ಮತ್ತೆರುವ ಮಧುವಿದೆ...
ಮತ್ತೇರುವ ಮಧುವಿದೆ ಸೌಂದರ್ಯದ ಸುಧೆಯಲಿ...! ಯಾರೂ ಅರಿಯದಿರುವ ತೊರೆಯ ಬದಿಯ ಮರದ ಮರೆಯಲಿ, ನನ್ನ ನಿನ್ನ ಮಧುರವಾದ ಅದರಕಧರ ಬೆರೆಯಲಿ...! -ಮಾಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮತ್ತೇರುವ ಮಧುವಿದೆ ಸೌಂದರ್ಯದ ಸುಧೆಯಲಿ...! ಯಾರೂ ಅರಿಯದಿರುವ ತೊರೆಯ ಬದಿಯ ಮರದ ಮರೆಯಲಿ, ನನ್ನ ನಿನ್ನ ಮಧುರವಾದ ಅದರಕಧರ ಬೆರೆಯಲಿ...! -ಮಾಲು
ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಬಸಿದ ಮಧುವನು ಕಸಿದು ಬಾಳ ಬಿಸಿ ಮಾಡು ಬಾ...! ಇಂದು ಇಂದಿಗೆ ನಲ್ಲ ನಾಳೆ ಎಂಬದು ಸಲ್ಲ ಬೆಸೆದು ಎದೆಯನೆದೆಗೆ ಬಾಳ ಹಸಿರಾಡು ಬಾ...! -ಮಾಲು
ಹೊಟ್ಟೆಗೆ ಹಿಟ್ಟು ಎಷ್ಟು ಮುಖ್ಯವೋ, ತಿಳಿದುಕೊ ಹುಡುಗಾ... ನಿನಗೆ ಅಷ್ಟೇ ಮುಖ್ಯ ಜುಟ್ಟಿಗೆ ಮಲ್ಲಿಗೆ ಮುಡಿವ ಹೆಣ್ಣಿನ ಸಖ್ಯ...! -ಮಾಲು
ಹುಡುಗಾ, ನನ್ನ ಮುಖ ತಿದ್ದಿ ತೀಡಬೇಕಿದೆ...! ನಿನ್ನ ಎದೆ ಸ್ವಲ್ಪ ಬೇಕಿದೆ...! ಏಕೆಂದರೆ, ಅಪ್ಪಟ ಕನ್ನಡಿಗನ ಎದೆಯಲ್ಲಿ ಕನ್ನಡಿ ಇದೆ...! -ಮಾಲು
ಹುಡುಗಾ, ದಾಹವನು ಇಂಗಿಸಲು ನೀರು ಬೇಕು... ಮನದ ಮೋಹವನು ಭಂಗಿಸಲು ನೀನು ಬೇಕು...! -ಮಾಲು
ಭಂಡ... ಇವನು ನನಗೆ ಮುತ್ತು ಕೊಡಲು ಹೇಗೊ ನಿಭಾಯಿಸಿದ...! ಮುತ್ತು ಕೊಟ್ಟ ನಂತರ 'ಮದುವೆಯಾಗೋ' ಎಂದೆ, ಇವನ ಅಪ್ಪ ಅಮ್ಮ ಒಪ್ಪಲಿಲ್ಲ ಎಂದು ದಬಾಯಿಸಿದ...! -ಮಾಲು
ನನ್ನ ಬಿಗಿದಪ್ಪಬೇಕು ಅನ್ನುವವರು ಹಲವರು...! ಅವರಲ್ಲಿ, ನನ್ನ ಬಿಗಿದಪ್ಪಲು ಅವರವರ ಅಮ್ಮ ಮತ್ತು ಅಪ್ಪನನ್ನು ಕೇಳಬೇಕು ಅನ್ನುವವರು ಕೆಲವರು...! -ಮಾಲು
ತಿಳಿದಿದೆಯ ಗೆಳೆಯಾ! ಗಿಳಿ ಕೋಕಿಲ ದನಿಯ ತಿಳಿನೀರಿನ ಸೆಲೆಯ ಮಧು ಸುರಿಯುವ ನೆಲೆಯ ಮೃದು ವೀಣೆಯ ನುಡಿಯ ಮುದನೀಡಲು ನಮಗೆ ಕದ ತಟ್ಟುವುದೆಂದು ಹದವಾಗಿಹ ಹರೆಯ ಮದ ಮಿಡಿಯುವ ಮದನ ಹಿಡಿದಿಟ್ಟಿಹ ಪರಿಯ! -ಮಾಲು
ಪ್ರಿಯಾ, ಮತ್ತೆ ಮತ್ತೆ ನಿನಗೆ ಮತ್ತೇರಿಸುವ ಮಧುವಾಗಲೆ?! ಅಥವಾ... ಹಸೆಮಣೆಯ ಹತ್ತಿ ನಿನ್ನ ಕೈ ಹಿಡಿವ ವಧುವಾಗಲೇ?! -ಮಾಲು
ಹೌದು, ಅವನೂ ನನ್ನವನೆ! ಆದರೆ ಅಲ್ಲೆಲ್ಲೋ ಇದೆಯಲ್ಲ ಅವನ ಮನೆ! -ಮಾಲು ('ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್' ಆಧಾರ)
ಪ್ರಶ್ನೆ...! ಹುಡುಗಾ,ಹಲವರ ಕವಿತೆಗಳಲ್ಲಿ ಕಾಮ ಇರುವುದಿಲ್ಲ... ನಾನು ಕವಿತೆ ಬರೆಯುವಾಗ ಅದರಲ್ಲಿ ಕಾಮ ಬೇಕೇ ಬೇಡವೆ?!-ಮಾಲು
ನನ್ನವ... ಅಲ್ಲಿ ಸಿಕ್ಕಿದವ ಕಣ್ಣಲ್ಲಿ ಮಾತನಾಡಿದ, ಅರ್ಥವಾಗುತ್ತದೆ...! ಜೊತೆಗೆ ಅವನು ಕನ್ನಡದಲ್ಲಿ ಮಾತನಾಡದಿದ್ದರೆ, ವ್ಯರ್ಥವಾಗುತ್ತದೆ...! -ಮಾಲು