ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸ್ವಗತ...

ಮಾರ್ಚ್ ೩೦ ಕವನ ೫೨೪ ವೀಕ್ಷಣೆ

ಸ್ವಗತ... ಶ್ರುತಿ ಇಲ್ಲದ ಹಾಡು ನಾನು ತಪ್ಪಲಿ ಬಿಡು ತಾಳ... ಇರುವ ನೋವು ತೊಡೆವ ಸಾವು ಅಪ್ಪಲಿ ಬಿಡು ಬಾಳ... -ಮಾಲು

ಚಿಂತೆ...

ಮಾರ್ಚ್ ೨೯ ಕವನ ೮೪೫ ವೀಕ್ಷಣೆ

ಚಿಂತೆ... 'ಮಗಳೀಗೆ ಒಂದು ಒಳ್ಳೆ ವರ ಸಿಗಲಿಲ್ವಲ್ಲ' ಅನ್ನೋದು ನನ್ನ ಚಿಂತೆ...! 'ಟೀವಿಲ್ಲಿ ಹಾಡೋದಕ್ಕೆ ನನ್ಗೆ ಒಳ್ಳೆ ಸ್ವರ ಇಲ್ವಲ್ಲ' ಅನ್ನೋ ಚಿಂತೆ ಇವನಿಗಂತೆ...! -ಮಾಲು

ಇಷ್ಟೇ ವ್ಯತ್ಯಾಸ!

ಮಾರ್ಚ್ ೨೮ ಕವನ ೪೯೮ ವೀಕ್ಷಣೆ

ಇಷ್ಟೇ ವ್ಯತ್ಯಾಸ! ಇವನು ಭಾಷಣ ಮಾಡಬೇಕಂತೆ... ಅಲ್ಲಿ ಒಂದು ದೊಡ್ಡ ಹಾಲ್ ಹುಡುಕುತ್ತಿದ್ದಾನೆ! ಇವನು ಭಾಷಣ ಮಾಡುವಾಗ ಇವನಿಂದ ದೂರವಿದ್ದು ಓಡಾಡಿಕೊಂಡು ಬರಲು ಇಲ್ಲಿ ಒಂದು ದೊಡ್ಡ ಮಾಲ್ ಹುಡುಕುತ್ತಿದ್ದೇನೆ! -ಮಾಲು

ಸೇಡು...!

ಮಾರ್ಚ್ ೨೭ ಕವನ ೪೯೦ ವೀಕ್ಷಣೆ

ಸೇಡು...! ನಿನ್ನೆ ನಾನು ಒಂದು ಸಣ್ಣ ತಪ್ಪು ಮಾಡಿದ್ದೆ, ಇವನಿಂದ ಅದಕ್ಕೆ ಮಾಫಿ ಸಿಗಲಿಲ್ಲ...! ಸೇಡು ತೀರಿಸಿಕೊಂಡೆ, ಇವನಿಗೆ ದಿನವೆಲ್ಲಾ ನನ್ನಿಂದ ಒಂದೇ ಒಂದು ಕಪ್ಪು ಕಾಫಿ ಸಿಗಲಿಲ್ಲ...! -ಮಾಲು

ವ್ಯತ್ಯಾಸ

ಮಾರ್ಚ್ ೨೫ ಕವನ ೧,೦೪೪ ವೀಕ್ಷಣೆ

ವ್ಯತ್ಯಾಸ ನನಗೋ...ಮನೆಯಲ್ಲಿ ಆಳುಕಾಳು ಮತ್ತು ಬಿಳೀ ಕಾರಿರಬೇಕು....! ಇವನಿಗೋ...ತಟ್ಟೆಯಲ್ಲಿ ಬೇಳೆ ಕಾಳು ಮತ್ತು ತಿಳೀ ಸಾರಿರಬೇಕು...! -ಮಾಲು

ಎರಡು ಹನಿಗಳು...

ಮಾರ್ಚ್ ೨೪ ಕವನ ೮೮೮ ವೀಕ್ಷಣೆ

ಎರಡು ಹನಿಗಳು... ಕೊಳಲ ನುಡಿಸಿ ಮೋಹಗೊಳಿಸಿ ಪಡೆದನಲ್ಲ ರಾಧೆಯ ಆ ತುಂಟನಾದ ಗೊಲ್ಲ...! ಯಾರೋ ಬರೆದ ಹಾಡಿಗೆ ಕೊರಳ ಕೊಟ್ಟು ಹಾಡಿ ಮತ್ತೆ ಮೋಡಿ ಮಾಡಿ ಪಡೆದ ನನ್ನ ನಲ್ಲ ನನ್ನ ತುಟಿ ಮತ್ತು ಗಲ್ಲ...! **** ಆ ಶ್ಯಾಮನಲ್ಲಿ ರಾಮನಿರುವನೋ ಇಲ್ಲವೋ ತಿ...

ಕಾರಣ...

ಮಾರ್ಚ್ ೨೧ ಕವನ ೬೬೫ ವೀಕ್ಷಣೆ

ಕಾರಣ... ಹುಡುಗಾ, ಹೇಳಬೇಕೆಂದಿದ್ದೆ ಏನೊ ನಿನ್ನೊಡನೆ ಆಗ! ಆಗಲೇ ಇಲ್ಲ ನೋಡು... ಮೊದಲೇ ಎದೆ ಬಡಿತದ ವೇಗ ! ಜೊತೆಗೆ... ನನ್ನ ತುಟಿಗೆ ತುಟಿಯ ತಗುಲಿಸಿ ಹಾಕಿದ್ದೆ ನೀನು ಬೀಗ...! -ಮಾಲು

ಒಂದೇ ಒಂದು ಕಾರಣ...

ಮಾರ್ಚ್ ೨೦ ಕವನ ೨೯೯ ವೀಕ್ಷಣೆ

ಒಂದೇ ಒಂದು ಕಾರಣ... ಕೊರಳ ಹಿಡಿದ ಇವನ ಕೈ ನನ್ನ ಪ್ರಾಣ ಹಿಂಡದೆ ಸ್ವಲ್ಪ ಸಡಿಲಗೊಂಡಿದೆ... ಇದಕೆ ಒಂದೇ ಒಂದು ಕಾರಣ- ದುಡಿದುಕೊಡುತಿರುವ ನನ್ನ ಹೊನ್ನು ಇವನ ಜೇಬು ತುಂಬಿದೆ... -ಮಾಲು

-ತಟ್ಟೀತು ಶಾಪ...

ಮಾರ್ಚ್ ೧೭ ಕವನ ೩೪೦ ವೀಕ್ಷಣೆ

-ತಟ್ಟೀತು ಶಾಪ... ಕಗ್ಗಲ್ಲ ಬಂಡೆಗಳಿಗೇಕೆ ಮೊಗ್ಗಿನಾ ಬಯಕೆ? ಮುಸುಕಿನಲಿ ಬಂದದನು ಹೊಸಕಿ ಹಾಕುವುದೇಕೆ? ಬೇಲಿಯಂತಿರುವವರೆ ಒಳನುಗ್ಗಿ ಕೇಲಿ ಬಯಸುವುದೇಕೆ? ಅರಳಿ ಹೂವಾಗಲಿ ಬಾಲೆ; ತಟ್ಟೀತು ಶಾಪ ಸುಟ್ಟೀತು ನಿಮ್ಮನ್ನೆ ಮುಟ್ಟದಿರಿ ಅವಳನ್ನು, ಜೋಕೆ...

ತಾಳಿ...

ಮಾರ್ಚ್ ೧೬ ಕವನ ೪೩೪ ವೀಕ್ಷಣೆ

ತಾಳಿ... ಮರುಳಾ... ಕತ್ತಿಗೆ ಕಟ್ಟುವ ತಾಳಿ ಕೆಲವರಿಗೆ ವರವಾಗಿದೆ ಸುಮಧುರ ಸ್ವರವಾಗಿದೆ... ಬಯಸಿದ ಬಾಳಿನ ಹಾಡಿಗೆ ಕೋಕಿಲ ಕೊರಳಾಗಿದೆ... ಆದರೆ...ಕೆಲವರಿಗೆ ತಡೆಯದ ಹೊರೆಯಾಗಿದೆ ಇಂಚಿಂಚಾಗಿ ಬಿಗಿಹಿಡಿದು ಪ್ರಾಣವ ತೆಗೆಯುವ ಉರುಳಾಗಿದೆ... -ಮಾಲ...

'ಪೂರ್ಣ ಮಧಃ ಪೂರ್ಣ ಮಿದಂ'

ಮಾರ್ಚ್ ೧೪ ಕವನ ೬೮೮ ವೀಕ್ಷಣೆ

'ಪೂರ್ಣ ಮಧಃ ಪೂರ್ಣ ಮಿದಂ' ನೀನನಂತ ನೀನಿತ್ತ ಮನ ಅನಂತ ಅಂತವಿರದ ದಿಗಂತವೂ ಅನಂತವು... ತಳೆವ ಬೆಳೆವ ಅಳಿವ ಮತ್ತೆ ತಳೆದು ಉಳಿವ ನಾವು ನಿನ್ನ ಸುಳಿವ ಅರಿವ ಆ ಛಲವೂ ಅನಂತವು....! -ಮಾಲು

ಇಹ-ಪರ

ಮಾರ್ಚ್ ೦೮ ಕವನ ೫೦೯ ವೀಕ್ಷಣೆ

ಇಹ-ಪರ ಇದ್ದಕಿದ್ದಂತೆ ನನ್ನವನಿಗೆ ಪರಲೋಕದ ಚಿಂತೆ!ಆತ್ಮ ಪರಮಾತ್ಮನಲ್ಲಿ ಲೀನ.... ಎಂಬುದರ ಬಗ್ಗೆ ದಿನವೆಲ್ಲಾ ಅವರಿವರೊಡನೆ ಮಾಡಿದ್ದ ವಾದ! ಕೊನೆಗೆ ಬಳಲಿ ಬೆಂಡಾದ...! ಮನೆಗೆ ಬಂದ, ಇಹಲೋಕದಲ್ಲಿನ ಅಂದವಾದ ನನ್ನ ಅಂಗ ಸಂಗದ ಅನಂಗ ರಂಗದಲ್ಲಿ ತಲ್ಲ...