ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಫೆಬ್ರ ೧೪

ನನ್ನೊಲವೆ ಹೋದೆನೀನೆಲ್ಲಿಗೆ ?

ಏನೋ ಕಾಣೆ ಇಂದು ನಗುವು ನಿನ್ನ ಭಾವಕೆ ಸೋತಿದೆನಾ ಕಾಣದ ಅರಿವನ್ನು ಬೇಕೆಂದೇ ಬೇಡಿ ತಂದಿದೆಕಿರುನಗೆಯ ನಿನ್ನ ನೋಟಕೆ ಸಾಕಾಗಿ ಮನಸು ಸೋತಿದೆನಿನ್ನ ಮನಸ ಆ ಉಲಿತ ಬೇಕೆಂದೇ ಹಾಡಿ ಕಾಡಿದೆ ಎನಿತಿಹುದೋ ಈ ಬಾಳಲಿ ಸವೆಸುವಾ ದಾರಿಎಣಿಕೆಗೋ ಮೀರಿದ ಭಾವಾನೆ...

Raju T · ೧,೧೯೨ ವೀಕ್ಷಣೆಗಳು
ಓದಿ
ಫೆಬ್ರ ೧೩

ಆಸರೆ

ಬಾಳ ಇರುಳ ದೀಪಕೆ, ಹನಿ ಎಣ್ಣೆಯ ಆಸರೆ, ಆರಿಹೋಗೊ ಜ್ಯೋತಿಗೆ, ಜೋಡಿ ಕೈಯ ಆಸರೆ, ದೂರ ಪಯಣ ದೋಣಿಗೆ, ಬೀಸೋ ಹುಟ್ಟೇ ಆಸರೆ, ತೇಲಿಗೆ ಹೋಗೋ ಆ ದೋಣಿಗೆ, ಅಲೆಯ ತಾಳದಾಸರೆ, ಮೂಗ್ಗಾಗಿ ನಿಂತ ಹೂವಿಗೆ, ಮಂಜ ಹನಿಯೇ ಆಸರೆ, ಅರಳೋ ಆ ಹೂವಿಗೆ, ದುಂಬಿ ಗುನು...

ಎ.ಸಿ.ಬಾಪೂಜಿ "ಭಾವದೀಪ" · ೧,೦೦೦ ವೀಕ್ಷಣೆಗಳು
ಫೆಬ್ರ ೧೩

ಎದೆಗೆ ಎದೆಯು ಒಲಿದು ಬೆಸೆದ...

ಎದೆಗೆ ಎದೆಯು ಒಲಿದು ಬೆಸೆದ ನನ್ನ ಇವನ ಪ್ರೇಮ ಉರಿವ ಧೂಪದಿಂದ ಬಂದ ಘಮ್ಮೆನ್ನುವ ಧೂಮ! ಮಾತಿಗಿಂತ ಮುತ್ತು ಹಿರಿದು ಎಂಬುವುದು ನಮ್ಮ ನಿಯಮ! ತುಟಿಗೆ ತುಟಿಯ ಬೆರೆಸುವುದೇ ದಿನ ನಿತ್ಯದ ನೇಮ! ಕಳೆದ ನಿನ್ನೆ ಬರುವ ನಾಳೆ ನಮಗಿಲ್ಲ ಅದರ ಚಿಂತೆ ಇಂದು...

Maalu · ೩೧೫ ವೀಕ್ಷಣೆಗಳು
ಫೆಬ್ರ ೧೩

ಹನಿ..

ಹುಡುಗಾ, ಶುಕ ಕಾಕ ಕೋಕ ಕುಣಿದಿವೆ ಮರದಲಿ ಹಾಕಿವೆ ಖುಶಿಯಲಿ ಕೇಕೆ! ನನ್ನ ನಿನ್ನ ನಾಳೆಯ ಮಿಲನ ತಿಳಿಯಿತು ಅವಕೂ ಏಕೆ?! -ಮಾಲು

Maalu · ೩೮೬ ವೀಕ್ಷಣೆಗಳು
ಫೆಬ್ರ ೧೨

ಮತ್ತೆ ಮತ್ತೆ ಒಲವು

ಪರಿಚಯವಾಗಿ ವರ್ಷಗಳಾದ ಮೇಲೆ ಯೌವನದ ಮುನ್ನುಡಿಯಲ್ಲಿ ಭಾವ ನನ್ನೆದೆಯ ಕದವನ್ನು ತಟ್ಟುವಾಗ ಬೆಳಕಿಗೆ ಬಂದಿರಲು ಹಗುರವಾಗಿ ವ್ಯಕ್ತವಾಗುವ ಕಳವಳವೆ ಒಲವೆ ?? ಮತ್ತದೆ ದಿನಚರಿಯ ಭಾಗವಾಗಿ ಕಳೆದುಹೋದರು ಕಾಯಕದೊಳಗೆ ಹೃದಯ ನಲುಮೆಯ ಹೊಸ್ತಿಲಲ್ಲಿ ಬದುಕೆಂ...

ಪ್ರಮೋದ್ ಶ್ರೀನಿವಾಸ · ೬೯೭ ವೀಕ್ಷಣೆಗಳು
ಫೆಬ್ರ ೧೦

|| ಹೊಳ್ಳಿ ನೊಡು ಇನ್ನೊಂದು ಸಾರ್ತಿ ||

|| ಹೊಳ್ಳಿ ನೊಡು ಇನ್ನೊಂದು ಸಾರ್ತಿ || ನನ್ನ ನಿನ್ನ ಮನಸು ಒಂದ ಆಯಿತ ಗೇಳತಿ | ನಿ ಸುಮ್ಮನ್ಯಾಕ ಕುಂತ ಅಳತಿ | ನೋಡಬ್ಯಾಡ ನನ್ನ ಮೊತಿ | ಬೆಳಗಬ್ಯಾಡ ಮಂಗಳಾರತಿ || ನಿನ್ನ ತಾಯಿ ಆದಳು ನನಗ ಅತ್ತಿ | ನಿನ್ನ ಸಲುವಾಗಿ ಆಗ್ಯಾರ ಉದಬತ್ತಿ | ಅವರ ಮ...

ಕೆ.ಎಂ.ವಿಶ್ವನಾಥ · ೭೦೨ ವೀಕ್ಷಣೆಗಳು
ಫೆಬ್ರ ೦೮

ವಿಪರ್ಯಾಸ

ಹುಡುಗಾ, ಯಾವ ರಾಧೆಯು ಇಲ್ಲ ಯಾವ ಸೀತೆಯು ಇಲ್ಲ ಇಲ್ಲಿ! ಹಾಗೆಯೇ.....ಇಲ್ಲ ಆ ಶ್ರೀರಾಮ ಹಾಗು ಮುರಳಿ! ಅವರಂಥವರು ನಮಗೆ ಬೇಕಿದ್ದರೆ ಹೋಗಬೇಕಾದೀತು ನಾವು ತ್ರೇತಾ ಮತ್ತು ದ್ವಾಪರಕ್ಕೆ ಮರಳಿ! -ಮಾಲು

Maalu · ೨೯೭ ವೀಕ್ಷಣೆಗಳು
ಪ್ರೀತಿಯ ಜೀವ
ಫೆಬ್ರ ೦೭

ಪ್ರೀತಿಯ ಜೀವ

ಪ್ರೀತಿಯ ಜೀವ ,ನನ್ನ ಜೀವದ ಭಾವಮರೆಯಲು ಸಾಧ್ಯವೇ , ಹೃದಯದ ಬಾಗಿಲು ತೆರೆದ ಕರವ , ಮನಸ್ಸಿನ ಜ್ಯೋತಿಯ ಬೆಳಗಿಸಿದ ದಿನವ , ನಿಸ್ವಾರ್ಥದಿಂದ ನೀ ತೋರುವ ಒಲವ .ನಿನ್ನ ಮುದ್ದು ಮಾತುಗಳು ಮರೆಸುತ್ತವೆ ನನ್ನ ನೋವನೂರು ಸಾಲುಗಳು ಸಾಲದು ಹೊಗಳಲು ನಿನ್ನ...

ವಿನುತ ಬೋ.ಕುಮಾರಸ್ವಾಮಿ · ೧,೪೨೯ ವೀಕ್ಷಣೆಗಳು
ಫೆಬ್ರ ೦೭

ಮುಗಿಯದ ಸಾಲುಗಳು

ಅಗಲುವಿಕೆ ಅನಿವಾರ್ಯ ಎಂಬ ಸತ್ಯ ಯಾವೊಂದು ಸಂಭಂಧದ ಶುರುವಿನಲ್ಲೂ ಕಾಣುವುದಿಲ್ಲವೇಕೆ? ++++++++++++++++ ನೀನೆಂದಿಗೂ ನನ್ನವಳಾಗಿರಲಿಲ್ಲವೆಂದ ಮೇಲೆ ನಿನ್ನನು ಕಳೆದುಕೊಳ್ಳುವ ಭಯಕೆಲ್ಲಿದೆ ಅರ್ಥ?......

ಸೀತಾರಾಮ ಹೆಗಡೆ · ೪೨೦ ವೀಕ್ಷಣೆಗಳು
ಫೆಬ್ರ ೦೬

ಸವತಿ

ನನಗೂ ಒಬ್ಬಳು ಸವತಿ ಇದ್ದಾಳೆ ! ನಿಮಗೆ ಹೇಳಲೇನು?! ಅವಳೇ... ಇವನ ಕೆನ್ನೆಗೆ ಕಚ್ಚಿಕೊಂಡೇ ಇರುವ ಮೊಬೈಲ್ ಫೋನು! -ಮಾಲು

Maalu · ೪೫೮ ವೀಕ್ಷಣೆಗಳು
ಫೆಬ್ರ ೦೫

ಬದುಕೊಂದು ಜೀವಂತ ಕವನ

ನನ್ನವಳ ಮನದಳಲುಮುಖದ ಮೇಲ್ ಕಂಡಾಗಮೂಡಿ ಬಂದಿತ್ತುನನ್ನ ಮೊದಲ ಕವನ|| ಹಸಿದ ಹೊಟ್ಟೆಗೆರೊಟ್ಟಿ ಸಿಗದ ದಿನಗಳನೆನಪಿನಲಿ ನುಸುಳಿ ಬಂದಿತ್ತುಮತ್ತೊಂದು ಕವನ||ತನ್ನ ಹಸಿವನು ಮರೆತುತುತ್ತಿಕ್ಕಿ ಸಾಕಿದ ನನ್ನಮ್ಮನ ನೆನೆಯುತ್ತಾ ಸುರಿಸಿದ್ದಕಣ್ಣೀರಿನ ಹನಿ...

ಹರಿಹರಪುರಶ್ರೀಧರ್ · ೧,೧೭೬ ವೀಕ್ಷಣೆಗಳು
ಫೆಬ್ರ ೦೫

ಹಸಿ ಹಸಿಯಾದ ಹರಯ...

ಗೆಳೆಯಾ, ಹಸಿ ಹಸಿಯಾದ ಹರಯ ಕುಡಿಸಿತ್ತು ನನಗೆ ಸುರೆಯ! ನಾ ಹಿಡಿದಿದ್ದೆ ನಿದಿರೆ ಜಾಡು ಅಲ್ಲಿ ಕಟ್ಟು ಪಾಡು ಇರದ ಕಾಡು! ಬಲಿತ ಮರದಂತೆ ನಿಂತಿದ್ದೆ ನೀನು ಬಳಸಿ ತಬ್ಬಿದ್ದೆ, ಬಳ್ಳಿ ನಾನು! ಇರುಳಲ್ಲಿ ಕಂಡ ಕನಸು ನಿಜವಾಗಲೆಂದು ಹರಸು! -ಮಾಲು

Maalu · ೬೦೦ ವೀಕ್ಷಣೆಗಳು