ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅರಸು, ಅಱಸು

ಜುಲೈ ೨೮ ಚರ್ಚಾವೇದಿಕೆ ೧,೦೯೬ ವೀಕ್ಷಣೆ

ಅರಸು, ಅರಸ=ರಾಜ, ಒಂದು ದೇಶ ಅಥವಾ ಪ್ರದೇಶವನ್ನು ಆಳುವವನು. ಸ್ತ್ರೀಲಿಂಗ ಅರಸಿ ಅರಸೊತ್ತಿಗೆ=ಅರಸುತನ ಅರಮನೆ=ಅರಸ ವಾಸಿಸುವ ಮನೆ. ಅಱಸು=ಹುಡುಕು ಉದಾಹರಣೆ: ಅರಸನನ್ನಱಸಿ ಹೊಱಟಳರಸಿ.

ಆಱ್ (ಆಱು)

ಜುಲೈ ೨೭ ಚರ್ಚಾವೇದಿಕೆ ೧,೧೬೦ ವೀಕ್ಷಣೆ

ಆಱ್ (ಕ್ರಿಯಾಪದವಾದಾಗ ಎರಡು ಅರ್ಥಗಳು) ೧) ಆಱ್=ಸಮರ್ಥವಾಗು. ಹೊಸಗನ್ನಡದಲ್ಲಿ ಸಾಮಾನ್ಯವಾಗಿ ನಿಷೇಧಾರ್ಥಕವಾಗಿ ಬೞಸಲಾಗುತ್ತಿದೆ. ನಾನು ಬರೆಯಲಾಱೆ(ನು). ಆದರೆ ಹೞಗನ್ನಡದಲ್ಲಿ ಎಲ್ಲಾ ಅರ್ಥಗಳಲ್ಲೂ ಬೞಕೆಯಲ್ಲಿದೆ. ಭೂತಕಾಲದ ರೂಪ: ಆರ್ತೆನ್, ಆರ್ತ...

ತೆರಣಿ

ಜುಲೈ ೨೭ ಚರ್ಚಾವೇದಿಕೆ ೫,೭೩೬ ವೀಕ್ಷಣೆ

ತೆರಣಿ=ರೇಷ್ಮೆಹುೞು ಅಥವಾ ರೇಷ್ಮೆಯಂತೆ ತನ್ನ ಜೊಲ್ಲಿನಿಂದ ನೇಯ್ದು ತನ್ನ ಸುತ್ತಲೇ ಗೂಡು ಕಟ್ಟುವ ಹುೞು. ಉದಾಹರಣೆಗೆ ಈ ಅಕ್ಕಮಹಾದೇವಿಯ ವಚನ ನೋಡಿ: ತೆರಣಿಯ ಹುೞು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆಱನಂತ...

ಅಲ್

ಜುಲೈ ೨೭ ಚರ್ಚಾವೇದಿಕೆ ೧,೧೧೩ ವೀಕ್ಷಣೆ

ಅಲ್ (ಕ್ರಿಯಾಪದ)= ಯೋಗ್ಯವಾಗು, ಸ್ಥಾನದಲ್ಲಿ ಸರಿಯಾಗಿರು. ಇದನ್ನು ’ಇಲ್’ ತೆಱನಾಗಿ ನಿಷೇಧಾರ್ಥಗಳಲ್ಲಿ ಬೞಸುವುದೇ ಹೆಚ್ಚು. ಗಮನಿಸಿ ಅಲ್ಲ=ಅಲ್ಲದು, ಅಲ್ಲವು, ಅಲ್ಲನು, ಅಲ್ಲಳು, ಅಲ್ಲರು, ಅಲ್ಲೆನು, ಅಲ್ಲೆವು, ಅಲ್ಲೆ(ಯ್), ಅಲ್ಲಿರಿ ಇತ್ಯಾದಿಗ...

ಆದಾಯ-ಸಂದಾಯ=ಉೞಿತಾಯ

ಜುಲೈ ೨೬ ಚರ್ಚಾವೇದಿಕೆ ೧,೧೭೪ ವೀಕ್ಷಣೆ

ನಮ್ಮ ದುಡಿಮೆಯ ಸಾಫಲ್ಯ ಈ ಮೂಱು ಪದಗಳ ಸರಿಯಾದ ಅಸ್ತಿತ್ವದ ಮೇಲೆ ನಿಂತಿದೆ. ಸ್ವಲ್ಪ ಭಾಷೆಯ ದೃಷ್ಟಿಯಿಂದ ಇದನ್ನು ವಿಶ್ಲೇಷಿಸೋಣ. ಆದಾಯ:- ಇದು ’ಆಗು’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಇದು ನಮಗೇನಾದರೂ ಸಿಗುವುದಱ ಬಗ್ಗೆ ಹೇೞುತ್ತದೆ. ಅಂದರೆ...

ದುರ್ಜನವಂದನೆ

ಜುಲೈ ೨೬ ಉಲ್ಲೇಖಗಳು ೬೨೦ ವೀಕ್ಷಣೆ

ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಮ್| ಮುಖಪ್ರಕ್ಷಾಲನಾತ್‍ಪೂರ್ವಂ ಗುದಪ್ರಕ್ಷಾಲನಂ ಯಥಾ|| ದುರ್ಜನನನ್ನು ಮೊದಲು ವಂದಿಸಿ ನಂತರ ಸಜ್ಜನನನ್ನು ವಂದಿಸುತ್ತೇನೆ. ಅದು ಹೇಗೆಂದರೆ ಮುಖ ತೊಳೆಯುವ ಮುಂಚೆ ಮುಕುಳಿ ತೊಳೆಯುವಂತೆ ದುರ್ಜನನಿಗೆ ನಮಸ್ಕ...

ಹೆಸರು

ಜುಲೈ ೨೬ ಚರ್ಚಾವೇದಿಕೆ ೨,೦೩೭ ವೀಕ್ಷಣೆ

ಹೆಸರು:

ಇಲ್

ಜುಲೈ ೨೫ ಚರ್ಚಾವೇದಿಕೆ ೧,೦೮೪ ವೀಕ್ಷಣೆ

ಇಲ್=ಇರು (ಕ್ರಿಯಾಪದ) ಸಾಮಾನ್ಯವಾಗಿ ನಿಷೇಧಾತ್ಮಕವಾಗಿ ಬೞಸುತ್ತೇವೆ. ನೀನಿಲ್ಲದೆ (ನೀನಿರದೆ) ನನಗೇನಿದೆ. ಇಲ್ಲ=ಇಲ್ಲದು, ಇಲ್ಲದು, ಇಲ್ಲನು, ಇಲ್ಲಳು, ಇಲ್ಲರು, ಇಲ್ಲೆನು, ಇಲ್ಲೆವು, ಇಲ್ಲೆ(ಯ್), ಇಲ್ಲಿರಿ ಇವೆಲ್ಲದಕ್ಕೂ ಸಾಮಾನ್ಯರೂಪ. ಇಲ್ಲುತ...

ಎೞ್ತು

ಜುಲೈ ೨೫ ಚರ್ಚಾವೇದಿಕೆ ೫,೮೯೧ ವೀಕ್ಷಣೆ

ಎೞ್ತು ಈ ಪದಕ್ಕೆ ಎರಡು ಅರ್ಥಗಳು ೧) ಎೞ್ತು=ಬರಹ, ಅಕ್ಶರ ಪ್ರಾಯಶ: ಎೞೆ=ಬರೆ. ಉದಾಹರಣೆಗೆ ಧಾರವಾಡದ ಕಡೆಯವರು "ಚಿತ್ರ ಎೞಿ (ಎೞೆ) ತಮ್ಮಾ" ಅಂದರೆ "ಚಿತ್ರ ಬರೆ ತಮ್ಮಾ" ಹೋಲಿಸಿ ತಮಿೞಿನ ’ಎೞುತ್ತು’ ೨) ಎೞ್ತು=ಎತ್ತು, ಬಸವ. ಎೞ್ತಿನ ಬಂಡಿ=ಎತ್ತ...

ತಾತ

ಜುಲೈ ೨೫ ಚರ್ಚಾವೇದಿಕೆ ೧,೭೭೮ ವೀಕ್ಷಣೆ

ತಾತ=ತಂದೆ. ಅದು ಯಾಕೋ ಹೇಗೋ ತಾತನ ತಾತ=ಅಜ್ಜ ಎಂದು ಜನ ಬೞಸುತ್ತಾರೆ. ಈ ಪದ್ಯ ನೋಡಿ ತಾತ ಮಕ್ಕಳ ಮಾಱಿದೊಡೆ ನಿಜ- ಮಾತೆ ವಿಷವಿಕ್ಕಿದೊಡೆ ಇಲ್ಲಿ ತಾತ=ತಂದೆ.

ಅಬ್ಬಿ, ಅರ್ಬಿ

ಜುಲೈ ೨೪ ಚರ್ಚಾವೇದಿಕೆ ೧,೬೭೯ ವೀಕ್ಷಣೆ

ಅರ್ಬಿ ಅಥವಾ ಅಬ್ಬಿ= ನೀರಿನ ಜಲಪಾತ. ನೀರು ಮೇಲಿನಿಂದ ಧುಮ್ಮಿಕ್ಕುವಾಗ ಈ ಅಬ್ಬಿಗಳು ಉಂಟಾಗುತ್ತವೆ. ಹೋಲಿಸಿ ಹೞಗನ್ನಡದ ಅರ್ಬಿ ಹಾಗೂ ತಮಿೞಿನ ಅರುವಿ

ಪೊಳೆ, ಪೊೞೆ, ಹೊಳೆ, ಹೊೞೆ

ಜುಲೈ ೨೪ ಚರ್ಚಾವೇದಿಕೆ ೧,೨೪೫ ವೀಕ್ಷಣೆ

ಪೊಳೆ(ಹೊಳೆ)=ಮಿಱುಗು, ಪ್ರಕಾಶಿಸು. ಪೊೞೆ(ಹೊೞೆ)=ನದಿ, ತೊಱೆ, ನದಿ/ತೊಱೆಯಾಗಿ ಹರಿ ಉದಾಹರಣೆ:- ಮೞೆಯೆಲ್ಲಾ ಹೊೞೆಯಾಗಿ ಹರಿದಿತ್ತು. ಹುಲ್ಲಿನ ತುದಿಯಲ್ಲಿ ಹತ್ತಿದ್ದ ಹೊೞೆಯ ನೀರು ಮುತ್ತಿನಂತೆ ಹೊಳೆಯುತ್ತಿತ್ತು.