ಜಯಪ್ರಕಾಶ
jayaprakash M.G
ಜೊಳ್ಳುಗನ್ನಡಿ
ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು ಭಾರಿಬೇಟೆಯ ಕವಳದಾಸೆಗೆ ಜೇಡನಿಳಿದನು ಎಳೆಯ ಜಾಡಲಿ ಹಿಡಿಯಲೇ...
ನಿಸರ್ಗನರ್ತನ.
ಜೇಡನಿಳಿಸಿದ ಬಯಲಿನೆಳೆಯೊಳು ಸಿಲುಕಿನಿಂತಿಹ ನೀರಹನಿಯೊಳು ಬಾಲಭಾಸ್ಕರ ಬಿಂಬ ತುಂಬಿಹ ಸಾಲುಹನಿಗಳ ತುಂಬು ಹೊಳಪಿನ ಸೌರಬಿಂಬದ ಇಂದ್ರಚಾಪದ ಸುಪ್ತವಾಗಿಹ ಸಪ್ತವರ್ಣದ ಬಳುಕುತೇಳುವ ಎಳೆಯ ಬೆಳಕಿನ ಬಣ್ಣದಾಟದ ನೀರಹನಿಗಳ ಸಾಲುಮಣಿಗಳ ನಿಸರ್ಗನರ್ತನ. ಚಿತ...
ಗಂಗಾ
ಜುಳುಜುಳು ಹರಿಯುವೆ ಮಂಜುಳದನಿಯಲಿ ಥಳಥಳ ಹೊಳೆಯುತ ಕಲ್ಮಷ ತೊಳೆಯುವೆ ಕವಿಗಳ ಕಿವಿಗಳ ಮೊರೆಯುತ ಸುರಿಯುವೆ ಗಿರಿಗಳ ಬಳಸುತ ಧುಡುಧುಡು ಧುಮುಕುವೆ ಧರೆಯಲಿ ಹಸಿರಿನ ಪುಳಕದ ಸಿರಿಯನು ಕೊನರಸಿ ಪಸರಿಸಿ ಮನುಜರ ಪೊರೆಯುವೆ ತಟಗಳ ತಾಡಿಸಿ ಕೋಪವ ತಾಳುವೆ ಪ...
ಕಡುಗಲಿ ಕೊಡವರ ಕನ್ನಡ ಕಲರವ
ಕೊಡಗಲಿ ಮೊಳಗಿದ ಕನ್ನಡ ದುಂದುಭಿ ಕಡುಗಲಿ ಕೊಡವರ ಕನ್ನಡ ಕಲರವ ಕೋವಿಯ ಗುಡುಗಿಸಿ ವೈರಿಯ ನಡುಗಿಸಿ ಕದನದಿ ದಣಿಯದ ಕಡುಗಲಿ ಕೊಡವರ ಸಿಂಹದ ನಾದದ ವಿಜಯದ ಘೋಷದಿ ಕನ್ನಡ ಕಾವ್ಯದ ಕಹಳೆಯ ಮೊರೆತ ಕಾವೇರಿ ಕಣಿವೆಯ ಪುಣ್ಯದ ಮಕ್ಕಳು ಭಾರತ ಮಾತೆಯ ಹೆಮ್ಮೆಯ...
ಗಜಪಡೆಯ ಗೋಳಾಟ
ಬಿಳಿದಾದ ಕರಿಕೊಂಬು ಮೊರದಗಲ ಗಜಕರ್ಣ ಮಾರುದ್ದ ಕರಿಮೂಗು ಪಿಳಿಪಿಳಿಯ ಸಣ್ಕಣ್ಣು ಉಬ್ಬುಬ್ಬು ಗಜಕುಂಭ ಮದ್ದಾನೆ ಪುಂಡಾಟ ಅಬ್ಬಬ್ಬ ಕಾಲ್ಕಂಬ ದೊಡ್ದಾದ ಗುಡಾಣ್ದ್ಹೊಟ್ಟೆ ಕಿವಿಯೊಡೆಯೊ ಘೀಳಾಟ ಬಲುಚಂದ ಮರಿಯಾಟ ಬಲುಮೆಚ್ಚು ಬೆಲ್ದಚ್ಚು ದುಃಸ್ವಪ್ನ ಕಾ...
ಮಾಯಾಚೌಕದ ಮೋಜಿನಮೊತ್ತ
ಇಂದ್ರನಿಗೊಂದು ವಾಯುವಿಗೆರೆಡು ಯಮನಿಗೆ ಮೂರು ನೈರುತ್ಯಗೆನಾಲ್ಕು ಮಧ್ಯಕೆ ಐದು ಈಶಾನ್ಯನಿಗಾರು ಕುಬೇರನಿಗೇಳು ಅಗ್ನಿಗೆ ಎಂಟು ವರುಣನಿಗೊಂಭತ್ತು ಗಣಿತದ ಗಮ್ಮತ್ತು ಮಾಯಾಚೌಕದ ಮೋಜಿನಮೊತ್ತದ ಲೆಕ್ಕದ ಆಟವೆ ಮುಗಿದಿತ್ತು.
ಗಣಿತದ ಮಾಯಾ ಚೌಕಗಳು
ಮಾಯಾ ಚೌಕದ ಮೋಜಿನ ಮೊತ್ತದ ಲೀಲಾವತಿ ಗ್ರಂಥದ ಸುಲಭದ ಸೂತ್ರ ಅಕ್ಷರ ಸೃಷ್ಟಿಯು ಜ್ಞಾನದ ಉಳಿವಿಗೆ ಸಂಖ್ಯಾ ಸೃಷ್ಟಿಯು ವಿಜ್ಞಾನದ ಬೆಳಕಿಗೆ ಸಂಖೆಯ ಹಂಚುವೆ ಅಷ್ಟದಿಕ್ಪಾಲಕರಿಗೆ ನಾರದ ಮುನಿಗಳೆ ಸೇರಿಸಿ ಸಭೆಯನು ಹೇಳಿದ ಗಣಪನು ಮೋದಕ ಸವಿಯುತ ಕರೆದರು...
ಗುರಜ್ಜನೂ ಹುಣಿಸೆಮರದ ಮೋಹಿನಿಯೂ
ಅಗ್ಗದ ಬಾಡಿಗೆ ಕಲ್ಲಿನ ಮನೆಗಳ ಓದುವ ಕೋಣೆಯ ವಠಾರ ವಾಸದಿ ದೂಡಿದ ದಿನಗಳ ನೆನಪಿನ ಅಂಗಳ ಭಾರೀ ಗಾತ್ರದ ಹುಣಿಸೆಯ ಮರದ ಕೊಂಬೆಯ ನೆರಳಿನ ತಂಪಿನ ತಾಣದಿ ನಲಿಯುತ ಕಳೆದಿಹ ಸಾಹಸ ದಿನಗಳು ಈಗಿನ ದಿನಗಳ ದಿನಚರಿ ನೀರಸ ಬೀಡಿಯ ಸೇದುತ ಗೂರಲು ಗುರಜ್ಜ ಹೇಳಿ...
ದೆವ್ವದ ನೆನೆಪಲಿ..
ಮೂಡಣ ಗಾಳಿಯ ತಣ್ಣನೆ ದಿನಗಳ ನೀರವ ನಿಶ್ಶಬ್ದ ರಾತ್ರಿಯ ಹೊತ್ತಲಿ ನಿದ್ದೆಯ ಕೆಡಿಸುವ ಕಿವಿಗಡಚಿಕ್ಕುವ ಕಿವಿಗಳ ಗುರ್ಮಿಯು ಸಿಡಿಯುವ ಪರಿಯಲಿ ರುಮುರುಮು ರುಮ್ಮಿಯ ತೀಡುವ ಹೊಡೆತಕೆ ಊರಿನ ದೇವತೆ ದುರುಗೆಯ ಪೌಳಿಯ ಗುಡಿಯಲಿ ನಡೆದಿಹ ದೇವಿಯ ಹೊರಡಿಸೊ...