ಅವನ್ಯಾಕ್ಕೆ ರಸ್ತೆಯ ಮೇಲೆ ಬಂದು ಬಿಸಿಲಲ್ಲಿ ನಿಂತು ತನ್ನ ಬದುಕಿನ ಹಕ್ಕುಗಳನ್ನು ಕೇಳುತ್ತಿದ್ದಾನೆ. ಹಸಿರಿನ ನಡುವೆ ನೆಮ್ಮದಿಯ ಉಸಿರಾಟ ನಡೆಸಬೇಕಿತ್ತು ತಲೆಯ ಮೇಲೆ ಬಟ್ಟೆಯನ್ನು ಇಟ್ಟು ಆಕಾಶವಲ್ಲದಿಟ್ಟಿಸಿ ತನ್ನ ಬದುಕು ಬದಲಾಗುವುದು ಯಾವಾಗ ಅಂತ ಪ್ರಶ್ನೆ ಮಾಡುತ್ತಿದ್ದಾನೆ? ತನ್ನ ಪರಿಚಯವಿಲ್ಲದ ಊರಿನಲ್ಲಿತನ್ನಂತವರೇ ಸೇರಿರುವ ಜಾಗದಲ್ಲಿ ಹಸಿರು ಶಾಲನ್ನ ಮೇಲಕ್ಕೆತ್ತಿ ನ್ಯಾಯ ಕೇಳುತ್ತಿದ್ದಾನೆ.

ಅವನಿಗೇನೋ ತೊಂದರೆ ಆಗಿದೆ ಆ ಸಮಸ್ಯೆಗೆ ಪರಿಹಾರ ಹುಡುಕಿ ಅಂಗಳದಲ್ಲಿ ನಿಂತಿದ್ದಾನೆ ನಾವು ಅವನು ಅಂಗಳದಲ್ಲಿ ನಿಂತದ್ದಕ್ಕೆ ಪ್ರಶ್ನೆ ಮಾಡುವ ಬದಲು ಆತ ಅಂಗಳದಲ್ಲಿ ಬಂದಿರುವುದಕ್ಕೆ ಕಾರಣವೇನು ಅನ್ನೋದನ್ನ ಪ್ರಶ್ನಿಸಿದರೆ ಎಲ್ಲ ಸಮಸ್ಯೆಯೂ ಪರಿಹಾರವಾದೀತು. ಹೀಗೆ ಸರಕಾರದ ಮಟ್ಟದಲ್ಲಿ ಮಾತು ಮುಂದುವರೆದಿತ್ತು ಆದರೆ ಕಾರ್ಯ ರೂಪದ ಸುದ್ದಿ ಎಲ್ಲೂ ಕೇಳಲೇ ಇಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ