ರಮೇಶ ಎಷ್ಟು ಹೇಳಿದರೂ ಅರ್ಥಮಾಡಿಕೊಳ್ಳುತ್ತಿಲ್ಲ ಬದುಕಿನ ಸಮಸ್ಯೆಗಳನ್ನ ಪರಿಹರಿಸಿ ಮುಂದುವರೆದು ಬಿಡಬೇಕು ಈ ಸಮಸ್ಯೆಗೆ ಕಾರಣ ಯಾರು?

ಅವರನ್ನು ಹುಡುಕಿ ಮನಸ್ಥಿತಿಯನ್ನು ಬದಲಾಯಿಸಿ ಅವರಿಂದ ಏನೂ ತೊಂದರೆಯಾಗದಂತೆ ಮಾಡುವ ದೊಡ್ಡ ಕೆಲಸವನ್ನೆಲ್ಲ ನಿನ್ನ ತಲೆಯ ಮೇಲೆ ತೆಗೆದುಕೊಳ್ಳಬೇಡ. ನಿನಗೆ ಎದುರಾದ ಸಮಸ್ಯೆಗೆ ಪರಿಹಾರ ಹುಡುಕಿ ಮುಂದೆ ಹೆಜ್ಜೆ ಹಾಕಿ ಇಡಬೇಕು ಹಾಗಾದ್ರೆ ಬದುಕು ಅದ್ಭುತವಾಗಿರುತ್ತದೆ . ರಮೇಶನ ಕೈ ಹಿಡಿದುಕೊಂಡು ನಡೆಯುವ ದಾರಿಯ ಕಡೆಗೆ ನಡೆದು ಬಿಟ್ರು. ದನದ ಸೆಗಣಿಯನ್ನು ತೋರಿಸಿ ನೋಡು ಈ ಸೆಗಣಿಯನ್ನ ಮೆಟ್ಟಿದ ಮೇಲೆ ಕಾಲು ತೊಳೆದು ಸ್ವಚ್ಚಗೊಳಿಸಿ ಮುಂದುವರೆದು ಬಿಡಬೇಕು. ಇಲ್ಲವಾದರೆ ನೀ ಹೋಗುವ ದಾರಿಯಲ್ಲಿ ಎಲ್ಲವೂ ಆ ಸಗಣಿಯ ವಾಸನೆ ಹಾಗೆ ಹರಡುತ್ತದೆ. ಅಲ್ಲದೆ ಸೆಗಣೆ ಹಾಕಿದ ದನ ಯಾವುದು ಯಾಕೆ ಹಾಕಿದ್ದೂ ಅನ್ನೋದನ್ನ ಯೋಚಿಸುತ್ತಿದೆರೆ ಮುಂದೆ ಸಾಗುವುದಕ್ಕಾಗುವುದಿಲ್ಲ. ಸಮಸ್ಯೆಗೆ ಆ ಕ್ಷಣದಲ್ಲಿ ಪರಿಹಾರ ಕಂಡು ಹಿಡಿದು ಮುಂದೆ ಹೆಜ್ಜೆ ಹಾಕಿಬಿಡು. ದೊಡ್ಡವರ ಮಾತು ಕೇಳಿದೆ ಅಂದುಕೊಳ್ತೇನೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ