ಮನೆಯ ಹಲ್ಲಿಗೆ ತನಗೆ ಗೌರವ ಸಿಕ್ಕಿಲ್ಲ ಅನ್ನುವ ಬೇಜಾರಿದೆ ಅಂತ ಅನ್ಸುತ್ತೆ ಇವತ್ತು ಎಲ್ಲೂ ಕಾಣದೆ ಇದ್ದ ಹಲ್ಲಿ ನೇರವಾಗಿ ಪಕ್ಕದಲ್ಲಿ ಬಂದು ಕತೆ ಹೇಳುವುದ್ದಕ್ಕೆ ಶುರು ಮಾಡಿತು. ನೋಡಿ ಸ್ವಾಮಿ, ನೀವು ಯಾವ ಜೀವಿಯನ್ನು ಬೇಕಾದರೂ ನೋಡಿ ನಾನು ಈ ಭೂಮಿ ಉಗಮವಾದಾಗ ಇದ್ದವನು ಅಲ್ಲಿಂದ ಇಲ್ಲಿಯವರೆಗೆ ನನ್ನ ಯಾವ ರೂಪಗಳನ್ನು ಬದಲಿಸಿಕೊಳ್ಳದೆ ಹಾಗೆ ಬದುಕಿದ್ದವನು ಆದರೆ ಅವತ್ತಿನಿಂದ ಇವತ್ತಿನವರೆಗೂ ಇದ್ದವನಾದರೂ ಕೂಡ ನನಗೆ ಒಂದು ಗೌರವವಾಗಲಿ, ಪುರಸ್ಕಾರವಾಗಿ ಸಿಕ್ತಾ ಇಲ್ಲ. ಪ್ರತಿಯೊಬ್ಬರೂ ತಿರಸ್ಕರಿಸುವವರೇ ನನ್ನ ನಿಕೃಷ್ಟ ಅಂತ ದೂರ ಮಾಡುವವರೇ. ನಾನು ಹುಳ ತಿನ್ನುವುದರಿಂದ ಮನೆ ಸ್ವಚ್ಛವಾಗಿದೆ, ಇಷ್ಟೆಲ್ಲ ಇದ್ದರೂ ನಾನು ನಿಮಗೆ ಅಸಹ್ಯ ಹುಟ್ಟುಸ್ತಾ ಇದ್ದೇನೆ. ನನ್ನ ಆಲೋಚನೆ ಇಷ್ಟೆ ನಾನು ಇಷ್ಟು ವರ್ಷದವರೆಗೆ ಏನು ಬದಲಾಗಲಿಲ್ಲ ಹಾಗೆ ಇದ್ದೇನೆ ಆದರೆ ನೀನು ಕಾಲಕಾಲಕ್ಕೆ ನಿನ್ನ ಒಳಗೂ ಹೊರಗೂ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೀಯ ಹಾಗಿರುವವನು ನೀನು ನನ್ನನ್ನು ನೋಡುವ ವಿಧಾನವನ್ನು ಬದಲಿಸಿದರೆ ಸಾಕು ನನ್ನ ಬದುಕಿಗೆ ಒಂದಷ್ಟು ನೆಮ್ಮದಿ ಸಿಗುತ್ತೆ ಹೀಗಂದು ಮೌನವಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!