ಅವರಿಬ್ಬರೂ ಹಾಗೆ ಕುಳಿತು ಮಾತುಕತೆ ಶುರು ಮಾಡಿದ್ದಾರೆ, ಮದುವೆಯ ವರ್ಷದ ದಿನ. ನಾವಿಬ್ಬರೂ ಒಂದಾಗುವಂತೆ ಆ ದೇವರು ಅಸ್ತು ಅಂದ ಸಮಯ ಯಾವುದು ಅಂತ ಗೊತ್ತಿಲ್ಲ, ನಿನ್ನ ಊರು ಯಾವುದು ನನ್ನ ಊರು ಯಾವುದೋ, ಪರಿಚಯವಿಲ್ಲದ ಊರಿನಲ್ಲಿ ಪರಿಚಯ ಮಾಡಿಕೊಂಡು ಬದುಕು ಕಟ್ಟುವ ಕನಸು ಕಂಡವರು ನಾವು. ನೋಡುಗರ ಕಣ್ಣಿಗೆ ಕೆಟ್ಟವರಾಗದೆ, ಕುಟುಂಬವನ್ನು ದೂರ ಮಾಡದೆ, ವದಂತಿಗಳಿಗೆ ಬಲಿ ಬೀಳದೆ ದೇವತೆಗಳ ಆಶೀರ್ವಾದ ಪಡೆದು ಹಿರಿಯರ ಒಪ್ಪಿಗೆಯಲ್ಲಿ ಮನಸ್ಸು ಎರಡನ್ನ ಒಪ್ಪಿಕೊಂಡು ಮೂರು ಗಂಟಿನ ಒಳಗೆ ಬಂಧಿಯಾದವರು. ಬದುಕು ಸಾಗಿದ ವರ್ಷದ ನಡುವೆ ಭಗವಂತನಿಗೆ ಕೈಮುಗಿದು ಪ್ರತಿದಿನವೂ ಕೇಳಿಕೊಂಡಿದ್ದೇವೆ ಎಲ್ಲವನ್ನು ಅನುಸರಿಸಿಕೊಂಡು ಬದುಕನ್ನ ಪ್ರೀತಿಸಿದ್ದಕ್ಕೆ ನೀ ನನಗೆ ನಾ ನಿನಗೆ ಒಪ್ಪಿಗೆಯಾದದ್ದಕ್ಕೆ ಬದುಕಿಷ್ಟು ಸುಂದರವಾಗಿದೆ, ಇಲ್ಲವಾದರೆ ಹೇಗಿರುತ್ತಿತ್ತೋ ಗೊತ್ತಿಲ್ಲ, ದೇವರೇ ಇದು ಮುಂದೆಯೂ ಹೀಗೆ ಇರಲಿ ಎನ್ನುವ ಆಶಯವಷ್ಟೇ ನಮ್ಮದು. ಇಬ್ಬರೂ ಮನಸ್ಸಿನ ಮಾತನ್ನು ಹಂಚಿಕೊಳ್ಳುತ್ತಿದ್ದರು, ಕದ್ದು ಕೇಳಿಕೊಂಡು ಬಿತ್ತರಿಸಿದ್ದೇನೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ