ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತಬ್ಬಲಿಗಳ ಪಾಡು

ಸೆಪ್ಟೆಂ ೦೯ ಉಲ್ಲೇಖಗಳು ೬೧೧ ವೀಕ್ಷಣೆ

ಹೆತ್ತವರಿಲ್ಲದ ಪುತ್ರರ ಕಂಡಡೆ ನೆತ್ತಿಯ ಮೇಲೆ ಕುಟ್ಟುವರು ಇತ್ತಲೇತಕೆ ಬಂದೆಯತ್ತಲೆ ಹೋಗೆಂದು ಕತ್ತ ಹಿಡಿದು ನೂಕುವರು

ದಿನಕ್ಕೊಂದು ಪದ

ಸೆಪ್ಟೆಂ ೦೮ ಚರ್ಚಾವೇದಿಕೆ ೧,೩೪೯ ವೀಕ್ಷಣೆ

ದಿನಕ್ಕೊಂದು ಪದದಡಿಯಲ್ಲಿ ಬರೆದ ನನ್ನ ಲೇಖನಗಳನ್ನೋದುವವರ ಸಂಖ್ಯೆ ಕಡಿಮೆಯಾಗಿದೆ. ಇದಱಡಿಯಲ್ಲಿ ನಾನು ಹೆಚ್ಚಾಗಿ ದೇಸಿ ಪದಗಳನ್ನೇ ಕುಱಿತು ಹಾಗೂ ೞ ಮತ್ತು ಳ ಹಾಗೂ ಱ ಮತ್ತು ರ ಅಕ್ಷರಗಳುಳ್ಳ ಪದಗಳಲ್ಲಿ ಅರ್ಥವ್ಯತ್ಯಾಸ ತೋಱಿಸಲು ಸಾಕಷ್ಟು ಪದಗಳನ್...

ಬಾಳ್, ಬಾೞ್

ಸೆಪ್ಟೆಂ ೦೭ ಚರ್ಚಾವೇದಿಕೆ ೧,೭೯೬ ವೀಕ್ಷಣೆ

ಬಾಳ್=ಕತ್ತಿ, ಚೂರಿ ಉದಾಹರಣೆ: ಜೈಮಿನಿಭಾರತದ ಈ ಪದ್ಯ ನೋಡಿ ವ್ಯಾಳದಂಗದ ನಯವೊ? ಗರ್ತಸಂಛಾದಿತ ತೃ- ಣಾಳಿಗಳೊ? ಮಕರದಿಕ್ಕೆಯ ಮಡುವಿನಂಬುಜವೊ? ಬಾಳಧಾರೆಗೆ ಲೇಪಿಸಿದ ಮಧುವೊ? ಕಮಲಾಂಬಕಿಯರ ಕೃತಕದ ಬೇಟವೋ| ಕಾಳಕೂಟಂ ಬೆರಸಿದಮೃತಾನ್ನಭೋಜನವೊ ಪೇೞಲಱಿಯ...

ಅಱಬು

ಸೆಪ್ಟೆಂ ೦೭ ಚರ್ಚಾವೇದಿಕೆ ೫,೮೮೪ ವೀಕ್ಷಣೆ

ಅಱಬು=ಬಱ, ಬತ್ತಿಹೋದ ಸ್ಥಿತಿ. ಪ್ರಾಯಶ: ಮೂಲ ಆಱು=ಒಣಗು, ಬತ್ತಿಹೋಗು ಧಾತುವಿನಿಂದ. ಉದಾಹರಣೆಗೆ ಸರ್ವಜ್ಞನ ಈ ವಚನವನ್ನು ನೋಡಿ ಇಂದುವಿನೊಳುರಿಯುಂಟೆ ಸಿಂಧುವಿನೊಳಱಬುಂಟೆ ಸಂದ ವೀರನೊಳು ಭಯವುಂಟೆ ಭಕ್ತಗೆ ಸಂದೇಹವುಂಟೆ ಸರ್ವಜ್ಞ|| ಸಿಂಧುವಿನೊಳಱಬ...

ಸರ್ವಜ್ಞನ ವಚನ

ಸೆಪ್ಟೆಂ ೦೭ ಉಲ್ಲೇಖಗಳು ೭೩೧ ವೀಕ್ಷಣೆ

ಇಂದುವಿನೊಳುರಿಯುಂಟೆ ಸಿಂಧುವಿನೊಳಱಬುಂಟೆ ಸಂದ ವೀರನೊಳು ಭಯವುಂಟೆ ಭಕ್ತಗೆ ಸಂದೇಹವುಂಟೆ ಸರ್ವಜ್ಞ||

ಮುಸುಱ್/ಮುಸುಱು

ಸೆಪ್ಟೆಂ ೦೪ ಚರ್ಚಾವೇದಿಕೆ ೧,೧೩೪ ವೀಕ್ಷಣೆ

ಮುಸುಱ್, ಮುಸುಱು (ಕ್ರಿಯಾಪದ)=ಮುತ್ತು, ಆವರಿಸು, ಮುಗಿಬೀೞು ಉದಾಹರಣೆ: ಸಕ್ಕರೆಗೆ ಇಱುವೆಗಳು ಮುಸುಱುತ್ತವೆ. ಭೂತಕೃದ್ವಾಚಿ: ಮುಸುಱಿ ವರ್ತಮಾನಕೃದ್ವಾಚಿ: ಮುಸುರ್ವ/ಮುಸುಱುವ

ನರೆ

ಸೆಪ್ಟೆಂ ೦೨ ಚರ್ಚಾವೇದಿಕೆ ೧,೨೭೨ ವೀಕ್ಷಣೆ

ನರೆ (ವಿಶೇಷಣ, ನಾಮಪದ)=ಮುಪ್ಪು, ನರೆಗೂದಲು= ಮುಪ್ಪಿನ ಸಂಕೇತವಾದ ಬಿಳಿಗೂದಲು ಉದಾಹರಣೆ ನರೆ ಬಂದ ನರರ್ ಮೆಲ್ದಿರೆ ತರುಣತ್ವಮನೆಯ್ದುವರ್ ಅಂದರೆ ಮುಪ್ಪು ಬಂದ ಮನುಷ್ಯರು ರುಚಿ ನೋಡಿದರೆ ಯೌವನವನ್ನು ಹೊಂದುವರು.

ಅರಲ್/ಅರಳ್

ಸೆಪ್ಟೆಂ ೦೨ ಚರ್ಚಾವೇದಿಕೆ ೧,೦೭೯ ವೀಕ್ಷಣೆ

ಅರಲ್(ಕ್ರಿಯಾಪದ)=ವಿಕಾಸವಾಗು, ದೊಡ್ದದಾಗು. ಕೇಶಿರಾಜನ ಪ್ರಕಾರ ಲಾಂತ. ಆದರೆ ಹೊಸಗನ್ನಡದಲ್ಲಿ ಳಾಂತ. ಭೂತಕೃದ್ವಾಚಿ: ಅರಲ್ದ/ಅರಳ್ದ/ಅರಲಿ/ಅರಳಿ ಭವಿಷ್ಯತ್ಕೃದ್ವಾಚಿ: ಅರಲ್ವ/ಅರಳ್ವ/ಅರಲುವ/ಅರಳುವ ಅರಲ್/ಅರಳ್ (ನಾಮಪದ)= ಹೂವು, ಭತ್ತ, ರಾಗಿ, ಜೋ...

ಮೋದು

ಸೆಪ್ಟೆಂ ೦೧ ಚರ್ಚಾವೇದಿಕೆ ೧,೦೪೪ ವೀಕ್ಷಣೆ

ಮೋದು=ಗುದ್ದು, ಢಿಕ್ಕಿ ಹೊಡೆ. ಹೊಡೆ ಉದಾಹರಣೆ ರನ್ನನ ಗದಾಯುದ್ಧದಿಂದ ಕುಳಿಕನ ಪಲ್ಗಳಂ ಕಿೞ್ತೆತ್ತಿ ಮೋದಿದರಾರ್ ಭೂತಕೃದ್ವಾಚಿ: ಮೋದಿ ಭವಿಷ್ಯತ್ಕೃದ್ವಾಚಿ: ಮೋದುವ

ನೀಱೆ ಬೆಚ್ಚಿ ಬೆಱಗಾದಳು

ಆಗಸ್ಟ್ ೩೧ ಚರ್ಚಾವೇದಿಕೆ ೧,೪೨೬ ವೀಕ್ಷಣೆ

ಕನ್ನೆ ನಕ್ಕಾಗ ಮೊಗದಾವರೆಯಿಕ್ಕೆಲಗಳ ಕೆನ್ನೆಗಳೊಳ್ ಗುೞಿ ಮೂಡೆ ಚೆನ್ನಾದುದೆಂದು ನಾ ಹರುಸದಿಂ ನೋಡಲು ಕನ್ನೆ ಬೆಚ್ಚಿ ಬೆಱಗಾದಳು||

ಮುಗುಳ್ನಗೆ ಎಂದರೇನು?

ಆಗಸ್ಟ್ ೩೦ ಚರ್ಚಾವೇದಿಕೆ ೨,೩೯೭ ವೀಕ್ಷಣೆ

ಮುಗುಳುನಗೆಯೆಂದರೇನು ನೀ ಕೇಳು ನೋಡಾ ನಗುವಾಗ ಕೋರೆಹಲ್ಗಳ ಮೊಗದೊಳು ತೋಱಿಯುಂ ತೋಱದಿರುವಂತೆ ನಗುವುದ್ದು ಜನರ ಮೋಡಿ ಮಾಡಿ||

ೞ ಮತ್ತು ಳ ನಡುವಿನ ಅರ್ಥವ್ಯತ್ಯಾಸ ಈ ಪದ್ಯ ಅರ್ಥ ಮಾಡಿಕೊಂಡಾಗ

ಆಗಸ್ಟ್ ೩೦ ಚರ್ಚಾವೇದಿಕೆ ೬,೪೧೭ ವೀಕ್ಷಣೆ

ಬಾಳೆಯ ಹೆಜ್ಜೆಯ ನೀರೊಳು ಗುಱುತಿಸುವುದು ಬಾೞೆಹಣ್ಣು ತಿಂದಂತಲ್ಲ ಬಾೞುವಾಗ ನೀತಿಗೆಡದಂತೆ ನಡೆವುದು ಬಾಳಲುಗ ಮೇಲೆ ನಡೆದಂತೆ|| ಈ ಮೇಲಿನ ಪದ್ಯ ೞ ಮತ್ತು ಳ ಕಾರದ ಪದಗಳ ಅರ್ಥವ್ಯತ್ಯಾಸ ಕುಱಿತು ಹೇೞುವ ಸರಳ ಪದ್ಯ.