ಅವತ್ತು ಮನೆ ಹಿಂದಗಡೆ ಒಂದಿಷ್ಟು ನಾಯಿಗಳು ಒಟ್ಟು ಸೇರಿತ್ತು. ಆದರೆ ಕಾರಣ ಏನು ಅಂತ ಗೊತ್ತಿರಲಿಲ್ಲ ಆದರೆ ನಾನು ಕದ್ದು ಅವರ ಮಾತುಗಳನ್ನ ಕೇಳಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ನಾವಿನ್ನು ಮುಂದೆ ತರಬೇತಿ ಶಾಲೆಗಳನ್ನ ತೆರೆಯಬೇಕು ನಮ್ಮ ಕುಟುಂಬದಲ್ಲಿ ಹುಟ್ಟುವ ಪ್ರತಿಯೊಂದು ಸಣ್ಣ ಮಗುವು ಸ್ವತಂತ್ರವಾಗಿ ಬದುಕೋದು ಹೇಗೆ ಅನ್ನೋದನ್ನ ಕಲಿತುಕೊಳ್ಳಬೇಕು ಆಹಾರ ಹೇಗೆ ಹುಡುಕಬೇಕು ಎಲ್ಲಿ ಸಿಗುತ್ತೆ? ಯಾರನ್ನ ನಂಬಬೇಕು ಬಿಡಬೇಕು ಇವುಗಳನ್ನು ಚಾಚು ತಪ್ಪದೇ ಹೇಳಿಕೊಡಬೇಕು ಮುಖ್ಯವಾಗಿ ರಸ್ತೆ ದಾಟುವುದು ಹೇಗೆ ಅನ್ನೋದನ್ನ ಕಡ್ಡಾಯವಾಗಿ ಪ್ರತಿಯೊಬ್ಬರು ಕಲಿತುಕೊಳ್ಳಬೇಕು ಇಲ್ಲವಾದರೆ ದಾರಿ ಬದಿಯಲ್ಲಿ ರಸ್ತೆ ಮಧ್ಯದಲ್ಲಿಯೂ ನಾವು ಹೆಣವಾಗಿ ಬಿಡುತ್ತೇವೆ. ನಮಗೆ ಪ್ರಸ್ತುತ ಕೌಶಲ್ಯಾಧಾರಿತ ಶಿಕ್ಷಣ ತುಂಬಾ ಅವಶ್ಯಕವಾಗಿದೆ ಇಲ್ಲವಾದರೆ ನಮ್ಮ ನಾಶವನ್ನು ನಾವೇ ಕೈಯಾರ ತಂದುಕೊಳ್ಳುತ್ತೇವೆ. ಇನ್ನು ಮುಂದೆ ನಾಯಿಗಳು ಬದುಕುವ ರೀತಿ ಬದಲಾಗಬಹುದು ಅಂತ ನನಗೆ ಅನಿಸುವುದಕ್ಕೆ ಶುರುವಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!