ನಿನ್ನೆಯ ನೆನಪುಗಳು!
ನಾನು*: ಇಂದೇಕೋ ಬಾಲ್ಯದ ನೆನಪುಗಳು ಮೇಳೈಸುತ್ತಿವೆ ಈ ನನ್ನ ಮನದಂಗಳದಲ್ಲಿ, ಹನಿಗಳು ಬೇಡ ಬೇಡವೆಂದರೂ ಹೆಪ್ಪುಗಟ್ಟುತ್ತಿವೆ ಈ ಕಂಗಳಂಚಿನಲ್ಲಿ! ಆತ**: ಈ ನಿನ್ನೆಗಳೇ ಹಾಗೆ ಮೆಲುಕು ಹಾಕುತ್ತಿದ್ದಷ್ಟೂ ಕೊಡುತ್ತವೆ ಈ ಮನಸ್ಸಿಗೊಂದಷ್ಟು ಸವಿಯಾದ ನೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ನಾನು*: ಇಂದೇಕೋ ಬಾಲ್ಯದ ನೆನಪುಗಳು ಮೇಳೈಸುತ್ತಿವೆ ಈ ನನ್ನ ಮನದಂಗಳದಲ್ಲಿ, ಹನಿಗಳು ಬೇಡ ಬೇಡವೆಂದರೂ ಹೆಪ್ಪುಗಟ್ಟುತ್ತಿವೆ ಈ ಕಂಗಳಂಚಿನಲ್ಲಿ! ಆತ**: ಈ ನಿನ್ನೆಗಳೇ ಹಾಗೆ ಮೆಲುಕು ಹಾಕುತ್ತಿದ್ದಷ್ಟೂ ಕೊಡುತ್ತವೆ ಈ ಮನಸ್ಸಿಗೊಂದಷ್ಟು ಸವಿಯಾದ ನೋ...
ಮಾನವ ದೇಹವಿದುನಿಜದಿ ಭೂಮಿಯ ಚಿಕ್ಕದಾದ ರೂಪ ಭೂಮಿಯಂತೆಯೇ ಇದೂನಿಗೂಢ ಚಟುವಟಿಕೆಗಳ ಕೂಪ ಕಾಡು ಮೇಡುಗಳಿವೆಭುವಿಯ ಮೇಲ್ಮೈಯಲ್ಲಿರುವಂತೆ ದಿಣ್ಣೆ ಕಣಿವೆಗಳೂ ಇವೆಭೂಮಿಯುದ್ದಗಲಕೂ ಇರುವಂತೆ ಇಲ್ಲಿ ಕ್ರಿಮಿ ಕೀಟಾಣುಗಳ ವಾಸಅಲ್ಲಿ ಪ್ರಾಣಿ ಪಕ್ಷಿ ಸಂಕುಗ...
ನಿನ್ನೊಳಗೇ ನಾನಿಹೆನು ಸತ್ಕಾರ್ಯಗಳ ಮಾಡಿ ಪ್ರೀತಿಯ ನುಡಿಗಳನಾಡಿ ನಿನ್ನಾತ್ಮವ ಮೆಚ್ಚಿಸಿಕೋ ನನಗೆ ಮಡಿಯ ಮಾಡಿಸಲು ನೀನು ನೀರನ್ನೆಲ್ಲಿಂದ ತರುವೆ ನೀನೇ ಹಸಿದಿದ್ದು ಒಳಗಿರುವ ನನ್ನನ್ನೇಕೆ ಬರಿದೆ ಕೊಲುವೆ ದೇಗುಲದಾ ಶಿಲೆಗಳಲಿ ನಾನಿಲ್ಲ ಎಂದೆನ್ನುವ...
ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ ಬರಿಯ ಚಿತ್ರವಲ್ಲವದು ಒಂದು ಸುಂದರ ಸಂವಾದ ನಾ ವೀಕ್ಷಿಸುತ್ತಿದ್ದಾಗ ಚಿತ್ರ ನಾನೂ ನನ್ನ ಕನಸೂ ಮುದಗೊಂಡೆವು ಅಂದು ನಾನೂ ನನ್ನ ಮನಸೂ
ನಡೆಯಲು ಅಪ್ಪಣೆಕೊಟ್ಟು ಕಾಲುಗಳನ್ನು ನೀಡಿದವನ ಮಾತನ್ನೇ ಮೀರಿ ರೆಕ್ಕೆ ಕಟ್ಟಿಕೊಂಡು ಬಾನಿನಲ್ಲಿ ಹಾರುವ ಹಾರಾಟ ಇಲ್ಲಿ ಎಲ್ಲವೂ ನಿನ್ನದೇ ಹಾಗಾದರೆ ನನ್ನದೇನಿಲ್ಲವೇ ಎಂದ ಆ ದೇವರು ಮುನಿಸಿಕೊಂಡು
ಹಗಲೆಲ್ಲಾ ನನ್ನ ಬೆಂಗಾವಲಿಗಿರುವ ನನ್ನ ನೆರಳೂ ರಾತ್ರಿಯ ಕತ್ತಲೆಯಲ್ಲಿ ನನ್ನನ್ನು ಬಿಟ್ಟು ಕಾಣೆಯಾಗುವುದೇಕೆ? ಬಾಳ ಬಟ್ಟೆಯಲಿ ಕತ್ತಲಾವರಿಸಿ ದಿಕ್ಕುಕಾಣದೇ ತತ್ತರಿಸಿದಾಗ ಆಪ್ತರಾದವರೂ ಕೈಬಿಡುವರೆಂಬ
ಬಸ್ಸಿಗಾಗಿ ಕಾಯುತ್ತಲಿದ್ದೆ ನಾನೊಬ್ಬನೇ ಜೊತೆಗೆ ಆ ನಿಲ್ದಾಣ ಸೂರ್ಯಕಿರಣಗಳು ತಮ್ಮ ಕೋನ ಬದಲಿಸಿದರೂ ಬಸ್ಸು ಬರಲೇ ಇಲ್ಲ ನುಡಿಯಿತು ಬೇಸತ್ತ ಆ ನಿಲ್ದಾಣ ಏನ್ರೀ ಸ್ವಾಮೀ ಸ್ವಲ್ಪ ಸುತ್ತಾಡಿಕೊಂಡು ಬನ್ನಿ ನನಗೂ ಇದೆ ಏಕಾಂತದಾಸೆ!
ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ಆ ದೇವರ ಮಹಿಮೆಗಳ ಕಂಡು ಬರಿದೆ ಅಚ್ಚರಿಪಡುವೆ, ಹಾಡಿ ಕೊಂಡಾಡಲು ನಾನು ಹರಿದಾಸನಲ್ಲ! -ಆತ್ರಾಡಿ ಸುರೇಶ ಹೆಗ್ಡೆ
ವಧೂವರರ ಮೊದಲ ರಾತ್ರಿ ಕೋಳಿ ಕೂಗಿನ ಸದ್ದು ಕೇಳಿಸಿದಾಗ, ರಾತ್ರಿ ಹೇಳಿತು ಕ್ಷಮಿಸಿ ನನಗೇಕೋ ಜೊಂಪೇರುತ್ತಿದೆ ನಾನಿನ್ನು ನಿದ್ರಿಸುತ್ತೇನೆ, ಸರಿಯೆಂದ ವಧೂವರರು, ರಾತ್ರಿಗೇ ನುಡಿದರು "ಶುಭರಾತ್ರಿ"! - ಆತ್ರಾಡಿ ಸುರೇಶ ಹೆಗ್ಡೆ
ನಾನು ನಡೆಯುತ್ತಲೇ ಇದ್ದೆ ನನ್ನ ಜೊತೆ ಜೊತೆಗೆ ಸಾಗಿದ್ದ ಹಾದಿ ಕೇಳಿತು ನಾವೀಗ ಸ್ವಲ್ಪ ವಿರಮಿಸೋಣವೇ... ನನಗೇಕೋ ತುಂಬಾ ಸುಸ್ತಾಗಿದೆ! - ಆತ್ರಾಡಿ ಸುರೇಶ ಹೆಗ್ಡೆ
ದಿನವೂ ಭೇಟಿಯಾಗುವವರೆಲ್ಲಾ ಈ ಹೃದಯಕ್ಕೆ ಹತ್ತಿರದವರೆಂದೇನೂ ಅಲ್ಲ ಈ ಹೃದಯಕ್ಕೆ ಹತ್ತಿರವಿರುವ ಹೆಚ್ಚಿನವರು ಅದ್ಯಾಕೋ ದೂರವೇ ಇರುವರೆಲ್ಲಾ ಮನದ ಮಾತಿದು ಸಖೀ, ದಿನಾ ನಿನ್ನ ಭೇಟಿಯಾಗುವವರಷ್ಟು ಭಾಗ್ಯಶಾಲಿ ನಾನಲ್ಲ...!
ವಿಶೇಷ ವ್ಯಕ್ತಿಗಳೊಂದಿಗೇ ನನ್ನ ಸ್ನೇಹ ಆಗುವುದಲ್ಲ ನನ್ನ ಸ್ನೇಹಗಳಿಸಿ ವಿಶೇಷ ವ್ಯಕ್ತಿಗಳಾಗುವರೆಲ್ಲಾ ನೀನೂ ಜನಿಸಿದ್ದೆ ಸಾಮಾನ್ಯ ವ್ಯಕ್ತಿಯಾಗಿ ವಿಶೇಷ ವ್ಯಕ್ತಿಯಾದೆ ನನ್ನ ಸ್ನೇಹಿತೆಯಾಗಿ