ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶಬ್ದಗಳನ್ನು ಸೇರಿಸುವುದು ಹೇಗೆ

ಆಗಸ್ಟ್ ೨೯ ಚರ್ಚಾವೇದಿಕೆ ೭,೦೭೮ ವೀಕ್ಷಣೆ

ಮಾನ್ಯ ಮಿತ್ರರೊಬ್ಬರು ’ೞ’ ಮತ್ತು ’ಱ’ ಕಾರಗಳಿಗೆ ಸಂಬಂಧಿಸಿದಂತೆ ಕೆಲವು ಪದಗಳನ್ನು ಉಚ್ಚರಿಸಿ ಧ್ವನಿಯನ್ನು ಈ ಜಾಲದಲ್ಲಿ ಏಱಿಸಲು ಕೇಳಿಕೊಂಡಿದ್ದರು. ಅದನ್ನು ಮಾಡುವುದಾದರೂ ಹೇಗೆ?

ಪೆಱೆ/ಹೆಱೆ

ಆಗಸ್ಟ್ ೨೮ ಚರ್ಚಾವೇದಿಕೆ ೧,೦೯೬ ವೀಕ್ಷಣೆ

ಪೆಱೆ/ಹೆಱೆ=ಚಂದ್ರ ಕಱಿವೆಱೆ=ಕಪ್ಪು ಚಂದ್ರ, ಅಮಾವಾಸ್ಯೆಯ ಚಂದ್ರ ಎಳವೆಱೆ=ಎಳೆಯ ಚಂದ್ರ, ಅಮಾವಾಸ್ಯೆಯಾಗಿ ತದಿಗೆಯವರೆಗಿನ ಬಾಲಚಂದ್ರ ನೋಡಿನ ತಮಿೞಿನ ’ಮೂನ್ಱಾಂ ಪಿಱೈ’ ಅರೆವೆಱೆ=ಅರ್ಧಚಂದ್ರ, ಸತ್ತವೆ/ಅಟ್ಟವೆಯ ಚಂದ್ರ (ಸಪ್ತಮಿ/ಅಷ್ಟಮಿಯ ಚಂದ್ರ)

ತೊರಡು/ತರಡು, ತೊಱಡು

ಆಗಸ್ಟ್ ೨೮ ಚರ್ಚಾವೇದಿಕೆ ೭,೫೫೯ ವೀಕ್ಷಣೆ

ತರಡು/ತೊರಡು (ನಾಮಪದ)= ಆಡುಭಾಷೆಯಲ್ಲಿ ತಡ್ಡು, ತೊಡ್ಡು, ಸಸ್ತನಿಗಳಲ್ಲಿ ಗಂಡಿನ ವೀರ್ಯವನ್ನು ಹಿಡಿದಿಡುವ ಚೀಲ, ವೃಷಣ ತೊಱಡು=ದೋಟಿ, ತುದಿಯಲ್ಲಿ ಕೊಕ್ಕೆಯಿರುವ ಮರದಿಂದ ಹಣ್ಣು, ಎಲೆ ಉದುರಿಸಲು ಬೞಸುವ ಉದ್ದನೆಯ ಕೋಲು

ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.

ಆಗಸ್ಟ್ ೨೮ ಚರ್ಚಾವೇದಿಕೆ ೨೦,೬೩೨ ವೀಕ್ಷಣೆ

ಇದೊಂದು ನನ್ನ ದುರ್ದೈವ. ಹೞಗನ್ನಡದಲ್ಲಿದ್ದ ೞ, ಱ ಮತ್ತು ನಡುಗನ್ನಡದಲ್ಲಿದ್ದ ಱ ಕುಱಿತು ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಕಿಟ್ಟೆಲ್‍ ಜರ್ಮನಿಯವನಾಗಿ ಈ ವಿಚಾರವಾಗಿ ಸೂಕ್ಷ್ಮವಾಗಿ ನೋಡಿದ ಮೇಲೆ ಬೇಱೊಬ್ಬ...

ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು

ಆಗಸ್ಟ್ ೨೮ ಚರ್ಚಾವೇದಿಕೆ ೧,೧೬೯ ವೀಕ್ಷಣೆ

ಒಂದು=೧ ಒರ್ವರ್, ಒಬ್ಬರ್, ಒಬ್ಬರು ಒಬ್ಬೊಬ್ಬರು ಎನ್ನುವಾಗ ಮಾತ್ರ ಓರೊರ್ವರ್, ಓರೊರ್ಬರ್, ಎರಡು=೨ ಇರ್ವರ್, ಇಬ್ಬರ್, ಇಬ್ಬರು= ಎರಡು ಜನ, ಎರಡು ಮಂದಿ ಇಬ್ಬಿಬ್ಬರು ಎನ್ನುವಾಗ ಈರಿರ್ವರ್, ಈರಿಬ್ಬರ್, ಈರಿಬ್ಬರು, ಇರ್ಪತ್ತು, ಇಪ್ಪತ್ತು=೨೦ ಇರ...

ಮುರಿ, ಮುಱಿ

ಆಗಸ್ಟ್ ೨೭ ಚರ್ಚಾವೇದಿಕೆ ೮೮೩ ವೀಕ್ಷಣೆ

ಮುರಿ(ನಾಮಪದ)=ಒಂದು ಬಗೆಯ ಆಭರಣ. ಮಱಿ (ಕ್ರಿಯಾಪದ)=ತುಂಡಾಗು. ಉದಾ: ರಾಮನು ಪಾಶುಪತಾಸ್ತ್ರವನ್ನು ಮುಱಿದನು. ಕೃದಂತಭಾವನಾಮ: ಮುಱಿತ ಭೂತಕೃದ್ವಾಚಿ: ಮುಱಿದು ಭವಿಷ್ಯತ್ ಕೃದ್ವಾಚಿ: ಮುಱಿವ/ಮುಱಿಯುವ

ಬಱಿ, ಬಱ, ಬಱಡು, ಬಱಿಗು

ಆಗಸ್ಟ್ ೨೬ ಚರ್ಚಾವೇದಿಕೆ ೧,೦೯೦ ವೀಕ್ಷಣೆ

ಬಱಿಗು=ಖಾಲಿ ಮಾಡು. ಬಱಿ=ವ್ಯರ್ಥ ಬಱಡು=ಫಲವಿಲ್ಲದ, ವ್ಯರ್ಥ ಬಱ=ಏನೂ ಸಿಗದ ಕಾಲ, ಕ್ಷಾಮ ಬಱಸಿಡಿಲು=ಮೞೆ ತಾರದ ಬಱಿ ಸಿಡಿಯುವ ಸಿಡಿಲು.

ಪ್ರೀತಿಯ ಬೇಗೆ

ಆಗಸ್ಟ್ ೨೬ ಚರ್ಚಾವೇದಿಕೆ ೧,೨೩೦ ವೀಕ್ಷಣೆ

ಹೊಸದಱಲಿ ನನ್ನವಳ ಪ್ರೀತಿಯಿತ್ತು ಬಿಸಿಯಾಗಿ ಕಡಿಮೆ ಮಾಡಿತ್ತು ಚಳಿ ಹುಸಿಯಾಯ್ತೆನ್ನ ಪ್ರೀತಿ ಸಲಿಗೆಯಾದಂತೆ ಬಿಸಿಯೇಱಿ ಬಿಸಿಲಾಯ್ತೆನ್ನ ಬದುಕು.

ನೀಱೆಯ ವಸ್ತ್ರವೈಖರಿ

ಆಗಸ್ಟ್ ೨೫ ಚರ್ಚಾವೇದಿಕೆ ೧,೪೯೦ ವೀಕ್ಷಣೆ

ಅಂಗನೆಯುಡುವ ಸೀರೆ ಕುಪ್ಪಸ ಪ್ಯಾಂಟು ಷರ್ಟು ಲಂಗ ಕಿಱುಲಂಗ ಱವಕೆಯ ರಂಗಿನ ಚೂಡಿದಾರ ಪಱಕಾಱಗಳಿಗೆ ದಂಗುವಡೆಯವೇಡ ನೀನು||೧|| ತೋಱುವಂತಿರಬೇಕು ತೋಱದಿರಬೇಕು ಸಾಱಬೇಕು ಮೆಯ್ಮಾಟ ಜಾಱಬಾರದು ನೀಱನೋರೆನೋಟವಿದು ನೀಱೆಯ ಜಾಣು ಕಾಣೆಂಬೆ||೨||

ತರಿ, ತಱಿ

ಆಗಸ್ಟ್ ೨೨ ಚರ್ಚಾವೇದಿಕೆ ೮೫೯ ವೀಕ್ಷಣೆ

ತರಿ(ವಿಶೇಷಣ, ನಾಮಪದ)= ನುಣುಪಿಲ್ಲದ, ಒಱಟು, ಉದಾಹರಣೆಗೆ: ನಾನು ಹಿಟ್ಟಿನ ಗಿರಣಿಗೆ ಇಡ್ಲಿಗೆಂದು ಅಕ್ಕಿ ಹಿಟ್ಟು ಮಾಡಿಸಲು ಹೋದಾಗ ಅವನಿಗೆ ಅಕ್ಕಿ ಹುಡಿ ತರಿಯಿರಲಿ. ನುಣ್ಣಗೆ ಬೇಡ ಎಂದು ಹೇೞುತ್ತೇನೆ. ತಱಿ(ಕ್ರಿಯಾಪದ)= ಕತ್ತರಿಸು. ಉದಾಹರಣೆಗೆ:...

ಕುಱಿ, ಗುಱಿ

ಆಗಸ್ಟ್ ೨೨ ಚರ್ಚಾವೇದಿಕೆ ೧,೩೩೫ ವೀಕ್ಷಣೆ

ಕುಱಿ(ಕ್ರಿಯಾಪದ)=ಒಂದನ್ನು ಗಮನದಲ್ಲಿಡು, ಲಕ್ಷ್ಯದಲ್ಲಿಡು. ಉದಾಹರಣೆ: ಕನ್ನಡವನ್ನು ಕುಱಿತು ಮಾತನಾಡು. ಕುಱಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್. ಕುಱಿತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್. ಕುಱಿ=ಗುಱಿ ನಾಮಪದವಾಗಿ ಬೞಸ...

ನಾನಕ ಝರಿ ಕುಱಿತು

ಆಗಸ್ಟ್ ೨೧ ಚರ್ಚಾವೇದಿಕೆ ೬,೨೯೧ ವೀಕ್ಷಣೆ

ಮಾನಿಸರು ಬಿಸಿಲ ಬೇಗೆಯಿಂ ಬೞಲುತಿರೆ ನಾನಕ ಗುರುಗಳು ನೆಱೆನೊಂದು ತಾನೊಂದು ಕಾಲಡಿಯ ಕಲ್ಲ ಸರಿಸಲದು ನಾನಕ ಝರಿಯಾಗಿ ಹೊಮ್ಮಿತು||