ಕನ್ನಡಿ ಎಷ್ಟೇ ಪ್ರಯತ್ನಿಸಿದರು ತನ್ನ ಮೇಲಿನ ಕೊಳೆಯನ್ನ ಧೂಳನ್ನ ಒರೆಸಿಕೊಳ್ಳಲಾಗುತ್ತಿಲ್ಲ, ಆ ಕಾರಣಕ್ಕೆ ತನ್ನ ಮುಂದೆ ನಿಂತವರೆಲ್ಲರೂ ಕೂಡ ಸುಂದರವಾಗಿ ಕಾಣದೇ ಇರುವುದನ್ನು ಕಂಡು ಮುಖ ತಿರುಗಿಸಿ ಹೊರಟು ಹೋಗಿದ್ದಾರೆ ಆ ಕಾರಣಕ್ಕೆ ಯಾರೋ ಕನ್ನಡಿಯ ಬಳಿ ನಿಲ್ಲುತ್ತಿಲ್ಲ ಕನ್ನಡಿಗೆ ಬೇಸರವಾಯಿತು ನನ್ನ ಬದುಕು ವ್ಯರ್ಥ ಅಂದುಕೊಂಡಿತು ಅಂದದ ಮುಖ ತೋರಿಸಬೇಕಿದ್ದವನು ನನ್ನ ಬಳಿ ಯಾರು ಬರದೇ ಒಂಟಿಯಾಗಿರುವ ಪರಿಸ್ಥಿತಿಗೆ ನಾನೇ ಕಾರಣ ಅಂದುಕೊಂಡು ತನ್ನನ್ನು ತಾನು ನಾಶಪಡಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಪುಟ್ಟ ಹುಡುಗನೊಬ್ಬ ಬಂದು ಕನ್ನಡಿಯನ್ನು ಸ್ವಚ್ಛಗೊಳಿಸಿಬಿಟ್ಟ ಆ ಕ್ಷಣದಿಂದ ಹಿಡಿದು ಹೊಸ ಹೊಸ ಜನ ಹೊಸ ಮುಖಗಳು ಕನ್ನಡಿಯಲ್ಲಿ ಮುಖ ನೋಡಲಾರಂಬಿಸಿದರು ಅವರು ಬದುಕಿರೋ ಖುಷಿ ಕನ್ನಡಿಗೋ ತನ್ನ ಬದುಕಿಗೆ ಸಾರ್ಥಕ ಭಾವ ಹೊಂದಿತು. ಕನ್ನಡಿಗ ಅರ್ಥವಾಯಿತು ಕೆಲವೊಂದು ಸಲ ತಪ್ಪು ನಮ್ಮಲ್ಲಿಲ್ಲದೆ ಹೋದರು ನಮ್ಮ ಬದುಕಿನ ದಾರಿಯನ್ನ ತಿದ್ದುವವರಿದ್ದಾಗ ನಮ್ಮ ಬದುಕಲ್ಲಿ ಹೆಚ್ಚು ಹೆಚ್ಚು ಹೊಸ ಬದುಕಿದ ಹೆಜ್ಜೆಗಳು ಪ್ರವೇಶವಾಗುತ್ತದೆ ಬದುಕು ಸುಂದರವಾಗುತ್ತದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!