ಅಂದು ಒಂದೇ ವೇದಿಕೆಯಲ್ಲಿ ಅತಿಥಿಗಳಾಗಿ ಕುಳಿತಿದ್ದರು. ಮುಖದಲ್ಲಿ ನಗು, ಮಾತಿನಲ್ಲಿ ಆತ್ಮೀಯತೆ, ಮನಸ್ಸಿನಲ್ಲಿ ನೂರಾರು ಕನಸುಗಳು. ವೇದಿಕೆಯ ಮೇಲೆ ನಗುತ್ತಾ, ಪರಸ್ಪರ ಮಾತನಾಡುತ್ತಾ, ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದರು.ಆದರೆ, ವಿಧಿಯ ಆಟವೇ ಬೇರೆಯಾಗಿತ್ತು.

ವಾರ ಕಳೆಯುವಷ್ಟರಲ್ಲೇ ಎಲ್ಲವೂ ಬದಲಾಗಿಹೋಗಿತ್ತು. ಅಂದು ವೇದಿಕೆಯಲ್ಲಿ ನಗುತ್ತಿದ್ದ ಮುಖಗಳು ಇಂದು ನೆನಪುಗಳಾಗಿವೆ. ಅವರ ಮಾತುಗಳು ಮೌನವಾಗಿವೆ. ಕನಸುಗಳು ಅರ್ಧದಲ್ಲೇ ನಿಂತಿವೆ. ಆಸೆಗಳು ಈಡೇರುವ ಮೊದಲೇ ಬದುಕಿನ ಪಯಣ ಮುಗಿದಿದೆ.

ಮನೆಗೆ ಮರಳುವ ಹಾದಿಯಲ್ಲಿದ್ದ ಆ ತಿರುವು, ಅವರನ್ನು ಶಾಶ್ವತವಾಗಿ ಎಲ್ಲರಿಂದ ದೂರ ಮಾಡಿಬಿಟ್ಟಿತು. ಅಂದು ಅವರಿಗಾಗಿ ಕಾಯುತ್ತಿದ್ದ ಮನೆಯವರು, ಇಂದು ಅವರ ನೆನಪುಗಳೊಂದಿಗೆ ಜೀವನ ಕಳೆಯಬೇಕಾಗಿದೆ.ನಿನ್ನೆ ವೇದಿಕೆಯಲ್ಲಿ ನಗುತ್ತಿದ್ದವರು ಇಂದು ಫೋಟೋಗಳಲ್ಲಿ ಮಾತ್ರ ಕಾಣಿಸುತ್ತಿದ್ದಾರೆ. ನಿನ್ನೆ ಜೊತೆಯಲ್ಲಿದ್ದವರು ಇಂದು ಇಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳುವುದೇ ಕಷ್ಟ. ಅಂದು ಅವರು ವೇದಿಕೆಯಲ್ಲಿ ನಗುತ್ತಿದ್ದರು. ಇಂದು ಅವರಿಲ್ಲ. ಬದುಕು ಎಷ್ಟು ಕ್ಷಣಿಕವೆಂಬುದು ಮತ್ತೊಮ್ಮೆ ಅರ್ಥ ಮಾಡಿಸಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ