ಮಗನಿಗೆ ಹಳೆಯ ಮನೆ ಮಾರಾಟ ಮಾಡಿ ಹೊಸ ಮನೆ ಖರೀದಿಸುವ ಆಸೆ. ಆದರೆ ಅಮ್ಮನಿಗೆ ಆ ಮನೆ ತನ್ನ ಗಂಡನ ನೆನಪುಗಳ ಮಂದಿರವಾಗಿತ್ತು.ಮಗನೇ, ಈ ಮನೆಯನ್ನು ಮಾರಬೇಡಪ್ಪಾ. ನಿನ್ನ ಅಪ್ಪ ಕಟ್ಟಿಸಿದ ಮನೆ ಇದು. ಈ ಗೋಡೆಗಳಲ್ಲಿ ಅವರ ನೆನಪುಗಳಿವೆ. ಈ ಅಂಗಳದಲ್ಲಿ ನೀನು ಪುಟ್ಟ ಮಗುವಾಗಿ ಆಡಿದ್ದೀಯ” ಎಂದು ಅಮ್ಮ ಬೇಡಿಕೊಂಡಳು. ಆದರೆ ಮಗನಿಗೆ ಅಮ್ಮನ ಭಾವನೆಗಳಿಗಿಂತ ಮನೆಯ ಬೆಲೆಯೇ ಮುಖ್ಯವಾಗಿತ್ತು.ಅಮ್ಮಾ ಹಳೆಯ ಮನೆಯಲ್ಲಿದ್ದು ಏನು ಪ್ರಯೋಜನ? ಹೊಸ ಮನೆಗೆ ಹೋದರೆ ಎಲ್ಲ ಸೌಕರ್ಯಗಳೂ ಸಿಗುತ್ತವೆ" ಎಂದ ಮನೆ ಮಾರುವ ದಿನ ಹತ್ತಿರವಾಯಿತು. ಅಮ್ಮ ತನ್ನ ಗಂಡನ ಫೋಟೋವನ್ನು ಎದೆಗಪ್ಪಿಕೊಂಡು ಕಣ್ಣೀರು ಹಾಕಿದಳು.ಮರುದಿನ ಬೆಳಗ್ಗೆ ಮಗ ಮನೆ ಮಾರುವ ಸಿದ್ಧತೆಯಲ್ಲಿದ್ದಾಗ, ಅಮ್ಮ ಅವನ ಕೈ ಹಿಡಿದು ಕೇಳಿದಳು: "ಮಗನೇ, ನಾನು ನಿನ್ನನ್ನು ಹೊತ್ತು ಬೆಳೆಸಿದಾಗ ನೀನು ನನಗೆ ಭಾರವಾಗಿದ್ದೀಯ ಎಂದು ಬಿಟ್ಟು ಹೋಗಿದ್ದೇನಾ? ಈಗ ನಾನು ವಯಸ್ಸಾದ ಮೇಲೆ ಈ ಮನೆ ನಿನಗೆ ಭಾರವಾಯಿತೇ?" ಆ ಮಾತು ಮಗನ ಹೃದಯವನ್ನು ತಟ್ಟಿತು. ಅವನ ಕಣ್ಣಲ್ಲಿ ನೀರು ತುಂಬಿತು. “ಕ್ಷಮಿಸಮ್ಮಾ, ಮನೆಯ ಬೆಲೆ ನೋಡಿದೆ. ಆದರೆ ನಿನ್ನ ಭಾವನೆಗಳ ಬೆಲೆಯನ್ನು ಮರೆತಿದ್ದೆ” ಎಂದು ಹೇಳಿ ಮನೆ ಮಾರುವ ನಿರ್ಧಾರವನ್ನು ಕೈಬಿಟ್ಟ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ