ಆತನಿಗೆ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಸಿಕ್ಕಿತು. ದೇಶದಲ್ಲಿ ಎಲ್ಲಾ ಕಡೆ ಗುರುತಿಸಿದ್ದರು. ಊರಿನವರು ಕೊಂಡಾಡಿದ್ರು, ದಾರಿ ಬದಿಯಲ್ಲಿ ಆತನದ್ದೇ ಭಾವಚಿತ್ರಗಳನ್ನು ಹಾಕಿ ಶುಭಾಶಯ ಸಲ್ಲಿಸಿದ್ದರು, ಎಲ್ಲರೂ ಆದರ್ಶ ವ್ಯಕ್ತಿ ಎಂದರು. ಇವರಂತಾಗಲೇ ಬೇಕು ಎನ್ನುವುದನ್ನು ಮಕ್ಕಳಿಗೆ ತಿಳಿ ಹೇಳಿದರು. ಅವರ ಬಗ್ಗೆ ಎಲ್ಲಾ ಕಡೆಯೂ ಲೇಖನಗಳು ಪ್ರಕಟವಾದವು. ಸಾಲು ಸಾಲು ಸನ್ಮಾನಗಳು ಕಾಯುತ್ತಿದ್ದವು. ಇಷ್ಟೆಲ್ಲಾ ಘಟಿಸಿದರೂ ಕೂಡಾ ಅವಳು ಆತನನ್ನ ತನ್ನವನೆಂದು ಒಪ್ಪಿಕೊಳ್ಳಲೇ ಇಲ್ಲ. ಅವಳ ಬದುಕಿನ ಪುಟದಲ್ಲಿ ಆತನ ಹೆಸರಿಗೆ ಸ್ಥಳವೇ ಇರಲಿಲ್ಲ. ಮನೆಯವಳು ಒಪ್ಪಿಕೊಂಡ ಮಹಾನುಭಾವನಾಗದೇ ಉಳಿದುಬಿಟ್ಟನವನು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!