Dictionary ಸ್ಕೂಲ್ !

ಮೊನ್ನೆ ನನ್ನ ಮೊಮ್ಮಗ ಹರಿ ಶಾಲೆಯಿಂದ ಬಂದವನೇ ಇವತ್ತು ನಮ್ಮ ಕ್ಲಾಸಿಗೆ ಒಂದು ಹೊಸ ಅಡ್ಮಿಷನ್. ನನಗೂ ಫ್ರೆಂಡ್ ಆದ' ಎಂದು ವರದಿ ಶುರು ಮಾಡಿದ.

'ಹೌದಾ. ಯಾವ ಶಾಲೆಯಿಂದ ಬಂದಿರೋದು?' ಎಂದು ಕುತೂಹಲದಿಂದ ಕೇಳಿದೆ. Dictionary ಸ್ಕೂಲ್ ಎಂದಾಗ ಅರ್ಥವಾಗದೇ "ಅದ್ಯಾವ ಸ್ಕೂಲು ಕೇಳಿದಂತಿಲ್ಲ. ಹೊಸತಾಗಿದೆ' ಎಂದು ಹುಬ್ಬೇರಿಸಿದೆ. ಅವನು ಪಕಪಕನೆ ನಗುತ್ತ "oxford ಸ್ಕೂಲ್' ಎನ್ನಬೇಕೆ ?

ಮನೆಯಲ್ಲಿದ್ದ oxford dictionaryಯಿಂದ ಪ್ರೇರಿತನಾಗಿ ಈ ಜಾಣೆ ತೋರಿದ್ದು ನನ್ನ ಪೆದ್ದು ತಲೆಗೆ ಹೊಳೆಯದೆ ಪೆಚ್ಚಾದೆ!

-ಕೆ.ವಿ. ರಾಜಲಕ್ಷ್ಮಿ

***

ಮೇಕಪ್ ಎಫೆಕ್ಟ್

ಎಂಟು ತಿಂಗಳ ನನ್ನ ಮೊಮ್ಮಗ ಅಗಸ್ತ್ಯನಿಗೆ ಲಾಲಿ ಪದ ಹಾಡಿ ಜೋಲಿಯಲ್ಲಿ ಮಲಗಿಸುವುದು, ಆಡಿಸುವುದು ನನ್ನ ಇತ್ತೀಚಿನ ದಿನಚರಿ ಆಗಿದೆ.

ಮನೆಯಲ್ಲಿ ಒಂದು ನೈಟಿ ತಗಲಾಕಿಕೊಂಡು ಇರುತ್ತಿದ್ದ ನಾನು ಆ ದಿನ ಕಾರ್ಯಕ್ರಮಕ್ಕೆ ಹೋಗಲು ಅಲ್ಪ ಮೇಕಪ್‌ನೊಂದಿಗೆ ಯಾವುದೋ ಸೀರೆ ಮತ್ತು ತಯಾರಾಗಿ, ಮೊಮ್ಮಗ ಅಗಸ್ತ್ಯನನ್ನು ಎತ್ತಿಕೊಂಡು ಮುದ್ದು ಮಾಡಲು ಹೋದರೆ ನನ್ನ ಗುರುತು ಭಿನ್ನ ఎనిసి ಯಾರೋ ಅಪರಿಚಿತರು ಎತ್ತಿಕೊಂಡಿದ್ದಾರೆ ಎಂದು ನನ್ನ ಮುಖ ನೋಡಿ ನೋಡಿ ಜೋರಾಗಿ ಅಳಲು ಶುರು ಮಾಡಿದ! ಇದರಿಂದ ಬೇಸ್ತು ಬೀಳುವ ಸರದಿ ಮಗ, ಸೊಸೆ ಹಾಗೂ ನನ್ನದಾಗಿತ್ತು.

-ಟಿ.ಎಸ್. ಪ್ರತಿಭಾ

***

ಗುಂಡನ ಗೊಂದಲ

'ಯಾಕೆ ಗುಂಡ? ಕನ್‌ಪ್ಯೂಸ್ ಆಗಿದ್ದೀಯಾ. ಏನಾಯ್ತು? ನಿನ್ನೆ ನಿನ್ನ ರಿಪೋರ್ಟ್ ಕಾರ್ಡು ಅಪ್ಪ, ಅಮ್ಮಂಗೆ ತೋರಿಸಿದ್ಯಾ. ಸೈನ್ ಮಾಡ್ಸಿದೀಯಾ?' ಅಂತ ಮೇಷ್ಟ್ರು ಕೇಳಿದರು.

'ಇಲ್ಲ ಸಾರ್, ನಾನು ಆ ದೇವ್ರನು ಕೇಳಿದೆ. ನನ್ನ ರಿಪೋರ್ಟ್ ಕಾರ್ಡು ಸ್ಥಿತಿ ಐಸಿಯು ಸ್ಥಿತಿಯಲ್ಲಿದೆ ಏನ್ಮಾಡೋದು ಅಂತ ಪಾಪ, ಆ ದೇವ್ರು ಸಂದಿಗ್ಧಕ್ಕೆ ಸಿಲುಕಿ ಏನ್ಮಾಡೋದೋ ಗುಂಡಾ. ನಂಗೂ ಕನ್‌ಪ್ಯೂಸ್ ಆಗಿದೆ. ನಿನ್ನ ರಿಪೋರ್ಟ್ ಕಾರ್ಡಿನ ಐಸಿಯು ಸ್ಥಿತಿಯನ್ನು ನಾನು ನೋಡಬಲ್ಲೆ, ಆದರೆ, ಈ ಸ್ಥಿತಿ ಅಪ್ಪ- ಅಮ್ಮಂಗೆ ಗೊತ್ತಾದ್ರೆ ನೀನು ನಿಜವಾಗಲೂ ಅದೇ ಸ್ಟೇಜ್‌ಗೆ ಹೋಗ್ತಿಡ್ತೀಯೇನೊ ಅಂತ ನಂಗೂ ಸಂದಿಗ್ಧತೆ ಕಣೋ' ಅಂತಂದ ಸಾರ್ ದೇವ್ರು. ಅದಕ್ಕೇ ನಂಗೂ ಸ್ವಲ್ಪ ಕನ್‌ಪ್ಯೂಸ್ ಅಂದಾಗ ಎಲ್ಲೂ ಚೆನ್ನಾಗಿ ನಕ್ಕರು, ಗುಂಡ ನಗಲಿಲ್ಲ.

-ಸುಮನಾ

***

ಜ್ಞಾನೋದಯ!

ಒಂದು ಭಾನುವಾರ ಗುಂಡನ ಪತ್ನಿ ಕೇಳಿದಳು. ರೀ, ಒಂದು ವೇಳೆ ಎರಡು-ಮೂರು ದಿನ ನಿಮಗೆ ನಾನು ಕಾಣಿಸಿಕೊಳ್ಳದಿದ್ದರೆ ನಿಮಗೇನನ್ನಿಸುತ್ತದೆ?' ಮನೆಯಲ್ಲಿ ಪತ್ನಿಯ ಗೈರು ಹಾಜರಿಯನ್ನು ನೆನೆಸಿಕೊಂಡೇ ಆನಂದ ತುಂದಿಲನಾಗಿ ಗುಂಡ ಅದೇ ಭಾವ ಪರವಶತೆಯಲ್ಲಿ ಉತ್ತರಿಸಿದ, 'ನನಗೆ ತುಂಬಾ ಖುಷಿಯಾಗುತ್ತದೆ'. 

ಆ ಬಳಿಕ ಸೋಮವಾರ ಆತನಿಗೆ ಪತ್ನಿ ಕಾಣಿಸಲಿಲ್ಲ. ಮರುದಿನ ಅಂದರೆ ಮಂಗಳವಾರ ಕಾಣಿಸಲಿಲ್ಲ. ಬುಧವಾರವೂ ಆಕೆ ಕಾಣಿಸಲಿಲ್ಲ. ಗುರುವಾರದ ದಿನ ಯಾವಾಗ ಆತನ ಕಣ್ಣುಗಳ ಬಾವು ಕೊಂಚ ಕಡಿಮೆಯಾಯಿತೋ ಆವಾಗ ಸ್ವಲ್ಪ ಸ್ವಲ್ಪವೇ ಕಾಣಿಸಲಾರಂಭಿಸಿದಳು! ಅಂದಿನಿಂದ ಪತ್ನಿಯ ಯಾವುದೇ ಪ್ರಶ್ನೆಗೆ ಉತ್ತರಿಸುವ ಮುನ್ನ ಎರಡೆರಡು ಬಾರಿ ಯೋಚಿಸುವಷ್ಟು ಪ್ರಜ್ಞಾವಂತನಾದ ಗುಂಡ!

-ರಮಣ್ ಶೆಟ್ಟಿ ರೆಂಜಾಳ

ಕಲೆ: ಗಣೇಶ ಆಚಾರ್ಯ

(‘ಮಯೂರ’ ಸೆಪ್ಟೆಂಬರ್ ೨೦೨೫ರ ಸಂಗ್ರಹಿತ)