ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

-ಯಾರಿವರು?!

ಮಾರ್ಚ್ ೦೬ ಕವನ ೪೦೧ ವೀಕ್ಷಣೆ

-ಯಾರಿವರು?! ಹೀಗೆಯೆ ಇವರೆಲ್ಲರು! ನೀರಿನಂತೆ ಹರಿಯುವರು - ಒಡಲ ಬೇಗೆ ತಣಿಸುವರು ಪೈರಿನಂತೆ ಬೆಳೆಯುವರು-ಹೂವಿನಂತೆ ಮೆಲ್ಲನರಳಿ ಪರಿಮಳವನು ಕೊಡುವವರು; ಹೀಗೆಯೇ ಇವರೆಲ್ಲರು! ಗಾಳಿಯಂತೆ ತೇಲುವರು -ಕಡಲಿನಂತೆ ಮೊರೆಯುವರು ರವಿಯ ತೆರದಿ ಬೆಳಗುವರು-ಇ...

ಕಾಯಿ...

ಮಾರ್ಚ್ ೦೪ ಕವನ ೩೩೨ ವೀಕ್ಷಣೆ

ಕಾಯಿ... "ನಿನಗೂ ಒಬ್ಬ ಹುಡುಗ ಬರುತ್ತಾನೆ, ಕಾಯಿ" ಎಂದಳು ತಾಯಿ; ಬರಲಿಲ್ಲ ಅವನು... ಹಣ್ಣಾದರೂ ಇಲ್ಲಿದ್ದ ಒಗರಾದ ಮಿಡಿ ಮಾವಿನ ಕಾಯಿ... -ಮಾಲು

ಅರಿಯಲಿಲ್ಲ...ಅದರ ಪರಿವೆಯಿಲ್ಲ

ಮಾರ್ಚ್ ೦೩ ಕವನ ೨೮೧ ವೀಕ್ಷಣೆ

ನನ್ನ-ನೀನು ನಿನ್ನ-ನಾನು ಅರಿಯಲಿಲ್ಲ... ಅದರ worryಯಲ್ಲಿ, ನಲ್ಲ... ನಮ್ಮ ಈ ಒಲವನ್ನು ನಾವು ಇರಿದೆವಲ್ಲ....ಎಂಬುದರ ಪರಿವೆ ಇಲ್ಲ... -ಮಾಲು

......ಗೆ

ಮಾರ್ಚ್ ೦೨ ಕವನ ೩೬೭ ವೀಕ್ಷಣೆ

......ಗೆ ಅಮೆ ರಾತ್ರಿಯ ಅಂಬರದ ಅಮಿತ ತಾರ ಲೋಕ ತಲದಿ ಸುಮ ಕೋಮಲೆ ನಿನ್ನ ಕರವ ಪಿಡಿಯ ಬಯಸುವೆ! ಕಮಲದೆಸಳ ನಿನ್ನ ತುಟಿಯ ಸವಿಯ ಬಯಸುವೆ! ದುಃಖ ದುಮ್ಮಾನವಿರದ ಸುಖವೊಂದೇ ಮೆರೆಯುತಿರುವ ನಾಕ ಸಮ ಲೋಕದಲ್ಲಿ ಬಾಳ ಬಯಸುವೆ! ಸಖಿ ಅಲ್ಲಿ, ನಿನ್ನೊಳ ರಾಜ...

ಹಲವು ಜನುಮದ ನೆಂಟು...

ಮಾರ್ಚ್ ೦೧ ಕವನ ೩೦೨ ವೀಕ್ಷಣೆ

ನಿನ್ನ ಈ ಚೆಲುವಲ್ಲ ನಿನ್ನೆದೆಯ ಒಲವಲ್ಲ ಚೆನ್ನ, ನಿನ್ನೆಡೆಗೆ ನನ್ನ ಸೆಳೆದಿರುವುದು! ನಮ್ಮಿಬ್ಬರೊಳು ಉಂಟು ಹಲವು ಜನುಮದ ನೆಂಟು ಇದುವೆ ನಿನ್ನೊಳು ನನ್ನ ಸೆರೆ ಹಿಡಿದಿರುವುದು! -ಮಾಲು

ನಮ್ಮ ದೇಶ ಭಾರತ...

ಫೆಬ್ರ ೨೮ ಕವನ ೭,೩೮೯ ವೀಕ್ಷಣೆ

-ಮಾಲು ನಮ್ಮ ದೇಶ ಭಾರತ... ವಿವಿಧ ವೇಷ ವಿವಿಧ ಭಾಷೆ ನಮ್ಮದೆಂದು ಸಾರುತಾ... ಕನ್ನಡ ನಾಡಲ್ಲೆ ಮಡಿವೆ, ಮಾತೆ ಭುವನೇಶ್ವರಿಯ ಕನ್ನಡವನು ಆಡುತಾ... -ಮಾಲು

ಪ್ರೇಮಾಲಾಪ...

ಫೆಬ್ರ ೨೬ ಕವನ ೬೮೬ ವೀಕ್ಷಣೆ

-೧- ಪ್ರಿಯಾ, ನೀ ನುಡಿಯುವ ಮಾತೆಲ್ಲವು ಒಲವಿನ ಹಾಡಾಗಲಿ... ನನ್ನೆದೆ ವೀಣೆಯು ಆ ಹಾಡನು ಮಿಡಿಯುವ ಹಾಗಾಗಲಿ... -ಮಾಲು -೨- ಪ್ರಿಯಾ,ನಿನ್ನ ದುಗುಡದಾ ಬಿಡುಗಡೆಯು ನೀ ಕುಡಿವ ಸುರೆಯಲ್ಲಿದೆ!ನನ್ನ ಮೋಹದಾ ಬಿಡುಗಡೆಯು ನಿನ್ನ ತೊಳ್ಸೆರೆಯಲ್ಲಿದೆ! -ಮ...

ಹನಿ...

ಫೆಬ್ರ ೨೬ ಕವನ ೪೬೧ ವೀಕ್ಷಣೆ

ಚೆನ್ನಿರದು ಕೊಳವು ನೀರಿರದಿದ್ದರೆ... ಅಂತೆಯೇ...ನಾ ಗೆಳೆಯ ನೀನಿರದಿದ್ದರೆ -ಮಾಲು

ಅನಿವಾರ್ಯತೆ

ಫೆಬ್ರ ೨೪ ಕವನ ೩೩೪ ವೀಕ್ಷಣೆ

'ಕಣ್ಣಲ್ಲಿ ನೀರೇಕೆ, ನಿನ್ನ ತವರಿನ ನೆನಪೆ?' ಇವ ನನ್ನವ ಕೇಳಿದ್ದ... ಇಲ್ಲವೆನ್ನಲು ನೆಪ ಸಿಗದೆ ಹೌದೆಂದೆ... ಏಕೆಂದರೆ ಇವನ ಮನೆಯಲ್ಲಿ ಈರುಳ್ಳಿ ನಿಷಿದ್ಧ. -ಮಾಲು

ಹಸಿರಾಡಿಸಿ ಹೂವರಳಿಸಿ...

ಫೆಬ್ರ ೨೪ ಕವನ ೩೨೯ ವೀಕ್ಷಣೆ

ಹಸಿರಾಡಿಸಿ ಹೂವರಳಿಸಿ ಹದ ಮಾಡಿಸಿ ಎದೆಯ ಜೊತೆಗೂಡಿಸಿ ಹೊಸ ಹಾಡಿಗೆ ಗಿಳಿ ಕೋಕಿಲ ಉಲಿಯ... ಕಾಲಿಟ್ಟಿದೆ ಕದ ತಟ್ಟಿದೆ ಹಸನಾಗಿಹ ಹರಯ; ನಲಿವೊಂದನೆ ಹರಿಸುವ ಬಾಳೆಂಬುವ ತೊರೆಯ ತುಂಬಲು ತಾ ಸೆಲೆಯೊಂದನು ನನ್ನೊಲವಿನ ಗೆಳೆಯ. -ಮಾಲು

ಕೃತಘ್ನ

ಫೆಬ್ರ ೨೨ ಕವನ ೬೦೬ ವೀಕ್ಷಣೆ

ನನ್ನ ಕಂಡರೆ ಇವನಿಗೆ ಮಹಾ ಪ್ರಾಣ, ಇದು ಇವನ ಮನೆಯವರ ವಾದ; ಅದಕ್ಕಾಗಿಯೆ ಇವನು ನನಗೆ ಕೃತಜ್ಞನಾಗದೆ ಕೃತಘ್ನನಾದ -ಮಾಲು

ಹನಿ...

ಫೆಬ್ರ ೨೧ ಕವನ ೪೪೫ ವೀಕ್ಷಣೆ

ನಿನ್ನ ಪಡೆಯಲೆಂದು ನಾನು ಉಂಡ ನೋವು ನೂರು ಹರಕೆ ಹೊತ್ತು ಅಲ್ಲಿ ಎಳೆದೆ ಹಲವು ತೇರು... ಅದಕೆ ಈಗ, ಗೆಳೆಯ ಸುರಿಯುತಿಹುದು ಕಣ್ಣು ನೀರು -ಮಾಲು