ಬಣ್ಣಬಣ್ಣದ ಬಲೂನುಗಳು, ಕಾರುಗಳು, ಗೊಂಬೆಗಳು ಹೀಗೆಬೇರೆ ಬೇರೆ ಆಟಿಕೆಗಳನ್ನು ತನ್ನ ಗಾಡಿಯಲ್ಲಿ ತುಂಬಿಕೊಂಡು ಮಾರಾಟಕ್ಕೆ ಹೊರಟಿದ್ದ ಆಟಿಕೆ ವ್ಯಾಪಾರಿ. ಅವನ ಪುಟ್ಟ ಮಗನಿಗೆ ಕಾರುಗಳೆಂದರೆ ಎಲ್ಲಿಲ್ಲದ ಪ್ರೀತಿ.
"ಅಪ್ಪಾ, ನನಗೆ ಕಾರುಗಳೆಂದರೆ ತುಂಬಾ ಇಷ್ಟ ಅಲ್ವಾ? ಹಾಗಾದರೆ ಗಾಡಿಯಲ್ಲಿ ಇಷ್ಟೆಲ್ಲ ಆಟಿಕೆಗಳನ್ನು ಯಾಕೆ ತುಂಬಿಕೊಂಡಿದ್ದೀಯ ಕಾರುಗಳನ್ನು ಮಾತ್ರ ತೆಗೆದುಕೊಂಡು ಹೋಗಬಾರದಾ?” ಮಗೂ, ನಿನಗೆ ಕಾರು ಇಷ್ಟವೆಂದು ಇಡೀ ಜಗತ್ತಿಗೂ ಕಾರೇ ಇಷ್ಟವಾಗಬೇಕೆಂದಿಲ್ಲ. ಒಬ್ಬರಿಗೆ ಬಲೂನು ಇಷ್ಟವಾಗಬಹುದು, ಮತ್ತೊಬ್ಬರಿಗೆ ಗೊಂಬೆ, ಇನ್ನೊಬ್ಬರಿಗೆ ಬೇರೆ ಯಾವುದೋ ಆಟಿಕೆ ಇಷ್ಟವಾಗಬಹುದು.
ನನಗೆ ನೀನು ಇಷ್ಟಪಡುವ ಕಾರುಗಳೇ ಇಷ್ಟವೆಂದುಕೊಂಡು ಕಾರುಗಳನ್ನು ಮಾತ್ರ ಮಾರಾಟಕ್ಕೆ ತೆಗೆದುಕೊಂಡು ಹೋದರೆ, ಬಲೂನು ಬಯಸುವ ಮಗುವಿಗೆ ಏನು ಕೊಡಲಿ? ಗೊಂಬೆ ಬಯಸುವ ಮಗುವಿಗೆ ಏನು ಮಾರಲಿ?ನನ್ನ ಇಷ್ಟವನ್ನೇ ಎಲ್ಲರ ಇಷ್ಟವೆಂದು ಭಾವಿಸಿದರೆ ನನ್ನ ವ್ಯಾಪಾರ ನಡೆಯುತ್ತದೆಯೇ? ಆದ್ದರಿಂದಲೇ ಎಲ್ಲರ ಇಷ್ಟವನ್ನೂ ಅರ್ಥಮಾಡಿಕೊಳ್ಳಬೇಕು. ಅವರವರ ಇಷ್ಟಕ್ಕೆ ತಕ್ಕಂತೆ ವಸ್ತುಗಳನ್ನು ತೋರಿಸಬೇಕು. ಆಗಲೇ ನನ್ನ ವ್ಯಾಪಾರವೂ ನಡೆಯುತ್ತದೆ, ಎಲ್ಲರಿಗೂ ಸಂತೋಷವೂ ಸಿಗುತ್ತದೆ."
ಮಗ ತಂದೆಯ ಮಾತುಗಳನ್ನು ಮೌನವಾಗಿ ಕೇಳುತ್ತಿದ್ದ. ತಂದೆ ಮತ್ತೆ ಗಾಡಿಯನ್ನು ತಳ್ಳುತ್ತಾ ಮುಂದೆ ಸಾಗಿದ. ಗಾಡಿಯಲ್ಲಿದ್ದ ಆಟಿಕೆಗಳು ಒಂದಕ್ಕೊಂದು ತಾಗಿ ಸದ್ದು ಮಾಡುತ್ತಿದ್ದವು. ಆ ಸದ್ದಿನ ನಡುವೆ ಒಂದು ಬದುಕಿನ ಪಾಠವೂ ಕೇಳಿಸುತ್ತಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!