ನಗರದ ರಸ್ತೆಯಲ್ಲಿ ಎಲ್ಲರೂ ಓಡುತ್ತಿದ್ದರು. ಯಾರಿಗೂ ಸಮಯವಿರಲಿಲ್ಲ. ಯಾರೋ ದೊಡ್ಡ ಹುದ್ದೆಯ ಹಿಂದೆ ಓಡುತ್ತಿದ್ದರು ಯಾರೋ ದೊಡ್ಡ ಮನೆಯ ಹಿಂದೆ ಇನ್ನೊಬ್ಬರು ದೊಡ್ಡ ಕಾರಿನ ಹಿಂದೆ ಅವರ ನಡುವೆ ಅರವಿಂದ ಕೂಡ ಓಡುತ್ತಿದ್ದ. ಅವನ ಕಣ್ಣ ಮುಂದೆ ಒಂದೇ ಗುರಿ ಒಂದು ದಿನ ಎಲ್ಲರಿಗಿಂತ ಎತ್ತರಕ್ಕೆ ಏರಬೇಕು ಒಂದು ಬೆಳಗ್ಗೆ ಆಫೀಸಿಗೆ ಹೋಗುವ ಅವಸರದಲ್ಲಿ ಅರವಿಂದ ವೇಗವಾಗಿ ನಡೆಯುತ್ತಿದ್ದ ರಸ್ತೆಯ ಬದಿಯಲ್ಲಿ ಒಂದು ವುಟ್ಟ ಗಿಡ ಅವನ ಕಾಲಿಗೆ ತಾಕಿತು. ಗಿಡದ ಮೇಲೆ ಒಂದು ಪುಟ್ಟ ಹೂವು ಅರಳಿತ್ತು ನೋಡದೆ ಅವನು ಮುಂದೆ ನಡೆದ ದಾರಿಯಲ್ಲಿ ದಿನವೂ ಬಾಲ ಅಲ್ಲಾಡಿಸುವ ನಾಯಿ ಗಮನಿಸಲಿಲ್ಲ. ದೊಡ್ಡ ಸಾಧನೆಯ ಕಡೆಗೆ ಓಡುತ್ತಿದ್ದ ವರ್ಷಗಳು ಕಳೆದವು. ದೊಡ್ಡ ಹುದ್ದೆಗೆ ಏರಿದ ದೊಡ್ಡ ಮನೆ ಕಟ್ಟಿದ. ದೊಡ್ಡ ಕಾರು ಖರೀದಿಸಿದ ಒಂದು ದಿನ ತನ್ನ ಸಾಧನೆಗಳನ್ನೆಲ್ಲ ನೋಡುತ್ತಾ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ.
ಅಷ್ಟರಲ್ಲಿ ಕೆಳಗಿನಿಂದ ಒಂದು ಪುಟ್ಟ ಹುಡುಗನ ಧ್ವನಿ ಕೇಳಿಸಿತು. "ಅಂಕಲ್... ಈ ಹೂವು ನೋಡಿ!"ಅರವಿಂದ ಕೆಳಗೆ ನೋಡಿದ ಅದೇ ತರಹದ ಒಂದು ಪುಟ್ಟ ಹೂವು ಹುಡುಗ ಅದನ್ನು ಕಿತ್ತುಕೊಳ್ಳಲಿಲ್ಲ. ಸುಮ್ಮನೆ ಅದರ ಪಕ್ಕದಲ್ಲಿ ಕುಳಿತು ಅದನ್ನು ನೋಡುತ್ತಿದ್ದ ಅರವಿಂದ ಕೇಳಿದ, ಇದರಲ್ಲಿ ಏನು ಅಷ್ಟು ವಿಶೇಷ? ಹುಡುಗ ನಕ್ಕ. ದೊಡ್ಡ ಹೂವು ಅರಳೋಕೆ ಕಾಯಬೇಕಿಲ್ಲ ಅಂಕಲ್ ಪುಟ್ಟ ಹೂವು ಅರಳಿದರೂ ಪ್ರಕೃತಿ ಸುಂದರವಾಗುತ್ತೆ.''ಆ ಮಾತು ಅರವಿಂದನ ಮನಸ್ಸಿಗೆ ತಾಕಿತು. ಅವನು ಮೊದಲ ಬಾರಿಗೆ ತನ್ನ ಸುತ್ತಲೂ ನೋಡಿದ ಇಷ್ಟು ವರ್ಷಗಳಲ್ಲಿ ಅವನು ದೊಡ್ಡ ಕಟ್ಟಡಗಳನ್ನು ನೋಡಿದ್ದ.
ಆದರೆ ಕಟ್ಟಡದ ಗೋಡೆಯ ಬದಿಯಲ್ಲಿ ಅರಳಿದ್ದ ಪುಟ್ಟ ಹೂವನ್ನು ನೋಡಿರಲಿಲ್ಲ.ಅವನು ಸಾವಿರಾರು ಜನರ ಜೊತೆ ಮಾತನಾಡಿದ್ದ. ಆದರೆ ಪ್ರತಿದಿನ ತನ್ನನ್ನು ನೋಡಿ ಬಾಲ ಅಲ್ಲಾಡಿಸುತ್ತಿದ್ದ ಆ ಪುಟ್ಟ ನಾಯಿಯ ಪ್ರೀತಿಯನ್ನು ಗಮನಿಸಿರಲಿಲ್ಲ. ಅವನು ದೊಡ್ಡ ಸಾಧನೆಗಳನ್ನು ಬೆನ್ನಟ್ಟಿದ್ದ. ಆದರೆ ತನ್ನ ದಾರಿಯಲ್ಲಿ ಪ್ರತಿದಿನ ನಡೆಯುತ್ತಿದ್ದ ಪುಟ್ಟ ಪುಟ್ಟ ಸಾಧನೆಗಳನ್ನು ಎಂದೂ ಗೌರವಿಸಿರಲಿಲ್ಲ.ಅಂದು ಅರವಿಂದ ತನ್ನೊಳಗೆ ಹೇಳಿಕೊಂಡ ಎತ್ತರಕ್ಕೆ ಏರುವುದು ತಪ್ಪಲ್ಲ.ಆದರೆ ಎತ್ತರಕ್ಕೆ ಏರುತ್ತಾ ಹೋಗುವಾಗ, ಕೆಳಗೆ ಅರಳಿರುವ ಪುಟ್ಟ ಹೂವನ್ನ ನೋಡುವ ಕಣ್ಣು ಕಳೆದುಕೊಳ್ಳಬಾರದು." ಆ ದಿನದಿಂದ ಅವನ ಓಟ ನಿಲ್ಲಲಿಲ್ಲ. ಆದರೆ ಅವನ ಓಟದ ಅರ್ಥ ಬದಲಾಯಿತು. ಈಗ ಅವನು ದೊಡ್ಡ ಗುರಿಯ ಕಡೆ ಓಡುತ್ತಿದ್ದ. ಆದರೆ ದಾರಿಯಲ್ಲಿ ಸಿಗುವ ಪುಟ್ಟ ಹೂವಿಗೂ ಜೀವಿಗೂ ಸಾಧನೆಗೂ, ಪುಟ್ಟ ನಗುವಿಗೂ ಒಂದು ಕ್ಷಣ ಕೊಡುತ್ತಿದ್ದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!