ಷಷ್ಠಿ ದಿನದೆ ವಂದನೆ
ಕಾರ್ತಿಕೇಯ ಸುಬ್ರಹ್ಮಣ್ಯ ಚರಣಕೆರಗುವೆ ಹರನ ಸುತನೆ ಗಣಪನನುಜ ನಿನಗೆ ನಮಿಸುವೆ ಕುಕ್ಕೆಯಲ್ಲಿ ನೆಲೆಸಿದಂಥ ನಾಗರೂಪನೆ ಮಾರ್ಗಶಿರದ ಷಷ್ಠಿ ದಿನದೆ ಭಕ್ತಿ ವಂದನೆ ಅಸುರರನ್ನು ಅಳಿಸಿದಂಥ ಪುಣ್ಯ ದಿನವಿದು ಜಗದಲಿರುವ ಶಿಷ್ಟ ಜನಕೆ ಅಭಯವಿತ್ತುದು ಸುರರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕಾರ್ತಿಕೇಯ ಸುಬ್ರಹ್ಮಣ್ಯ ಚರಣಕೆರಗುವೆ ಹರನ ಸುತನೆ ಗಣಪನನುಜ ನಿನಗೆ ನಮಿಸುವೆ ಕುಕ್ಕೆಯಲ್ಲಿ ನೆಲೆಸಿದಂಥ ನಾಗರೂಪನೆ ಮಾರ್ಗಶಿರದ ಷಷ್ಠಿ ದಿನದೆ ಭಕ್ತಿ ವಂದನೆ ಅಸುರರನ್ನು ಅಳಿಸಿದಂಥ ಪುಣ್ಯ ದಿನವಿದು ಜಗದಲಿರುವ ಶಿಷ್ಟ ಜನಕೆ ಅಭಯವಿತ್ತುದು ಸುರರ...
ನಯನವ ತೆರೆಯದೆ ಮುರಳಿಯ ನುಡಿಸುವ ಕೃಷ್ಣನು ಮೈಯನು ಮರೆತಿಹನೆ ಅಧರದಲಿರಿಸುತ ಊದುವ ಕೊಳಲನು ರಾಧೆಯ ಮನದಲಿ ನೆನೆದಿಹನೆ ನಾದವು ಹರಿಯಲು ತನ್ಮಯಗೊಂಡನೆ ರಾಗಕೆ ಶ್ರೀಹರಿ ಸೋತಿಹನೆ ತಾನೇ ನುಡಿಸುತ ಪರವಶಗೊಂಡನೆ ಮಾಧವ ಏನಿದು ಈ ನಟನೆ ಈ ಜಗದೊಡೆಯನೆ ನಿ...
ಕೊಬ್ಬಿದ ಕೋಣಗಳೆರಡರ ಓಟವು ಹಬ್ಬವು ನೋಡುವ ಕಣ್ಗಳಿಗೆ ನಮ್ಮಯ ನಾಡಿನ ಜನಪದದಾಟವು ಗಮ್ಮತ್ತೀವುದು ಮನಗಳಿಗೆ ಕೋಣದ ಜೋಡಿಗೆ ನೊಗವಿದೆ ಹೆಗಲಿಗೆ ಬಾಣದ ವೇಗವು ಗುರಿಯೆಡೆಗೆ ನಮ್ಮಯ ನಾಡಲಿ ಮನೆಮಾತಾಗಿದೆ ಹೆಮ್ಮೆಯು ನಮ್ಮ ಕರಾವಳಿಗೆ ರೋಚಕ ಎನಿಸುವ ಆಟದ...
ಎಲೆಗಳ ಜೊತೆಯಲಿ ಹೂಗಳಿಗೀದಿನ ನಡೆದಿಹ ಚಂದದ ಪಂದ್ಯವಿದು ಎಲೆಗಳ ಲೆಕ್ಕವ ಮೀರಿಸಿ ಬಿರಿಯುವ ಹೂಗಳ ಛಲವಿದು ಕಂಡಿಹುದು ತರುವನು ಮರೆಸಲು ಪಣವನು ತೊಟ್ಟಿವೆ ಅರಳಿದೆ ಹೂಗಳು ಘಮ ಘಮಿಸಿ ಸುಂದರವೆನ್ನುವ ಪದವಿದು ಸಾಲದು ಬಣ್ಣಿಸೆ ಕೊರತೆಯ ಪದವೆನಿಸಿ ಬಯಲ...
ಜಳಕಾವ ಮುಗಿಸ್ಕೊಂಡು ನಾಷ್ಟಕ್ಕೆ ಮಾಡಿವ್ನಿ ಕಾಳುಗಳ ಹಾಕಿರುವ ಚಿತ್ರಾನ್ನ ನೆತ್ತೀಯ ಮೇಲಿಂದ ಸುಡುತಾನೆ ನೇಸರನು ಆಯ್ತಲ್ಲ ಬಲುಬೇಗ ಮಧ್ಯಾಹ್ನ ಕುಡುಗೋಲು ಹಿಡ್ಕೊಂಡು ಹೋಗವ್ನೆ ಯಜಮಾನ ತೋಟಾದ ಕಳೆಯ ತೆಗೆಯಾಕ ಬೆಳಗಾನ ಹೋದವ್ನು ದುಡಿತಾನೆ ಉಳಿದವ್ನ...
ಬೆಂಕಿಯುಗುಳುವ ವೇಗದಿಂದಲಿ ಚೆಂಡನೆಸದನೆ ಎಸೆವವ ಭಯವ ತೋರದೆ ಅದನು ಎದುರಿಸಿ ಆಡುತಿರುವನು ದಾಂಡಿಗ ತನ್ನ ನಿಗದಿತ ಜಾಗದಲ್ಲಿಯೆ ನಿಂತು ಆಡುತಲಿರುವನು ಪೂರ್ಣ ಪರಿಣಿತ ಆಟಗಾರನು ಭಯವನೇತಕೆ ಪಡುವನು? ಉರಿವ ಸೂರ್ಯನು ಮುಗಿಸಿ ದಿನಚರಿ ಶರಧಿ ಕಡೆಗವ ಸಾ...
ಎಲ್ಲಿ ನಾನಿಹೆನೀಗ ಎಂಬ ಅರಿವಿಲ್ಲೆನಗೆ ಇದ್ದ ಜಾಗವೆ ನನಗೆ ನಿನ್ನ ಹೆಗಲು ಬಾಲ್ಯವಿದ್ದಿರಲಾಗ ಮನವು ಬಯಸುತಲಿತ್ತು ಸಗ್ಗ ಎನಿಸುತಲಿತ್ತು ತಾಯ ಮಡಿಲು ಎಲ್ಲ ಬದಲಿದೆ ಈಗ ಏನು ಮೋಡಿಯೊ ಹುಡುಗ ಮನದೊಳಗೆ ನೀನಿರದ ವೇಳೆಯಿಲ್ಲ ನಿನ್ನೊಳಗೆ ಒಂದಾಗಿ ಬದುಕ...
ಆತುರ ತುಂಬಿದೆ ಶ್ಯಾಮನ ಕಾಣಲು ಕಾತರವರಿಯನೆ ಶ್ರೀಹರಿಯೂ ಚಾತಕ ಪಕ್ಷಿಯ ತರದಲಿ ಕಾದಿಹೆ ಮಾತಿಗೆ ನಿಲುಕದ ಭಾವನೆಯೂ ಮುರಳಿಯ ನಾದವು ಕೇಳುತಲಿರುವುದು ಮರೆಯಲಿ ನಿಂತನೆ ಕಾಣಿಸದೆ ಕರುಣೆಯ ಮೂರುತಿ ಮಾಧವಗೀದಿನ ತರುಣಿಯ ಪ್ರೇಮವು ಮರೆತಿಹುದೆ ಹುಣ್ಣಿಮೆ...
೧. ತರ್ಜುಮೆ ಇನಿಯ ಬರೆದ ಪ್ರೇಮಪತ್ರ ಇಂಗ್ಲೀಷ್ ನಲ್ಲಿ ತರ್ಜುಮೆ ಮಾಡಿಸಲಿ ಯಾರ ಹತ್ರ ೨. ಕಡ್ಡಾಯ ದ್ವಿಚಕ್ರ ವಾಹನದಲ್ಲಿ ಕಡ್ಡಾಯ ಶಿರಸ್ತ್ರಾಣ ತಪ್ಪಿದರೆ ಅನ್ಯರಿಗೆ ಅಡವಿಟ್ಟಂತೆ ನಿನ್ನ ಪ್ರಾಣ ೩. ಫರ್ಮಾನು ತಡೆಯದಿರೆಂದು ನನ್ನಾಕೆಯ ಫರ್ಮಾನು ಇ...
ಸಫಲತೆಯೊಂದಿಗೆ ಪಯಣವು ಸಾಗಿರೆ ವಿಫಲತೆ ಅವಿತಿಹ ಹಾಗೆ ಚಪಲದಿ ಮನಗಳು ಗೆಲುವಿಗೆ ಕಾದಿರೆ ಅಪಜಯ ಬಂದಿದೆ ಹೀಗೆ ದಶ ದಿನ ಔತಣ ನೀಡಿದೆ ತಂಡವು ವಿಷಮದ ದಿನದಲಿ ಕೂಡ ಕಸಿವಿಸಿಯೇತಕೆ ಸೋತಿಹ ದಿನದಲಿ ಕುಸಿಯದೆ ಮುಂದಕೆ ನೋಡ ಒಂದಿನ ಸೋತರೆ ಜರೆಯುವುದೇತಕೆ...
ತಾವರೆಯ ವದನದಲಿ ಜೋಡಿ ಕಣ್ಗಳು ಕಮಲ ಸಾವಧಾನದಲಿಂತು ಬಂದೆಯಲ್ಲ ಯಾವ ಯೋಚನೆಯೊಳಗೆ ನೀನಿರುವೆ ನಾನರಿಯೆ ಭಾವಗಳ ಮರೆಮಾಚಿ ನಿಂತೆಯಲ್ಲ ಯಾರ ಕಾದಿಹೆ ನೀನು ನಲ್ಲ ಬರುತಿಹನೇನು ಮೋರೆಯಲಿ ಕಾತರದ ಎಳೆಯ ಕಂಡೆ ಮೇರೆ ಮೀರಿದ ತುಮುಲ ಮರೆಸಬಲ್ಲುದೆ ಕಮಲ ದಾರ...
ಕುರುಬರ ಕುಲದಲಿ ಜನಿಸಿದರಿವರು ಬೀರಪ್ಪ ಬಚ್ಚಮ್ಮ ಉದರದಲಿ ತಿಮ್ಮಪ್ಪ ನಾಯಕ ನಾಮವು ಇವರದು ದಂಡನಾಯಕರಾದವರು ಸಮರದ ಕಣದಲಿ ಸೋಲನು ಕಾಣುತ ಬದುಕಲಿ ಬಂದಿತು ವೈರಾಗ್ಯ ದೇವರ ಮೇಲಿನ ಭಕ್ತಿಯು ತಂದಿತು ಕೃಷ್ಣನ ಒಲುಮೆಯ ಸೌಭಾಗ್ಯ ಉಡುಪಿಯ ಕೃಷ್ಣನ ದರ್ಶನ...