ಮನೆಯ ಗೋಡೆಗೆ ಬಾಗಿಲು. ಅದರ ಪಕ್ಕದಲ್ಲೇ ಕಿಟಕಿ ಇಬ್ಬರೂ ವರ್ಷಗಳಿಂದ ಒಟ್ಟಿಗೇ ಇದ್ದರೂ, ಆ ದಿನ ಮಾತ್ರ ಅವರ ನಡುವೆ ದೊಡ್ಡ ಜಗಳ ಶುರುವಾಯಿತು.

"ನಾನೇ ಈ ಮನೆಗೆ ಮುಖ್ಯವಾದವನು ಎಂದು ಬಾಗಿಲು ಹೇಳಿತು.ಆಗ ಕಿಟಕಿ “ನೀನಾ? ನೀನು ದಿನವಿಡೀ ಮುಚ್ಚಿಕೊಂಡೇ ಇರುತ್ತೀಯ. ಬೆಳಗ್ಗೆ ಮನೆಯೊಳಗೆ ಬೆಳಕು ತರುವುದು ಯಾರು? ಗಾಳಿ ತರುವುದು ಯಾರು? ಹೊರಗಿನ ಜಗತ್ತನ್ನು ಮನೆಯವರಿಗೆ ತೋರಿಸುವುದು ಯಾರು? ನಾನು! ಬಾಗಿಲಿಗೆ ಕೋಪ ಬಂತು.

"ನಿನ್ನನ್ನು ಯಾರಾದರೂ ಒಡೆದು ಒಳಗೆ ಬಂದರೆ ಮನೆಯವರನ್ನು ರಕ್ಷಿಸುವವರು ಯಾರು? ಕಳ್ಳನನ್ನು ತಡೆಯುವುದು ಯಾರು? ಮನೆಯ ರಹಸ್ಯಗಳನ್ನು ಕಾಪಾಡುವ ಕಾಪಾಡುವುದು ಯಾರು?

ನಾನು! "ನನ್ನಿಂದಲೇ ಮನೆ ಉಸಿರಾಡುತ್ತಿದೆ!" ಎಂದು ಕಿಟಕಿ ಕೂಗಿತು.

“ನನ್ನಿಂದಲೇ ಮನೆ ಸುರಕ್ಷಿತವಾಗಿರುತ್ತದೆ!" ಎಂದು ಬಾಗಿಲು ಗರ್ಜಿಸಿತು.ಇಬ್ಬರೂ ತಾವೇ ಶ್ರೇಷ್ಠರೆಂದು ವಾದಿಸುತ್ತಲೇ ಇದ್ದರು.

ಅಷ್ಟರಲ್ಲಿ ಮನೆಯೊಳಗಿದ್ದ ಮಗು ಓಡಿಬಂದು ಕಿಟಕಿಯನ್ನು ತೆರೆದಿತು.ತಾಜಾ ಗಾಳಿ ಒಳಬಂತು.ಮಗು ನಗುತ್ತಾ ಬಾಗಿಲಿನತ್ತ ಓಡಿ,ಅಪ್ಪಾ ಬಂದಿದ್ದಾರೆ!" ಎಂದು ಕೂಗಿತು. ಬಾಗಿಲು ತೆರೆದಿತು.ಆ ಕ್ಷಣ ಬಾಗಿಲಿಗೂ ಕಿಟಕಿಗೂ ತಮ್ಮ ತಮ್ಮ ಕೆಲಸದ ಅರ್ಥ ತಿಳಿಯಿತು. ಕಿಟಕಿ ಬೆಳಕನ್ನು ಒಳಗೆ ತಂದಿತ್ತು. ಬಾಗಿಲು ಸಂಬಂಧವನ್ನು ಒಳಗೆ ಕರೆತಂದಿತ್ತು.

ಬಾಗಿಲು ನಿಧಾನವಾಗಿ ಹೇಳಿತು,ನಾವು ಇಬ್ಬರೂ ಬೇರೆ... ಆದರೆ ಈ ಮನೆಯ ಸಂತೋಷಕ್ಕೆ ಇಬ್ಬರೂ ಬೇಕು."ಕಿಟಕಿ ಮೃದುವಾಗಿ ನಕ್ಕಿತು. "ಹಾಗಾದರೆ ಶ್ರೇಷ್ಠರು ಯಾರು?"ಬಾಗಿಲು ಉತ್ತರಿಸಿತು, “ಒಬ್ಬರಿಗಿಂತ ಒಬ್ಬರು ಶ್ರೇಷ್ಠರಲ್ಲ...ಒಟ್ಟಿಗೆ ಇದ್ದಾಗಲೇ ನಾವು ಪೂರ್ಣರಾಗಿರುತ್ತೇವೆ."

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ