ರಾಮು ತುಂಬಾ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಸಣ್ಣ ಮನೆ, ಸಣ್ಣ ಕೆಲಸ, ಆದರೆ ದೊಡ್ಡ ಕನಸು ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು, ದೊಡ್ಡ ಹುದ್ದೆ ಪಡೆಯಬೇಕು.ಒಂದು ದಿನ ಮಗನಿಗೆ ತೀವ್ರ ಜ್ವರ ಬಂತು. ಆಸ್ಪತ್ರೆಗೆ ಕರೆದೊಯ್ದ. ಔಷಧಿ ಕೊಟ್ಟರೂ ಜ್ವರ ಕಡಿಮೆಯಾಗಲಿಲ್ಲ.ದಿನಗಳು ಕಳೆದವು.ರಾಮುವಿನ ಕೈಯಲ್ಲಿದ್ದ ಹಣ ಮುಗಿಯಿತು.ಸಾಲವೂ ಹೆಚ್ಚಾಯಿತು,ಡಾಕ್ಟರ್... ನನ್ನ ಮಗ ಹುಷಾರಾಗ್ತಾನಾ?" ವೈದ್ಯರು ಧೈರ್ಯ ತುಂಬಿದರು.

“ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ. ನೀವು ಧೈರ್ಯ ಕಳೆದುಕೊಳ್ಳಬೇಡಿ. ಆದರೆ ತಂದೆಯ ಮನಸ್ಸಿಗೆ ಆ ಮಾತು ಸಾಕಾಗಲಿಲ್ಲ.ಆ ಸಂಜೆ ದೇವಸ್ಥಾನದ ಹೊರಗೆ ಕುಳಿತಿದ್ದ ವೃದ್ಧನೊಬ್ಬ ರಾಮುವಿಗೆ ಒಂದು ತಾಯಿತ ಕೊಟ್ಟ ಇದನ್ನು ಮಗನ ಕೈಗೆ ಕಟ್ಟು. ದೇವರಲ್ಲಿ ನಂಬಿಕೆ ಇಡು.ರಾಮು ತಾಯಿತವನ್ನು ಕೈಗೆತ್ತಿಕೊಂಡ.ಒಂದು ಕ್ಷಣ ಅವನ ಕಣ್ಣಲ್ಲಿ ಪ್ರಶ್ನೆ ಮೂಡಿತು ಇದು ನನ್ನ ಮಗನನ್ನು ಗುಣಪಡಿಸುತ್ತದೆಯೇ?

“ಗುಣಪಡಿಸುವ ಶಕ್ತಿ ಇದಕ್ಕಿದೆಯೋ ಇಲ್ಲವೋ ಗೊತ್ತಿಲ್ಲ...ಆದರೆ ಈಗ ನಂಬಿಕೊಳ್ಳಲು ನನ್ನ ಬಳಿ ಇದೊಂದೇ ಉಳಿದಿದೆ. ಅವನು ತಾಯಿತವನ್ನು ಮಗನ ಕೈಗೆ ಕಟ್ಟಿದ.ಆ ರಾತ್ರಿ ಮಗನ ಜ್ವರ ನಿಧಾನವಾಗಿ ಕಡಿಮೆಯಾಗತೊಡಗಿತು. ಕೆಲವು ದಿನಗಳ ನಂತರ ಮಗ ಸಂಪೂರ್ಣ ಗುಣಮುಖನಾದ.

ರಾಮು ಮತ್ತೆ ದೇವಸ್ಥಾನಕ್ಕೆ ಹೋದ. ತಾಯಿತ ಕೊಟ್ಟ ವೃದ್ಧನನ್ನು ಹುಡುಕಿದ. ವೃದ್ಧ ಅಲ್ಲಿರಲಿಲ್ಲ. ಅವನಿಗೆ ಆಗ ಒಂದು ಸತ್ಯ ಅರ್ಥವಾಯಿತು-ತಾಯಿತ ಮಗನನ್ನು ಗುಣಪಡಿಸಿತೋ, ಔಷಧಿ ಗುಣಪಡಿಸಿತೋ ಅಥವಾ ತನ್ನ ಮಗ ಗುಣವಾಗುತ್ತಾನೆ ಎಂಬ ತಂದೆಯ ನಂಬಿಕೆಯೇ ಅವನನ್ನು ಉಳಿಸಿತೋ ಅವನಿಗೆ ಗೊತ್ತಿರಲಿಲ್ಲ. ಆದರೆ ಆ ದಿನದಿಂದ ರಾಮು ಒಂದು ಮಾತು ಮಾತ್ರ ನೆನಪಿಟ್ಟುಕೊಂಡ. “ವಿಜ್ಞಾನ ಕೈ ಹಿಡಿಯುವವರೆಗೂ ವೈದ್ಯರನ್ನು ನಂಬಬೇಕು; ಮನಸ್ಸು ಕುಸಿಯುವಾಗ ನಂಬಿಕೆ ಕೈ ಹಿಡಿಯಬಹುದು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ