ನಿನಗಿನ್ನೂ ನಿನ್ನ ಬದುಕು ಸರಿಯಾಗಿ ಅರ್ಥವಾಗಿಲ್ವಾ? ಕಾರಣವೇನೆಂದರೆ ನಿನ್ನಿಂದಾಗಿ ಮನೆಯಲ್ಲಿ ಪ್ರತೀದಿನ ಹೆತ್ತವರು ನೋವು ಅನುಭವಿಸುತ್ತಾರೆ, ಅವರ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ ಎಲ್ಲವನ್ನ ತಿದ್ದಿ ತೀಡಿ ಬೆಳೆಸಿದವರಿಗೆ ಮನೆಯ ಬೆಳಕನ್ನ ಸರಿದಾರಿಯಲ್ಲಿ ದಾರಿ ತೋರುವಂತೆ ಮಾಡುವುದಕ್ಕಾಗಲಿಲ್ವಲ್ಲ ಅನ್ನುವ ನೋವು ಕಾಡುತ್ತದೆ. ಇದನ್ನ ಅರ್ಥ ಮಾಡಿಕೊಂಡು ಒಪ್ಪಿಗೆಯಾಗುವ ಹಾಗೆ ಬದುಕುವ ಜವಾಬ್ದಾರಿ ನಿನ್ನದು. ಅದನ್ನ ನಿಭಾಯಿಸಿದರೆ ನೀನು ಬದುಕಿನ ಸಾರ್ಥಕ್ಯವನ್ನು ಪಡೆದುಕೊಳ್ಳುತ್ತೀಯಾ ಇಲ್ಲವಾದರೆ ಎಷ್ಟೇ ದೂರ ಚಲಿಸಿದರು ಗುರಿ ಕಣ್ಣ ಮುಂದೆ ಇದ್ದರೂ ತಲುಪೋಕ್ಕಾಗದೆ ಅಲ್ಲಲ್ಲಿ ಅಲೆದಾಡುತ್ತೀಯ. ಬೆನ್ನ ಮೇಲೆ ಕೈ ಇಟ್ಟು ಹಿರಿಯರೊಬ್ಬರಾಡಿದ ಮಾತು ಬದುಕಿನಲ್ಲಿ ನನ್ನ ವಸ್ತು ಸ್ಥಿತಿಯನ್ನು ಮತ್ತೆ ಮತ್ತೆ ಯೋಚಿಸುವಂತೆ ಮಾಡಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ