ಅವಳು ಬದುಕಿದ್ದೇ ತನ್ನವರಿಗಾಗಿ. ತನ್ನ ಆಸೆ, ಕನಸುಗಳನ್ನೆಲ್ಲ ಬದಿಗಿಟ್ಟು, ಇತರರ ಸಂತೋಷದಲ್ಲೇ ತನ್ನ ಬದುಕಿನ ಅರ್ಥ ಕಂಡುಕೊಂಡವಳು.ಮದುವೆಯಾದ ಮೇಲೂ ಒಡಹುಟ್ಟಿದವಳ ಬದುಕು ಚೆನ್ನಾಗಿರಲಿ ಎಂದು ತನ್ನ ಆಸೆಗಳಿಗೆ ಕಡಿವಾಣ ಹಾಕಿದಳು.

ತನ್ನ ಕನಸುಗಳನ್ನು ಬಲಿಕೊಟ್ಟು ಅವಳ ಕನಸುಗಳಿಗೆ ಬಣ್ಣ ತುಂಬಿದಳು.ಕಾಲ ಉರುಳಿತು. ಒಡಹುಟ್ಟಿದವಳು ತನ್ನಾಸೆಗಳನ್ನೆಲ್ಲ ತೀರಿಸಿಕೊಂಡು, ತನಗೆ ಬೇಕಾದ ಬದುಕನ್ನು ಕಟ್ಟಿಕೊಂಡು ಮೆರೆದಳು.ಆದರೆ, ಅವಳ ಸುತ್ತಲಿನವರು ಮಾತ್ರ ಒಡಹುಟ್ಟಿದವಳ ಸುಂದರ ಬದುಕನ್ನು ತೋರಿಸಿ ಇವಳನ್ನು ಹಂಗಿಸುತ್ತಿದ್ದರು. ಯಾರಿಗೂ ಕಾಣಲಿಲ್ಲ, ಆ ಸುಂದರ ಬದುಕಿನ ಹಿಂದೆ ಇವಳು ಬಿಟ್ಟುಕೊಟ್ಟ ಆಸೆಗಳು. ಯಾರಿಗೂ ಕೇಳಿಸಲಿಲ್ಲ. ನಗುವಿನ ಹಿಂದೆ ಅವಳು ನುಂಗಿದ ನೋವು. ಯಾರಿಗೂ ಅರ್ಥವಾಗಲಿಲ್ಲ, ತನ್ನವರಿಗಾಗಿ ಅವಳು ಮೌನವಾಗಿ ಮಾಡಿದ ತ್ಯಾಗ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ