ಕನ್ನಡಕಂದನ ಪರಿಚಯ
ಚಾಗಕ್ಕೆ ಭೋಗವಕ್ಕರಗೇಯಗ- ಳ್ಗಾಗರದ ಶಿವಮೊಗ್ಗದೆಡೆಯ ಸಾಗರದಿಂ ಕನ್ನಡಕಂದ ತೆಂಕಣ ಭಾಗೀರಥಿನಾಡಿಗೆ ಬಂದ|| ಕನ್ನಡದೇವಿಯ ಸೇವೆಯೊಳು ಸಂಪದವು ಮುನ್ನವೆ ತಾ ತೊಡಗಿರಲು ತನ್ನೆಲ್ಲ ಲೇಖನಗಳ ಸಂಪದದೊಳು ಕನ್ನಡಕಂದ ಬರೆದ|| ತೆಂಕಣಭಾಗೀರಥಿನಾಡು=ಕೊಡಗು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ಚಾಗಕ್ಕೆ ಭೋಗವಕ್ಕರಗೇಯಗ- ಳ್ಗಾಗರದ ಶಿವಮೊಗ್ಗದೆಡೆಯ ಸಾಗರದಿಂ ಕನ್ನಡಕಂದ ತೆಂಕಣ ಭಾಗೀರಥಿನಾಡಿಗೆ ಬಂದ|| ಕನ್ನಡದೇವಿಯ ಸೇವೆಯೊಳು ಸಂಪದವು ಮುನ್ನವೆ ತಾ ತೊಡಗಿರಲು ತನ್ನೆಲ್ಲ ಲೇಖನಗಳ ಸಂಪದದೊಳು ಕನ್ನಡಕಂದ ಬರೆದ|| ತೆಂಕಣಭಾಗೀರಥಿನಾಡು=ಕೊಡಗು
ಉಱ್(ಕ್ರಿಯಾಪದ)=ಇರು, ಸೇರು, ಸರಿಯಾಗಿ ಹೊಂದು/ಕೂಡು. ಒಱೆ ಇದು ಇದಱ ಭಾವನಾಮ. ಕತ್ತಿಯ ಚೀಲ ಎಂಬರ್ಥದಲ್ಲಿ ಒಱೆ ಎಂಬ ಬೞಕೆಯಿದೆ. ಕೈಚೀಲ(gloves) ಮತ್ತು ಕಾಲ್ಚೀಲ(socks)ಗಳಿಗೆ ಕ್ರಮವಾಗಿ ಕೈಯೊಱೆ, ಕಾಲೊಱೆ ಶಬ್ದಗಳನ್ನು ಬೞಸಬಹುದು. ಕ್ರಿಯೆಯಾಗ...
ಎನಿತೆನಿತೊ ಹೆಂಗಳ ಹಲರ ನೋಡಿದರೂ ನಿನಗಿಂತ ಚೆಲುವೆಯರಿಲ್ಲ- ವೆನುತೆನುತಲೋಲೈಸಿ ನುಡಿದೊಡಮೆನ್ನೆಡೆ ಮನದನ್ನೆ ತಿರುಗಿ ನೋಡಳು
ಒಱಲೆ=ಇಱುವೆಯ ತೆಱ ಮರವನ್ನು ತಿನ್ನುವ ಹುೞು. ಗೆದ್ದಲು/ಗೆಜ್ಜಲು ಉದಾಹರಣೆ:- ಒಱಲೆ ಹಿಡಿದ ಮರ ಯಾತಕ್ಕೂ ಬಾರದು.
ಶ್ವಶುರಗೃಹನಿವಾಸೋ ಸ್ವರ್ಗತುಲ್ಯೋ ನರಾಣಾಂ ಯದಿ ಭವತಿ ವಿವೇಕೀ ಪಂಚ ವಾ ಷಡ್ದಿನಾನಿ ದಧಿಮಧುಘೃತಲೋಭಾನ್ಮಾಸಮೇಕಂ ವಸೇಚ್ಚೇತ್ ತದುಪರಿ ದಿನಮೇಕಂ ಪಾದರಕ್ಷಾಪ್ರಯೋಗಃ||
ಒರೆ (ಕ್ರಿಯಾಪದ ಹಾಗು ನಾಮಪದ)= ಧ್ವನಿ, ಹೇೞು, ಉಲಿ ಉದಾಹರಣೆ: ಕನಕದಾಸರ ಹರಿಭಕ್ತಿಸಾರದಲ್ಲಿ ಮಱೆದೆನಭ್ಯುದಯದಲಿ ನಿಮ್ಮನು ಮಱೆಯೆನಾಪತ್ತಿನಲಿ ಪೊರೆಯೆಂ- ದೊರೆಯುವೆನು ಮನಮೇಕಭಾವದೊಳಿಲ್ಲ ನಿಮ್ಮಡಿಯ ಒಱೆ= ಕತ್ತಿ ಅಥವಾ ಇನ್ನಾವುದೇ ಆಯುಧವನ್ನು ಸ...
ಆಶುಕವಿತೆಯ ತನಗೆ ಸುಲಭದಲಿ ಕೊಡನೆಂದು ಈಶನ ಮೇಲೆ ಕಿಡಿಗಾರೇ- ಸೇಸು ತಿಣಿಕಿದರು ಬರದ ಕವಿತೆಯ ಕುಱಿತು ರೋಸಿದನು ಕನ್ನಡಕಂದ
ಓದು=ಓತ=ವಿದ್ಯಾಭ್ಯಾಸ ಚಿಣ್ಣರ ತೋಟ=Kinter gardens ಮೊದಲೋತ(ದು)=ಪ್ರಾಥಮಿಕ ಶಿಕ್ಷಣ ಮೊದಲೋತ(ದು)ದಾಣ= ಪ್ರಾಥಮಿಕಶಾಲೆ ನಡುವೋತ=ಮಾಧ್ಯಮಿಕ ಶಿಕ್ಷಣ ಮೇಲೋತ=ಪ್ರೌಢಶಾಲೆ ಮುಂಬೇರೋತ= ಮುನ್+ಪಿರಿ(ಹಿರಿ)+ಓತ= ಪದವಿಪೂರ್ವ ಶಿಕ್ಷಣ ಹೇರೋತ=ಪದವಿ ಶಿಕ...
ಒದು=ಓದು ಪಠನೇ read ಉದಾಹರಣೆ: ಕುಱಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ ಕರೆಯದಲೆ ಬರುವವನ ಬರೆಯದಲೆ ಓದುವವನ ಬಱಿಗಾಲಲಿ ನಡೆವವನ ಕರೆತಂದು ಕೆರದಲ್ಲಿ ಹೊಡೆಯೆಂದ ಸರ್ವಜ್ಞ|| ಭಾವನಾಮ ಓದು, ಓತ= ಓದುವ ಕ್ರಿಯೆ
ಧನವ ಕೇಳಲಿಲ್ಲ ಕನಕ ಕೇಳಲಿಲ್ಲ ಸಿನಿಮಾ ತೋಱಿಸೆನಲಿಲ್ಲ ಸನಿಹಕೆ ಬಂದಾಗೊಂದೆರಡು ಮಾತಾಡೆಂ- ದೆನುತ ಬಳಿ ಸಾರ್ದಳು ಮಡದಿ
ಕೋಟಿ ಚುಕ್ಕಿಗಳಿದ್ದರೇನಾಗಸದಲ್ಲಿ ಸಾಟಿಯೇ ನಿನ್ನ ಕಂಗಳಿಗೆ ಮಾಟಗಾರ ನಿನ್ನ ಮಾಡಿದ ಬೊಮ್ಮನೆನಲೂ ನೋಟವ ಬೆರಸಳೆನ್ನ ಮಡದಿ :)
Radio waves=ಮೆಲ್ಗದಿರ್. ಇವುಗಳ ತೀಕ್ಷ್ಣತೆ ಕಡಿಮೆಯಿದ್ದು ಅಡ್ಡಬರುವ ಗಾಜು, ಕಾಗದ ಮುಂತಾದ ಸಣ್ಣ ವಸ್ತುಗಳಿಂದ ತಡೆಯಲ್ಪಡುವುದಱಿಂದ ಈ ಹೆಸರು ಮೆಲ್=ಮೆಲ್ಲಿತು, ಮೆಲ್ಲ ಕದಿರ್=ಕಿರಣ. Infrared rays=ಕಿೞ್ಗೆಂಗದಿರ್=ಕಿಗ್ಗೆಂಗದಿರು= ಕೆೞಕೆಂಪ...