ದಾಸಶ್ರೇಷ್ಠ ಪುರಂದರರ ಆರಾಧನೆ ಮಾಡೋಣ ಇಂದು
ಕಾಸು ಖರ್ಚಿಲ್ಲದೆ ಕೀರ್ತನೆಗಳ ಹಾಡೋಣ ಇಂದು
ಭಕ್ತಿಗಾನ ಭಜಕರಾಗಿ ನಡೆದಾಡಿ ತಂಬೂರಿಯ ನೆಂಟನ್ನು ಬಿಡದವರಲ್ಲವೇ
ಮುಕ್ತಿಪಥ ಕೈಗೆಟುಕಲು ನಾರಾಯಣನ ಸೇವೆ ಗೈಯೋಣ ಇಂದು
ಧಾರ್ಮಿಕ ಆಚರಣೆಗಳ ಮಹತ್ವವನ್ನು ಭಾವರಾಗದಿ ಸಾರಿದ ಮಹಾತ್ಮರು
ಮಾರ್ಮಿಕ ಬೋಧನೆಯ ಪದ ಸಾಲುಗಳಲಿ ತುಂಬೋಣ ಇಂದು
ಕರ್ನಾಟಕ ಸಂಗೀತ ಪರಂಪರೆಯನು ಹಬ್ಬಿಸಿದ ಸಂತರಿವರು
ಸಮಾಜದಲಿ ಹಬ್ಬಿರುವ ಅಂಕು-ಡೊಂಕು ತಿದ್ದೋಣ ಇಂದು
ಹಂಪೆಯಲಿ ದೇಹಾಂತ್ಯಗೊಂಡ ಅನರ್ಘ್ಯ ರತ್ನ ಶ್ರೀನಿವಾಸನಾಯಕರು
ಕಂಪು ಸೂಸುತ ಎಲ್ಲವೂ ಕೃಷ್ಣಾರ್ಪಣ ಹೇಳೋಣ ಇಂದು
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!