕೆ ದೇವತೆಗಳಾಗಿ ಹೋಗಬಾರದು. ನಾವು ಮನುಷ್ಯರಾಗಿ ಹುಟ್ಟಬೇಕು ಒಬ್ಬಳು ತಾಯಿಯಾಗಿ ಹುಟ್ಟಿದಳು ಅವಳಲ್ಲಿ ಸರಸ್ವತಿಯ ಜ್ಞಾನವಿತ್ತು. ಇನ್ನೊಬ್ಬಳಲ್ಲಿ ಲಕ್ಷ್ಮಿಯ ಸಮೃದ್ಧಿಯಿತ್ತು. ಮತ್ತೊಬ್ಬಳು ಶಾರದೆಯ ಮಮತೆಯೊಂದಿಗೆ ಹುಟ್ಟಿದಳು ಹೀಗೆ ದೇವತೆಗಳು ತಾಯಿಯ ರೂಪದಲ್ಲಿ ಭೂಲೋಕಕ್ಕೆ ಬಂದರು. ಮಣ್ಣಿನ ಗುಣದಿಂದ ಕೆಲವರೊಳಗೆ ಕೋಪ ಬಂತು. ಅಸೂಯೆ ಬಂತು, ಸ್ವಾರ್ಥ ಬಂತು, ಕೆಲವರು ತಪ್ಪು ನಿರ್ಧಾರಗಳನ್ನೂ ತೆಗೆದುಕೊಂಡರು.
ಅವರೊಳಗಿನ ದೇವತ್ವ ಮಸುಕಾಯಿತು. ಆದರೂ...ಅವರ ಮಗುವೊಂದು ರಾತ್ರಿ ಜ್ವರದಿಂದ ಮಲಗಿದಾಗ, ಆ ತಾಯಿ ತನ್ನ ನಿದ್ದೆಯನ್ನು ಮರೆತಳು. ಮಗುವೊಂದು ಸೋತು ಮನೆಗೆ ಬಂದಾಗ ಧೈರ್ಯ ತುಂಬಿದಳು,ಮಗುವೊಂದು ತಪ್ಪು ಮಾಡಿದಾಗ,ಕೋಪದಿಂದ ಬೈದರೂ, ಅದೇ ಮಗು ಮಲಗಿದ ಮೇಲೆ ಅದರ ತಲೆಯನ್ನು ಸವರಿದಳು. ಒಟ್ಟಿನಲ್ಲಿ ತಾಯಿಯಾದರು.ಸರಸ್ವತಿ ನಕ್ಕಳು. ಲಕ್ಷ್ಮಿ ಕಣ್ಣೀರು ಒರೆಸಿಕೊಂಡಳು. ಶಾರದೆ ಕೈಮುಗಿದಳು.ಆಗ ಅವರಿಗೆ ಅರ್ಥವಾಯಿತು,ದೇವರುಗಳು ಮನುಷ್ಯರಿಗೆ ವರ ಕೊಡುತ್ತಾರೆ.ಆದರೆ ಅಮ್ಮ… ತನ್ನನ್ನೇ ಕೊಡುತ್ತಾಳೆ.ಅವಳ ಮಡಿಲಲ್ಲಿ ದೇವರಿಗಿಂತಲೂ ದೊಡ್ಡ ಒಂದು ಜಗತ್ತು ಇರುತ್ತದೆ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!