ಮೊಳೆಗೆ ಮತ್ತು ಗಮ್ ಹುಕ್ ಗೆ ಜಗಳ ಶುರುವಾಗಿತ್ತು. ಜಗಳ ಅನ್ನುವುದಕ್ಕಿಂತ ವಾದ ವಿವಾದ ಅಂತ ಅಂದುಕೊಳ್ಳಬಹುದು. ಇಬ್ಬರ ಪ್ರಕಾರ ಅವರವರೇ ಶ್ರೇಷ್ಠರು. ಮೊಳೆ ಹೇಳೋದಿಷ್ಟು ನಾನು ಗೋಡೆಯಳೋಕ್ಕೆ ಮರದೊಳಕ್ಕೆ ಹೋದರೆ ಗಟ್ಟಿಯಾಗಿ ನಿಂತುಬಿಡುತ್ತೇನೆ.

ನನ್ನ ಮೇಲೆ ಎಷ್ಟೇ ಭಾರವನ್ನು ಹಾಕಿದ್ರೂ ನಾನು ತಡೆದುಕೊಳ್ಳುತ್ತೇನೆ. ಅದಕ್ಕೆ ಗಮ್ ಹುಕ್ಕಿನ ಪ್ರತಿವಾದ ಏನಂದರೆ ನೀನು ಒಂದು ಸಲ ಅಲ್ಲಿಂದ ಸ್ಥಳ ಬದಲಾಯಿಸಿದ ಮೇಲೆ ನೀನಿದ್ದ ಗುರುತನ್ನ ಬಿಟ್ಟು ಹಾಗೆ ಹೋಗಿ ಬಿಡ್ತೀಯಾ ಅದು ನೋಡುವ ಕಣ್ಣುಗಳಿಗೆ ಕೊಳಕಾಗಿರುತ್ತದೆ. ಗಮ್ ಹುಕ್ಕ ವಾದವೆಂದರೆ ನಾನು ಯಾವ ಕ್ಷಣ ಯಾವ ಸ್ಥಳದಲ್ಲಿ ತುಂಬ ಸುಲಭವಾಗಿ ಯಾವುದೇ ವಿಷಯವನ್ನು ನೇತು ಹಾಕಲು ತಯಾರಾಗುತ್ತೇನೆ. ನಾನು ನನ್ನ ಸ್ಥಳವನ್ನು ಬಿಟ್ಟು ಹೋದ ಮೇಲೆ ಯಾವುದೇ ಗುರುತನ್ನ ಬಿಟ್ಟು ಹೋಗೋದಿಲ್ಲ ಅದಕ್ಕೆ ಮೊಳೆಯ ವಾದವಿದ್ಯೆ, ನೀನು ಹೆಚ್ಚು ಭಾರವನ್ನ ಹೋರಲು ಸಾದ್ಯವಿಲ್ಲ. ಭಾರ ಹೆಚ್ಚಾದರೆ ನೀನು ನಿನ್ನ ಸ್ಥಿರವನ್ನ ಕಳೆದುಕೊಳ್ಳುತ್ತೀಯಾ ಇಬ್ಬರ ವಾದ ವಿವಾದ ಮುಂದುವರೆದಿತ್ತು ಉತ್ತರ ಕೊನೆಗೂ ಸಿಗಲಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ