ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆಯಿಂದ ಅತ್ಯಾಚಾರದ ಆರೋಪಿಯು ಬಿಡುಗಡೆಯಾದ. ತಾನು ನಿರಪರಾಧಿ ಎಂದು ಸಾಬೀತಾದವನಂತೆ ಅವನು ಮತ್ತೆ ಸ್ವತಂತ್ರವಾಗಿ ಬದುಕತೊಡಗಿದ. ಅವನ ಬದುಕಿನಲ್ಲಿ ಎಲ್ಲವೂ ಮೊದಲಿನಂತೆಯೇ ಇತ್ತು. ಕುಟುಂಬದವರೊಂದಿಗೆ ನಗು, ಸಂತೋಷ, ನೆಮ್ಮದಿ ಯಾವುದಕ್ಕೂ ಕೊರತೆಯಿರಲಿಲ್ಲ.ಆದರೆ, ಅವನಿಂದ ಬದುಕು ಕಳೆದುಕೊಂಡ ಆಕೆಯ ಜೀವನ ಮಾತ್ರ ಮೊದಲಿನಂತಿರಲಿಲ್ಲ. ಸಮಾಜದ ಪ್ರಶ್ನೆಗಳು, ಜನರ ದೃಷ್ಟಿ, ನೆನಪುಗಳ ನೋವು ಅವಳನ್ನು ಪ್ರತಿದಿನವೂ ಕಾಡುತ್ತಿದ್ದವು. ನ್ಯಾಯಾಲಯದ ತೀರ್ಪು ಅವನನ್ನು ಬಿಡುಗಡೆ ಮಾಡಿತ್ತು. ಆದರೆ ಅವಳ ಮನಸ್ಸಿಗೆ ನ್ಯಾಯ ಸಿಕ್ಕಿರಲಿಲ್ಲ. ಸಾಕ್ಷಿಗಳಿಲ್ಲವೆಂದು ಆರೋಪಿ ಬಿಡುಗಡೆಯಾದ. ಆದರೆ ಅವಳ ಕಣ್ಣೀರಿನ ಸಾಕ್ಷಿ ಹೇಳುವವರು ಯಾರು?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!