Sampada Logo

ಕೆ.ಪಿ.ಅಶ್ವಿನ್ ರಾವ್

೪೦ ಅರಳಿಕಟ್ಟೆಯ ಮಾತುಗಳು

ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

ashwinrao47

೫೦ ಪೋಸ್ಟ್‌ಗಳು ೨೧ ಅನುಯಾಯಿಗಳು
ಸೇರಿದ ದಿನಾಂಕ: ಶುಕ್ರವಾರ, ಜನವರಿ ೧೭, ೨೦೨೦
ಕೆ.ಪಿ.ಅಶ್ವಿನ್ ರಾವ್
ನಿಜ ಸರ್, ವೃತ್ತಾಕಾರದ ಚಕ್ರದ ಅನ್ವೇಷಣೆಗೆ ಮೊದಲು ಚೌಕಾಕಾರದ, ಆಯತಾಕಾರದ ವಸ್ತುಗಳನ್ನು ಪರಿಶೀಲಿಸಲಾಗಿತ್ತು ಎಂದು ಎಲ್ಲೋ ಓದಿದ ನೆನಪು. ಅವೆಲ್ಲಾ ಸರಾಗವಾಗಿ ಚಲಿಸದ ಕಾರಣ ವೃತ್ತಾಕಾರದ ಚಕ್ರ ಬಳಕೆಗೆ ಬಂತು ಅನಿಸುತ್ತೆ.
೭೦
ಕೆ.ಪಿ.ಅಶ್ವಿನ್ ರಾವ್
ಸುರ್ಕಿ ಗಾರೆ ಪದ ನಾನು ಮೊದಲ ಬಾರಿ ಕೇಳುತ್ತಿರುವುದು. ಮೊದಲೆಲ್ಲಾ ಸಿಮೆಂಟ್ ಇಲ್ಲದೇ ಇದ್ದ ಸಮಯದಲ್ಲಿ ಬೆಲ್ಲ-ಸುಣ್ಣದ ಗಾರೆ ಇತ್ತಂತೆ. ಆಗಿನ ಕಾಲದ ದೊಡ್ಡ ದೊಡ್ಡ ಕೋಟೆಗಳು ಈ ರೀತಿಯ ಬೆಲ್ಲ - ಸುಣ್ಣದ ಗಾರೆಯಿಂದಲೇ ಕಟ್ಟಿದ್ದು ಅಂತಾರೆ. ತಿಳಿದವರು ಮಾಹಿತಿ ಕೊಡಿ...
೬೨
ಕೆ.ಪಿ.ಅಶ್ವಿನ್ ರಾವ್
ನಮ್ಮೂರು ಮಂಗಳೂರಿನಲ್ಲಿ ನೋಡಿದ ನೆನಪಾಗ್ತಾ ಇಲ್ಲವಲ್ಲಾ? ಬೇರೆ ಸ್ಥಳೀಯ ಹೆಸರುಗಳೇನಾದರೂ ಇರಬಹುದೇ?
೮೧
ಕೆ.ಪಿ.ಅಶ್ವಿನ್ ರಾವ್
ಸರ್, ನಿಮ್ಮ ಪ್ರಶ್ನೆಗೆ ಶ್ರೀ ನಂಜಪ್ಪ ತಿಗಳ ಇವರು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರಕಾರ ಆ ಕವನ ಶ್ರೀ ಡಿ ಎಸ್ ಕರ್ಕಿಯವರದ್ದು. ಇನ್ನಷ್ಟು ಮಾಹಿತಿಗಳು ಬರಬಹುದು, ಸ್ವಲ್ಪ ಕಾಯೋಣ...
೭೧
ಕೆ.ಪಿ.ಅಶ್ವಿನ್ ರಾವ್
'ದಂಗೆಯ ಸುಳಿಯಲ್ಲಿ ನಾನು' ಪುಸ್ತಕವು ಯಾವ ಪುಸ್ತಕ ಮಾರಾಟಗಾರರಲ್ಲೂ ಲಭ್ಯವಿಲ್ಲ. ಪ್ರಕಾಶಕರಲ್ಲೂ ಪ್ರತಿಗಳು ಮುಗಿದಿವೆ ಎಂಬ ಉತ್ತರ ಸಿಕ್ಕಿದೆ. ಆದರೂ ಪುಸ್ತಕ ಹುಡುಕಾಟದಲ್ಲಿ ನಮ್ಮ 'ಸಂಪದ' ತಂಡದ ಪ್ರಯತ್ನ ಮುಂದುವರೆದಿದೆ.
೮೩
Subhaash kamble ಪ್ರತಿಕ್ರಿಯಿಸಿದ್ದಾರೆ
ಧನ್ಯವಾದಗಳು ಸರ್ ಸಿಕ್ಕಾಗ ದಯವಿಟ್ಟು ತಿಳಿಸಿ ನಮಸ್ಕಾರ
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್
ಅದ್ಬುತ ಮೇಡಂ. ಇಂತಹ ಅವಕಾಶ ಭಾರತದ ಗ್ರಂಥಾಲಯಗಳಲ್ಲೂ ದೊರೆತರೆ ಎಷ್ಟು ಚೆನ್ನಿತ್ತು !
೬೩
ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್
ನಾನು ಇದನ್ನು ನೋಡುತ್ತಿರುವುದೇ ಮೊದಲ ಸಲ ಸರ್, ಶ್ರೀಕೃಷ್ಣನ ಕೊಳಲಿನಿಂದಲೇ ಯುರೋಪಿಯನ್ನರು ಪ್ರೇರಣೆ ಪಡೆದು ನಿರ್ಮಾಣ ಮಾಡಿರುವಂತಿದೆ.
೧೧೯
ಕೆ.ಪಿ.ಅಶ್ವಿನ್ ರಾವ್
ಹೌದು ಸರ್, ನಿಮ್ಮ ಮಾತು ಸತ್ಯ. ಜಾಹೀರಾತು ಕೊಡುವವರಿಗೆ ಆಂಗ್ಲ ವ್ಯಾಮೋಹ. ಇದು ಪಂಚಿಂಗ್ ಆಗಿರುತ್ತದೆ ಎನ್ನುವ ನೆಪ ಬೇರೆ.
೧೧೦
ಕೆ.ಪಿ.ಅಶ್ವಿನ್ ರಾವ್
ಬಿಡಿ ಮನೆಯೇ ಚಂದ ಸರ್, ಮನೆ, ಮನೆಯ ಎದುರು ಪುಟ್ಟ ಕೈತೋಟ. ಬೇಕೆನಿಸಿದಾಗ ಮನೆಯನ್ನು ರಿಪೇರಿ ಮಾಡುವ ಸ್ವಾತಂತ್ರ್ಯ, ಬಣ್ಣ ಬಳಿಯುವ ಖುಷಿ. ಸ್ವಂತ ಫ್ಲಾಟ್ ಆದರೂ ನಿರ್ವಹಣೆ (ಲಿಫ್ಟ್, ಜನರೇಟರ್, ಸೆಕ್ಯೂರಿಟಿ ಇತ್ಯಾದಿ) ವೆಚ್ಚ ಎಂದು ೫ ರಿಂದ ೧೦ ಸಾವಿರದವರೆಗೆ ಹಣ ನೀಡಬೇಕಾದ ಅನಿವಾರ್ಯತೆ ಸ್ವಂತ ಬಿಡಿ ಮನೆಗೆ ಇರೋದಿಲ್ಲ. ನನಗೆ ಬಿಡಿ ಮನೆಯೇ ಇಷ್ಟ
೧೪೯
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಮಾತು ನೂರು ಶೇಕಡಾ ಸತ್ಯ ಸರ್, ಇದಕ್ಕೆ ಸಾಕ್ಷಿ ನೀವು ಪ್ರಕಟಿಸುತ್ತಿರುವ ನಿಮ್ಮ ತಂದೆಯವರ ಜೀವನಗಾಥೆಯ ಪುಟಗಳು. ಓದುತ್ತಾ ಓದುತ್ತಾ ಅವರ ಜ್ಞಾನ, ಕೃಷಿಯಲ್ಲಿಯ ಸಾಹಸಗಳು, ಗ್ರಂಥಾಲಯದ ಕಲ್ಪನೆ ಅದನ್ನು ಬೆಳೆಸುವ ಮನಸ್ಸು ಎಲ್ಲವನ್ನೂ ಓದುವಾಗ ನನಗೆ ಹಿರಿಯರ ಅನುಭವದ ಕಥನದ ಅಗತ್ಯತೆ ತಿಳಿಯುತ್ತದೆ.
೮೫
ಕೆ.ಪಿ.ಅಶ್ವಿನ್ ರಾವ್
ಸಿನೆಮಾ ಮಂದಿರಕ್ಕೆ ಹೋಗಿ ಚಿತ್ರ ನೋಡುವ ತಾಳ್ಮೆಯೇ ಇಲ್ಲ ಸರ್, ಹಾಗೇ ಬಿಡುವಾಗುವಾಗ ಪ್ರೈಮ್, ಹಾಟ್ ಸ್ಟಾರ್ ನಲ್ಲಿ ನೋಡುವೆ. ನೀವು "ಟಾಕ್ಸಿಕ್' ಚಿತ್ರ ನೋಡಿದ್ರಾ? ಹಾಗಾದ್ರೆ ಇನ್ನೊಂದು ವಿಮರ್ಶೆ ಬರೆಯಿರಿ. ಮನಸ್ಸಿಗೆ ಹಿಡಿಸಿದ್ರೆ ನಾವೂ ಚಿತ್ರ ನೋಡಲು ಹೋದೇವು...
೯೪
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಅನಿಸಿಕೆ ಸತ್ಯ ಸರ್, ಪತ್ರಿಕೆಯಲ್ಲಿ ಹಿಂದಿನ ಹಳೆಯ ಪತ್ರಕರ್ತರ ಸಂಖ್ಯೆಯೇ ಅಧಿಕವಾಗಿರುವುದರಿಂದ ಹೀಗಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ಹೊಸ ಯುವ ಪತ್ರಕರ್ತರು ದೃಶ್ಯ ಮಾಧ್ಯಮಕ್ಕೆ ಹೋಗುತ್ತಾರೆ. ಉತ್ತಮ ಅಂಕಣ ಬರಹಗಳ ಮೂಲಕ ಓದುಗರನ್ನು ಆಕರ್ಷಿಸಬಹುದು. ಕೆಲವು ಪತ್ರಿಕೆಗಳು (ವಿಶ್ವವಾಣಿ, ವಿಜಯ ಕರ್ನಾಟಕ) ಈ ರೀತಿ ಮಾಡುತ್ತಿವೆ. ಜನರಿಗೆ ಪತ್ರಿಕೆ ಓದುವಾಗ ಅರ್ಥವಾಗದ ಅಂದರೆ ಚುನಾವಣಾ ಪಟ್ಟಿ ಪರಿಷ್ಕರಣೆ, ಬಜೆಟ್, ಕ್ರೀಡಾ ವಿಷಯಗಳು, ನಕಲಿ ಮದ್ಯ, ಆಹಾರ ಇವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಆಯಾ ವಿಭಾಗದ ಪರಿಣಿತರು ಬರೆದರೆ ಪತ್ರಿಕೆಗಳು ಆಸಕ್ತಿದಾಯಕ ಮತ್ತು ಮಾಹಿತಿ ಪೂರ್ಣವಾಗುತ್ತದೆ. ನನ್ನ ಭಾವನೆ
೧೦೫
ಕೆ.ಪಿ.ಅಶ್ವಿನ್ ರಾವ್
ಉತ್ತಮ ಓದಿನತ್ತ ಮುಖ ಮಾಡಿರುವಿರಿ ಸರ್, ನಾನು ಭೈರಪ್ಪನವರಿಂದ ಸ್ವಲ್ಪ ದೂರ. ನಾನು ಅವರ 'ಸಾರ್ಥ' ಮಾತ್ರ ಓದಿರುವೆ. ಪರ್ವದ ಕೆಲವು ಅಧ್ಯಾಯಗಳನ್ನು ಅಧ್ಯಯನ ಪ್ರಯುಕ್ತ ಓದಿದ್ದು ಬಿಟ್ಟರೆ ಬೇರೆ ಯಾವುದೇ ಕೃತಿಗಳನ್ನು ಓದಿಲ್ಲ. ಓದ ಬೇಕೆಂಬ ಮನಸ್ಸಿದೆ ಆದರೆ ಪುಸ್ತಕದ ಗಾತ್ರ ನೋಡುವಾಗ ಈ ಜನ್ಮದಲ್ಲಿ ಆಗಿ ಹೋಗುವುದಲ್ಲ ಅನಿಸುತ್ತದೆ. ಏನೇ ಇರಲಿ... ನಿಮಗೆ ಹ್ಯಾಪಿ ರೀಡಿಂಗ್ ಸರ್... ಅಭಿಪ್ರಾಯ ಬರೆಯಿರಿ
೭೭
ಕೆ.ಪಿ.ಅಶ್ವಿನ್ ರಾವ್
ಅವಿಭಜಿತ ದಕ್ಷಿಣ ಕನ್ನಡದ ಹಲವಾರು ಮನೆಗಳಲ್ಲಿ ಈ ಸಂಪ್ರದಾಯ ಈಗಲೂ ಮುಂದುವರಿಯುತ್ತಿದೆ.
೯೮
ಕೆ.ಪಿ.ಅಶ್ವಿನ್ ರಾವ್
ಧನ್ಯವಾದಗಳು. ಎಲ್ಲಾ ಸಂಪದಿಗರು 'ಅರಳಿ ಕಟ್ಟೆ'ಗೆ ಬಂದರೆ ಇನ್ನಷ್ಟು ಚೆನ್ನಾಗುತ್ತದೆ. ಸ್ವಲ್ಪ ನಗು, ಸ್ವಲ್ಪ ಹರಟೆ ಮತ್ತು ಒಂದಷ್ಟು ಚರ್ಚೆ ನಿಮ್ಮ ದಿನವನ್ನು ಇನ್ನಷ್ಟು ಉಲ್ಲಾಸಮಯವನ್ನಾಗಿಸುತ್ತದೆ. ಜಸ್ಟ್ ಟ್ರೈ...
೭೧
ಕೆ.ಪಿ.ಅಶ್ವಿನ್ ರಾವ್
ಇದನ್ನು ಲೇಖನದಲ್ಲಿ ಓದಿದೆ ಸರ್, ಅರಳಿ ಕಟ್ಟೆಗೆ ಚುಟುಕಾದ ಸ್ವಾರಸ್ಯಕರವಾದ ವಿಷಯ ಬರಲಿ, ಆ ಬಗ್ಗೆ ಒಂಚೂರು ಹರಟೆ, ಆರೋಗ್ಯ ಪೂರ್ಣ ಚರ್ಚೆ ಎಲ್ಲಾ ಮಾಡುವ. ಮಾಹಿತಿಯೂ ಸಿಗುತ್ತೆ, ಸಮಯವೂ ಕಳೆಯುತ್ತೆ. ಇನ್ನೇಕೆ ತಡ... ಬರೆಯಿರಲ್ಲಾ
೯೪
badari badari ಪ್ರತಿಕ್ರಿಯಿಸಿದ್ದಾರೆ
ಖಂಡಿತ
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ಸರ್, ಇದನ್ನು ಲೇಖನದಲ್ಲಿ ಓದಿದೆನಲ್ಲಾ, ಚುಟುಕಾದ ಮಾಹಿತಿ ಅರಳಿ ಕಟ್ಟೆಗೆ ಬರಲಿ, ಕಚಗುಳಿಯಿಡುವ ಪ್ರಶ್ನೆಗಳೂ ಇರಲಿ, ಆರೋಗ್ಯಪೂರ್ಣವಾದ ಚರ್ಚೆಗೆ ಒಳಪಡಬಹುದಾದ ವಿಷಯವೂ ಬರಲಿ...
೯೫
ಕೆ.ಪಿ.ಅಶ್ವಿನ್ ರಾವ್
ಆಯ್ಕೆಗಳ ಬಗ್ಗೆ ಗೊತ್ತಿಲ್ಲ. ಆದರೆ ಉತ್ತರ ಪೇಡವೇ ಇರಬೇಕು. ಶುಗರ್ ಲೆಸ್ ಪೇಡ ಬೇಕೆಂದು ಕೇಳಿದರೆ ಮಾತ್ರ ಕಷ್ಟ !
೮೨